ಚಾಮರಾಜನಗರದಲ್ಲಿ 30 ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು: ಕೊರೊನಾ ಕರ್ಫ್ಯೂ ವೇಳೆ ಸಿಬ್ಬಂದಿ ಕೊರತೆ!

ಜಿಲ್ಲೆಯ 30 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಅಂಟುಕೊಂಡಿದ್ದು, ಸದ್ಯ ಅವರೆಲ್ಲರೂ ಕ್ವಾರಂಟೈನ್​​​ನ​ಲ್ಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ತಿಳಿಸಿದ್ದಾರೆ.
ಪೊಲೀಸರು
ಪೊಲೀಸರು

ಚಾಮರಾಜನಗರ: ಜಿಲ್ಲೆಯ 30 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ಅಂಟುಕೊಂಡಿದ್ದು, ಸದ್ಯ ಅವರೆಲ್ಲರೂ ಕ್ವಾರಂಟೈನ್​​​ನ​ಲ್ಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ತಿಳಿಸಿದ್ದಾರೆ.

ಕೋವಿಡ್ ಕರ್ಫ್ಯೂ ಪರಿಶೀಲನೆಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 30 ಮಂದಿ ಸೋಂಕಿತರು ಸೇರಿ ಪ್ರಾಥಮಿಕ ಸಂಪರ್ಕಿತರು ಕೂಡ ಕ್ವಾರಂಟೈನ್​​​ನಲ್ಲಿದ್ದು, ಸಿಬ್ಬಂದಿ ಕೊರತೆ ಎದುರಾಗಿದೆ ಎಂದರು.

ಪ್ರಸ್ತುತ ಹೆಚ್ಚಿನ ಹೋಂ ಗಾರ್ಡ್ಸ್​​ಗಳ ಅವಶ್ಯಕತೆವಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದೇನೆ ಎಂದರು.

ಜಿಲ್ಲೆಯಲ್ಲಿ 22 ಅಂತಾರಾಜ್ಯ ಹಾಗೂ ಅಂತರ ತಾಲೂಕು ಚೆಕ್ ಪೋಸ್ಟ್​ಗಳಿದ್ದು, ಎಲ್ಲಾ ಕಡೆ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ. ಇನ್ನು, ಕಂದಾಯ ಇಲಾಖೆ ಮತ್ತು ವೈದ್ಯಕೀಯ ಸಿಬ್ಬಂದಿ ಅಗತ್ಯವಿದೆ ಎಂದು ಅವರು ಮಾಹಿತಿ ನೀಡಿದರು.

ಕಳೆದ 3 ದಿನಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದವರ ವಿರುದ್ಧ ಒಟ್ಟು 80 ಎಫ್​ಐಆರ್​ ದಾಖಲಿಸಲಾಗಿದೆ. ಸುಖಾಸುಮ್ಮನೆ ರಸ್ತೆಗಳಿದ ವಾಹನಗಳನ್ನು ಜಪ್ತಿ ಮಾಡಿ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ತುರ್ತು ಪರಿಸ್ಥಿತಿಯನ್ನು ಅರಿತು ಅನಗತ್ಯ ಸಂಚಾರ ಮಾಡಬಾರದು‌ ಎಂದು ಅವರು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com