ನಿವೃತ್ತ ಯೋಧ ಶ್ರೀನಾಥ್‍ಗೆ ಜಮೀನು ನೀಡುವಂತೆ ಮುನಿರತ್ನ ಶಿಫಾರಸು

ಭಾರತೀಯ ಸೇನೆಯ ನಿವೃತ್ತ ಯೋಧ ವಿ. ಶ್ರೀನಾಥ್ ಅವರಿಗೆ ಕೋಲಾರದಲ್ಲಿ ಮಿಲಿಟರಿ `ಜಿ’ ಕೆಟಗರಿಯಲ್ಲಿ ಜಮೀನು ಮಂಜೂರು ಮಾಡುವಂತೆ ತೋಟಗಾರಿಕೆ ಸಚಿವ ಮುನಿರತ್ನ ಅವರು ಕೋಲಾರ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.
ಶಾಸಕ ಮುನಿರತ್ನ
ಶಾಸಕ ಮುನಿರತ್ನ

ಬೆಂಗಳೂರು: ಭಾರತೀಯ ಸೇನೆಯ ನಿವೃತ್ತ ಯೋಧ ವಿ. ಶ್ರೀನಾಥ್ ಅವರಿಗೆ ಕೋಲಾರದಲ್ಲಿ ಮಿಲಿಟರಿ `ಜಿ’ ಕೆಟಗರಿಯಲ್ಲಿ ಜಮೀನು ಮಂಜೂರು ಮಾಡುವಂತೆ ತೋಟಗಾರಿಕೆ ಸಚಿವ ಮುನಿರತ್ನ ಅವರು ಕೋಲಾರ ಜಿಲ್ಲಾಧಿಕಾರಿಗಳಿಗೆ ಶಿಫಾರಸು ಮಾಡಿದ್ದಾರೆ.

ಕೋಲಾರ ಜಿಲ್ಲೆ ಹುತ್ತೂರು ಹೋಬಳಿ ನಡುಪಳ್ಳಿ ನಿವಾಸಿ ವಿ. ಶ್ರೀನಾಥ್ ಭಾರತೀಯ ಸೇನೆಯಲ್ಲಿ ದೇಶದ ನಾನಾ ಸ್ಥಗಳಲ್ಲಿ 19 ವರ್ಷಗಳ ಸುದೀರ್ಘ ಸೇವೆಯನ್ನು ಪೂರೈಸಿ ನಿವೃತ್ತರಾಗಿದ್ದಾರೆ. ಇವರಿಗೆ ಮಿಲಿಟರಿ ಜಿ ವರ್ಗದಡಿ ಜಮೀನು ಮಂಜೂರು ಮಾಡುವಂತೆ ಕೋಲಾರ ಜಿಲ್ಲಾಧಿಕಾರಿಗಳಿಗೆ ಸಚಿವ ಮುನಿರತ್ನ ಪತ್ರ ಬರೆದಿದ್ದಾರೆ. ಈ ಮೂಲಕ ನಿವೃತ್ತ ಸೈನಿಕನ ನೆರವಿಗೆ ಸಚಿವರು ಮುಂದಾಗಿದ್ದಾರೆ.

ಶ್ರೀನಾಥ್ ಅವರು ಸೇನೆಯಲ್ಲಿರುವಾಗಲೇ ಹಲವು ವರ್ಷಗಳ ಹಿಂದೆ ವಿಶೇಷ `ಜಿ’ ಕೆಟಗರಿಯಲ್ಲಿ ತಮ್ಮ ನಿವೃತ್ತಿಯ ನಂತರ ತಮ್ಮ ಜೀವನಾಂಶಕ್ಕಾಗಿ ತಮಗೆ ಸರಕಾರದ ವತಿಯಿಂದ ಮಂಜೂರಾಗಬೇಕಾದ ಭೂಮಿಯನ್ನು ಗುರುತಿಸಿ, ಮಂಜೂರು ಮಾಡಿಕೊಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದು, ನಾಲ್ಕೈದು ವರ್ಷ ಕಳೆದರೂ ಯಾವುದೇ ಭೂಮಿ ಮಂಜೂರಾಗದ ಕಾರಣ 2016ರಲ್ಲಿ ಹೈಕೋರ್ಟ್‍ನಲ್ಲಿ ಧಾವೆ ಹೂಡಿದ್ದು, 2016ರ ಏ.4ರಂದು ಹೈಕೋರ್ಟ್ ಸದರಿ ಯೋಧನ ಮನವಿಯನ್ನು ಪುರಸ್ಕರಿಸಿ 2 ತಿಂಗಳೊಳಗೆ ಸರಕಾರಿ ಭೂಮಿ ಮಂಜೂರು ಮಾಡುವಂತೆ ನಿರ್ದೇಶನ ನೀಡಿತ್ತು. 

ಅದರಂತೆ ಸದರ ಯೋಧ 2016ರ ಮೇ 5ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು 5 ವರ್ಷ ಕಳೆದರೂ ಇವರಿಗೆ ಒಂದು ಇಮಚು ಭೂಮಿ ಮಂಜೂರು ಮಾಡಿರಲಿಲ್ಲ ಇದರಿಂದ ಬೇಸತ್ತಿದ್ದರು. ಇದೀಗ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಮುನಿರತ್ನ ಅವರು ನಿವೃತ್ತ ಯೋಧ ಶ್ರೀನಾಥ್‍ಗೆ ಕೂಡಲೇ ಭೂಮಿ ಮಂಜೂರು ಮಾಡುವಂತೆ ಶಿಫಾರಸು ಮಾಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com