ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ: ಹಿಂದೂ ಬಲಪಂಥೀಯ ಸಂಘಟನೆಯ ಮೂವರ ಬಂಧನ

ಮಂಗಳೂರಿನಲ್ಲಿ ಇನ್ನೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದ್ದು, ಹಿಂದೂ ಜಾಗರಣ ವೇದಿಕೆಯ ಕೆಲವು ಸದಸ್ಯರು, ಹಿಂದೂ ಬಲಪಂಥೀಯ ಸಂಘಟನೆಯು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಂಗಳೂರು: ಮಂಗಳೂರಿನಲ್ಲಿ ಇನ್ನೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದ್ದು, ಹಿಂದೂ ಜಾಗರಣ ವೇದಿಕೆಯ ಕೆಲವು ಸದಸ್ಯರು, ಹಿಂದೂ ಬಲಪಂಥೀಯ ಸಂಘಟನೆಯು ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬೇರೆ ಬೇರೆ ಧರ್ಮಕ್ಕೆ ಸೇರಿದ ಮೂವರು ಯುವಕರು ಮೂವರು ಸೇರಿದಂತೆ ಇಬ್ಬರು ಹುಡುಗಿಯರು ಜೊತೆಯಾಗಿ ನಿಂತು ಮಾತನಾಡುತ್ತಿದ್ದರು.ಅಲ್ಲಿಗೆ ಬಂದ ವಿವಿಧ ಸಂಘಟನೆಯ ಸದಸ್ಯರು ಅವರನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರಿಂಜ ದೇವಸ್ಥಾನದ ಕೊಳದ ಬಳಿ ಮಂಗಳೂರಿನಲ್ಲಿರುವ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ನೋಡಿದ ಸ್ಥಳೀಯರು ಹಿಂದೂ ಬಲ ಪಂಥೀಯ ಸಂಘಟನೆಗಳಿಗೆ ಮಾಹಿತಿ ನೀಡಿದರು.

ಐದು ಬಲಪಂಥೀಯ ಸದಸ್ಯರ ಪೈಕಿ ಮೂವರನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್ ಪಿ ಹೃಷಿಕೇಶ್ ಸೋನವಾನೆ ತಿಳಿಸಿದ್ದಾರೆ. ಪೂಂಜಾಲಕಟ್ಟೆ ಪೊಲೀಸರು ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ನಡೆದಿರುವ ಎರಡನೇ ನೈತಿಕ ಪೊಲೀಸ್ ಪ್ರಕರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com