ದಂಡ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಟ್ರ್ಯಾಕ್ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ತಂತ್ರಜ್ಞಾನದ ಮೊರೆ!

ಈ ನೂತನ ತಾಂತ್ರಿಕ ವ್ಯವಸ್ಥೆ ರಸ್ತೆ ಮೇಲೆ ಸಾಗುತ್ತಿರುವ ವಾಹನದ ನಂಬರ್ ಪ್ಲೇಟನ್ನು ಗಮನಿಸಿ, ಆ ನಂಬರಿನಲ್ಲಿ ದಂಡ ಶುಲ್ಕ ಬಾಕಿ ಇರುವ ಬಗ್ಗೆ ಜಾಲಾಡುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ದಿನಸಿ ಸಾಮಾನಿನ ಪಟ್ಟಿಯಷ್ಟು ಉದ್ದದ ಟ್ರಾಫಿಕ್ ಉಲ್ಲಂಘನೆಗಳ ಸರಮಾಲೆಯನ್ನು ಹೊಂದಿರುವ ವಾಹನ ಸವಾರರು ಇನ್ನುಮುಂದೆ ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ನಗರದಲ್ಲಿ ಓಡಾಡುವುದು ಕಷ್ಟಕರವಾಗಲಿದೆ. ಅದಕ್ಕೆ ಕಾರಣ ಸಂಚಾರಿ ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನವೊಂದಕ್ಕೆ ಮೊರೆ ಹೋಗಿರುವುದು. 

ಈ ನೂತನ ತಾಂತ್ರಿಕ ವ್ಯವಸ್ಥೆ ರಸ್ತೆ ಮೇಲೆ ಸಾಗುತ್ತಿರುವ ವಾಹನದ ನಂಬರ್ ಪ್ಲೇಟನ್ನು ಗಮನಿಸಿ, ಆ ನಂಬರಿನಲ್ಲಿ ದಂಡ ಶುಲ್ಕ ಬಾಕಿ ಇರುವ ಬಗ್ಗೆ ಜಾಲಾಡುತ್ತದೆ. ಒಂದು ವೇಳೆ ದಂಡ ಶುಲ್ಕ ಬಾಕಿ ಉಳಿಸಿಕೊಂಡಿದ್ದರೆ ಅದೇ ರಸ್ತೆಯಲ್ಲಿ ಮುಂದೆ ನಿಂತಿರುವ ಸಂಚಾರ ಪೊಲೀಸರಿಗೆ ಮಾಹಿತಿ ನೀಡುತ್ತದೆ. ಹೀಗಾಗಿ ಇನ್ನುಮುಂದೆ ಸಂಚಾರಿ ಪೊಲೀಸರು ದಂಡ ಶುಲ್ಕ ಬಾಕಿ ಉಳಿಸಿಕೊಂಡಿರುವ ವಾಹನಗಳನ್ನು ಮಾತ್ರವೇ ತಡೆದು ನಿಲ್ಲಿಸುವುದು ಸಾಧ್ಯವಾಗಲಿದೆ. 

ಈ ನೂತನ ತಾಂತ್ರಿಕತೆ ಉದ್ಘಾಟ್ಘನಾ ಸಮಾರಂಭದಲ್ಲಿ ಮಾತನಾಡಿದ ಸಿ.ಎಂ ಬಸವರಾಜ ಬೊಮ್ಮಾಯಿ ಸಂಚಾರ ಪೊಲೀಸ್ ಇಲಾಖೆ ಆಧುನೀಕರಣಕ್ಕೆ ತಂತ್ರಜ್ಞಾನದ ನೆರವು ಪಡೆದುಕೊಳ್ಳುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ಗೃಹಸಚಿವ ಅರಗ ಜ್ಞಾನೇಂದ್ರ ಬೆಂಗಳೂರು ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ದಂಡ ಶುಲ್ಕದ ಒಟ್ಟು ಮೊತ್ತ ನೂರಾರು ಕೋಟಿ ರೂ.ಗಳಷ್ಟಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com