ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋವಿಡ್-19 ಮರಣ ಪ್ರಮಾಣ ತಗ್ಗಿಸಿದ ಲಸಿಕೆ: ಬೆಂಗಳೂರು ಆಸ್ಪತ್ರೆ ವರದಿ

ನಗರದಲ್ಲಿ COVID-19 ಸೋಂಕುಗಳ ಪ್ರಗತಿಯ ಹೊರತಾಗಿಯೂ ಸಿಲಿಕಾನ್ ಸಿಟಿಯಲ್ಲಿ ಕೋವಿಡ್-19 ಮರಣ ಪ್ರಮಾಣ ತಗ್ದಿದ್ದು ಇದಕ್ಕೆ ಕೋವಿಡ್ ಲಸಿಕೆಗಳು ಕಾರಣ ಎಂದು ಹೇಳಲಾಗಿದೆ.

ಬೆಂಗಳೂರು: ನಗರದಲ್ಲಿ COVID-19 ಸೋಂಕುಗಳ ಪ್ರಗತಿಯ ಹೊರತಾಗಿಯೂ ಸಿಲಿಕಾನ್ ಸಿಟಿಯಲ್ಲಿ ಕೋವಿಡ್-19 ಮರಣ ಪ್ರಮಾಣ ತಗ್ದಿದ್ದು ಇದಕ್ಕೆ ಕೋವಿಡ್ ಲಸಿಕೆಗಳು ಕಾರಣ ಎಂದು ಹೇಳಲಾಗಿದೆ.

ಈ ಬಗ್ಗೆ ಅಪೊಲೊ ಆಸ್ಪತ್ರೆ ಸಮೂಹ ನಡೆಸಿದ ಅಧ್ಯಯನದಲ್ಲಿ ಮಹತ್ವದ ಅಂಶಗಳು ಕಂಡುಬಂದಿದ್ದು, ಕೋವಿಡ್ ಲಸಿಕೆಗಳು ಮರಣ ಪ್ರಮಾಣ ತಗ್ಗಿಸುವಲ್ಲಿ ಮಹತ್ವದ ಪಾತ್ರವಹಿಸಿದೆ ಎನ್ನಲಾಗಿದೆ.  ಈ ಅಧ್ಯಯನವನ್ನು ಅಪೋಲೊ ಆಸ್ಪತ್ರೆ ಸುಮಾರು 500 ರೋಗಿಗಳ ಮೇಲೆ ಏಪ್ರಿಲ್ 21 2021 ಮತ್ತು 30 ಮೇ 2021 ರ ನಡುವೆ 40 ದಿನಗಳವರೆಗೆ ನಡೆಸಿದೆ.  

ಆಸ್ಪತ್ರೆಗೆ ಸೇರುವ ಮೊದಲು 148 ರೋಗಿಗಳಿಗೆ ಕನಿಷ್ಠ ಒಂದು ಡೋಸ್ ಲಸಿಕೆ ಹಾಕಲಾಗಿತ್ತು. ಈ ಪೈಕಿ 14 ಮಂದಿ ರೋಗಿಗಳು ಎರಡೂ ಡೋಸ್ ಪಡೆದಿದ್ದರು. ಬಹುಪಾಲು ಲಸಿಕೆ ಪಡೆದ ರೋಗಿಗಳು (ವಿಪಿ) ಪೈಕಿ  124 ಮಂದಿ ಕೋವಿಶೀಲ್ಡ್ ಪಡೆದರೆ 24 ಮಂದಿ ಕೊವಾಕ್ಸಿನ್ ಲಸಿಕೆ ಪಡೆದಿದ್ದರು. 

"148 ಲಸಿಕೆ ಪಡೆದ ರೋಗಿಗಳಲ್ಲಿ 29  ಮಂದಿಯ ಆರೋಗ್ಯವನ್ನು ಲಸಿಕೆ ಪಡೆಯದ 352 ಮಂದಿಯ 125 ಮಂದಿ ರೋಗಿಗಳ ಆರೋಗ್ಯದೊಂದಿಗೆ ಹೋಲಿಕೆ ಮಾಡಿ ನೋಡಲಾಗಿತ್ತು. ಅದರಂತೆ ಲಸಿಕೆ ಪಡೆದವರಿಗಿಂತಲೂ ಲಸಿಕೆ ಪಡೆಯದ ರೋಗಿಗಳು ಆಸ್ಪತ್ರೆಗೆ ದಾಖಲಾದಾಗ ಅವರಲ್ಲಿನ ಸೋಂಕು ತೀವ್ರತೆ ಹೆಚ್ಚಿತ್ತು, ಇದೇ ಪ್ರಮಾಣ ಲಸಿಕೆ ಪಡೆದವರಲ್ಲಿ ಗಣನೀಯವಾಗಿ ಕಡಿಮೆ ಇತ್ತು.  ಲಸಿಕೆ ಪಡೆದ 66 ಮಂದಿಗೆ ಮಾತ್ರ ಕೃತಕ ಉಸಿರಾಟದ ಅವಶ್ಯಕತೆ ಇತ್ತು. ಆದರೆ ಲಸಿಕೆ ಪಡೆಯದ 199ಗೆ ಕೃತಕ ಉಸಿರಾಟದ ಅವಶ್ಯಕತೆ ಇತ್ತು ಎನ್ನಲಾಗಿದೆ.  

ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ 51 ಮಂದಿಯಲ್ಲಿ ಹೈಪೊಕ್ಸಿಯಾ (ರಕ್ತದಲ್ಲಿ ಕಡಿಮೆ ಆಮ್ಲಜನಕ) ಸಮಸ್ಯೆ ಕಂಡುಬಂದಿತ್ತು. ಅಂತೆಯೇ ಒಟ್ಟಾರೆ ಸಾವನ್ನಪ್ಪಿದವರ ಪೈಕಿ ಒಂದು ಡೋಸ್ ಲಸಿಕೆ ಪಡೆದ 20 ಮಂದಿ ಮಾತ್ರ ಇದ್ದು,. ಎರಡೂ ಡೋಸ್ ಲಸಿಕೆ ಪಡೆದ ಎಲ್ಲ ಸೋಂಕಿತರೂ ಯಶಸ್ವಿಯಾಗಿ ಗುಣಮುಖರಾಗಿದ್ದಾರೆ.  

ಲಸಿಕೆಯ ಒಂದು ಡೋಸ್ ಕೊಮೊರ್ಬಿಡಿಟಿಗಳ ಹೊರತಾಗಿಯೂ ರಕ್ಷಣೆ ನೀಡಿತು, ಕಡಿಮೆ ತೀವ್ರತೆ, ಉರಿಯೂತ ಮತ್ತು ಉತ್ತಮ ಫಲಿತಾಂಶಗಳನ್ನು ಕಂಡಿತ್ತು. ಎರಡೂ ಡೋಸ್ ತೆಗೆದುಕೊಂಡವರು ಅತ್ಯುತ್ತಮ ಪ್ರಯೋಜನವನ್ನು ಹೊಂದಿದ್ದರು. ಯಾವುದೇ ಮರಣ ಸಂಭವಿಸಿಲ್ಲ ಎಂದು ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ. 

ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್‌ಗೆ ಪ್ರಕಟಿಸಲು ಈ ವರದಿಯನ್ನು ಕಳುಹಿಸಲಾಗಿದೆ ಎಂದು ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಗಳ ಶ್ವಾಸಕೋಶ ಮತ್ತು ಮಧ್ಯಸ್ಥಿಕೆಯ ಶ್ವಾಸಕೋಶ ಶಾಸ್ತ್ರದ ಹಿರಿಯ ಸಮಾಲೋಚಕರು ಮತ್ತು ಎಚ್‌ಒಡಿ ಡಾ. ರವೀಂದ್ರ ಮೆಹ್ತಾ ಹೇಳಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com