ಮುಂದಿನ ಮೂರು ತಿಂಗಳು ಮಹತ್ವದ್ದು, ಓಮಿಕ್ರಾನ್ ಪ್ರಕರಣಗಳನ್ನು ಸೌಮ್ಯ, ಕೆಲವೆಂದು ತಳ್ಳಿಹಾಕಬೇಡಿ- ತಜ್ಞರು

ಮುಂದಿನ ಮೂರು ತಿಂಗಳು ಬಹಳ ಮಹತ್ವದ್ದಾಗಿದೆ. ರಾಜ್ಯ ಸರ್ಕಾರ ತನ್ನ ಆಸ್ಪತ್ರೆಗಳನ್ನು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಓಮಿಕ್ರಾನ್ ಪ್ರಕರಣಗಳ ಹೊರಹೊಮ್ಮುವಿಕೆಯನ್ನು 'ಸೌಮ್ಯ' ಅಥವಾ 'ಕೆಲವು' ಎಂದು ತಳ್ಳಿಹಾಕಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂದಿನ ಮೂರು ತಿಂಗಳು ಬಹಳ ಮಹತ್ವದ್ದಾಗಿದೆ. ರಾಜ್ಯ ಸರ್ಕಾರ ತನ್ನ ಆಸ್ಪತ್ರೆಗಳನ್ನು ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಓಮಿಕ್ರಾನ್ ಪ್ರಕರಣಗಳ ಹೊರಹೊಮ್ಮುವಿಕೆಯನ್ನು 'ಸೌಮ್ಯ' ಅಥವಾ 'ಕೆಲವು' ಎಂದು ತಳ್ಳಿಹಾಕಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ. ಹಿಂದಿನ ಎರಡು ಅಲೆಗಳು ಕೂಡಾ ಇದೇ ಅವಧಿಯಲ್ಲಿ ಗರಿಷ್ಠ ಹಂತಕ್ಕೆ ತಲುಪಿತ್ತು. ಇತರ ರಾಷ್ಟ್ರಗಳಲ್ಲಿ ಹೆಚ್ಚಾಗುತ್ತಿರುವ ಓಮಿಕರಾನ್ ಪ್ರಕರಣಗಳು ಎಚ್ಚರಿಕೆ ನೀಡಿವೆ. ಕೋವಿಡ್ ನಿಯಮ ಪಾಲನೆಯನ್ನು ನಾವು ಮರೆಯಬಾರದು ಎಂದು ಅವರು ಹೇಳಿದ್ದಾರೆ.

2019ರ ಡಿಸೆಂಬರ್ ತಿಂಗಳಲ್ಲಿಯೇ ಕೋವಿಡ್ ಮೊದಲ ಅಲೆ ಹೊರಹೊಮ್ಮಿತ್ತು. ತದನಂತರ ಕೋವಿಡ್ ರೂಪಾಂತರಿ ಡೆಲ್ಟಾ ಪ್ರಕರಣಗಳು ಕೂಡಾ ಇದೇ ಅವಧಿಯಲ್ಲಿ ಜನರಲ್ಲಿ ಆರಂಭವಾಗಿತ್ತು. ಇದೀಗ ನಾವು ಓಮಿಕ್ರಾನ್ ನೋಡುತ್ತಿದ್ದೇವೆ. ಮುಂದಿನ ಮೂರು ತಿಂಗಳ ಕಾಲ ನಾವು ಎಚ್ಟರಿಕೆ ವಹಿಸಬೇಕಾಗಿದೆ. ಕೋವಿಡ್ ಶಿಷ್ಟಾಚಾರ ಪಾಲನೆ ಮಹತ್ವದ್ದಾಗಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ. 

ಹೆಚ್ಚಿನ ಅಪಕಾರಿ ಸನ್ನಿವೇಶ ಎದುರಾಗದಂತೆ ರಾಷ್ಟ್ರಗಳು ರಕ್ಷಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ವಿಶ್ವ ಸಂಸ್ಥೆ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕರಾದ ಡಾ. ಪೂನಂ ಖೇತ್ರಪಾಲ್ ಸಿಂಗ್ ಎಚ್ಚರಿಸಿದ್ದಾರೆ. ಓಮಿಕ್ರಾನ್ ಹರಡುವಿಕೆ ಅಥವಾ ತೀವ್ರತೆ ಬಗ್ಗೆ ಇನ್ನೂ ಅಧ್ಯಯನ ನಡೆಸಲಾಗುತ್ತಿದೆ. ಅದು ಸೌಮ್ಯ ಅಥವಾ ಸಾವಿನ ತೀವ್ರತೆ ಕಡಿಮೆಯಿದೆ ಎಂದು ನಿರ್ಲಕ್ಷ್ಯ ವಹಿಸಬಾರದು, ಐಸಿಯು ಬೆಡ್, ಆಕ್ಸಿಜನ್ ಲಭ್ಯತೆ, ಸೂಕ್ತ ಆರೋಗ್ಯ ಸಿಬ್ಬಂದಿ ಸೇರಿದಂತೆ ಮತ್ತಿತರ ಆರೋಗ್ಯ ಸೌಲಭ್ಯಗಳ ಸಿದ್ಧತೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. 

ಓಮಿಕ್ರಾನ್ ಗಾಗಿ ಜೀನೋಮಿಕ್ ಸಿಕ್ವೆನ್ಸಿಂಗ್ ವರದಿ ಪಡೆಯಲು ವಿಳಂಬಕ್ಕಾಗಿ ಯಾವುದೇ ಆತಂಕಪಡಬಾರದು ಎಂದು ಸಾರ್ವಜನಿಕ ಆರೋಗ್ಯ ತಜ್ಞ ಡಾ. ಗಿರಿಧರ ಬಾಬು ಹೇಳಿದ್ದಾರೆ. ವಿಶ್ಲೇಷಣೆಗೆ ಸಂಗ್ರಹಣೆಯಲ್ಲಿ ಎದುರಾಗುವ ಸವಾಲುಗಳಿಂದಾಗಿ ವಿಳಂಬವಾಗಿರುತ್ತದೆ ಎಂದು ಅವರು ವಿವರಿಸಿದ್ದಾರೆ. ಜೀನೋಮಿಕ್ ಸೀಕ್ವೆನ್ಸಿಂಗ್ ಕೇವಲ 8-12 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಬಯೋಇನ್ಫರ್ಮ್ಯಾಟಿಕ್ಸ್ ಪೈಪ್‌ಲೈನ್‌ನಿಂದ ಡೇಟಾದ ವಿಶ್ಲೇಷಣೆಯು ಇನ್ನೂ 48-72 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ. 

ಭಯ ಅಥವಾ ಆತಂಕಕ್ಕೊಳಗಾಗುವುದನ್ನು ತಪ್ಪಿಸಿ, ಮಾಸ್ಕ್ ಧರಿಸಿ, ಅನಾವಶ್ಯಕವಾಗಿ ಗುಂಪು ಸೇರಬೇಡಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com