ಕೋವಿಡ್-19: ಅಕಾಲಿಕವಾಗಿ ಬಿಡುಗಡೆಯಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಳ

ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ನಡುವೆಯೇ ತಾವು ಗುಣಮುಖರಾಗಿದ್ದೇವೆ ಎಂದು ಅಕಾಲಿಕವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮತ್ತೆ ಅನಾರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ ಎಂದು ವೈದ್ಯರು ಕಳವಳ  ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಸೋಂಕಿತರಿಗೆ ಪರೀಕ್ಷೆ
ಕೋವಿಡ್-19 ಸೋಂಕಿತರಿಗೆ ಪರೀಕ್ಷೆ

ಬೆಂಗಳೂರು: ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ನಡುವೆಯೇ ತಾವು ಗುಣಮುಖರಾಗಿದ್ದೇವೆ ಎಂದು ಅಕಾಲಿಕವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮತ್ತೆ ಅನಾರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ ಎಂದು ವೈದ್ಯರು ಕಳವಳ  ವ್ಯಕ್ತಪಡಿಸಿದ್ದಾರೆ.

ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಎದೆ ರೋಗಗಳ (ಆರ್ಜಿಐಸಿಡಿ) ಕೋವಿಡ್ ನಂತರದ ಚಿಕಿತ್ಸಾಲಯಗಳಿಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪೂರ್ಣಗೊಳಿಸಿದೇ ಬಿಡುಗಡೆಯಾದವರು ಮತ್ತು ಸ್ಟಿರಾರ್ಯ್ಡ್ ಗಳನ್ನು ಅನಿಯಂತ್ರಿತವಾಗಿ  ತೆಗೆದುಕೊಂಡಿದ್ದೇ ಕಾರಣ ಎಂದು ಹೇಳಾಲಾಗುತ್ತಿದೆ. ಇಂತಹ ಸೋಂಕಿತರಲ್ಲಿ ಹೆಚ್ಚು ಆನಾರೋಗ್ಯ ಪರಿಸ್ಥಿತಿಗಳು ಕಂಡುಬರುತ್ತಿವೆ ಎಂದು ವೈದ್ಯರು ಹೇಳಿದ್ದಾರೆ. 

ಕೆಲ ಖಾಸಗಿ ಮತ್ತು ಸಣ್ಣ ಕೋವಿಡ್ ಆಸ್ಪತ್ರೆಗಳಲ್ಲಿ ಡಿಸ್ಚಾರ್ಜ್ ಮಾಡುವ ಮೊದಲು ಯಾವುದೇ ಪುನರಾವರ್ತಿತ ಪರೀಕ್ಷೆಯನ್ನು ಮಾಡಲಾಗುವುದಿಲ್ಲ. ಹೀಗಾಗಿ ಸಣ್ಣ ಆಸ್ಪತ್ರೆಗಳಲ್ಲಿನ ಅನೇಕ ರೋಗಿಗಳನ್ನು ಬೇಗನೆ ಬಿಡುಗಡೆ ಮಾಡಲಾಗುತ್ತದೆ. ಮನೆಯಲ್ಲೇ ಆಮ್ಲಜನಕವನ್ನು ನೀಡಲಾಗುತ್ತದೆ. ಸೋಂಕು  ಉಲ್ಬಣವಾದಾಗ ಅವರಲ್ಲಿ ಮತ್ತೆ ಉಸಿರಾಟದ ತೊಂದರೆ ಮತ್ತು ಜ್ವರದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದು ಸೆಪ್ಸಿಸ್ (ದ್ವಿತೀಯಕ ಸೋಂಕು) ಯನ್ನು ಬೆಳೆಸಿಕೊಂಡಿದಂತಾಗುತ್ತದೆ. ಆರ್‌ಜಿಐಸಿಡಿಯಲ್ಲಿ ಕೋವಿಡ್ ನಂತರದ ಚಿಕಿತ್ಸಾಲಯಕ್ಕೆ ಬಂದ ರೋಗಿಗಳಲ್ಲಿ ಶೇ.15ರಷ್ಟು ರೋಗಿಗಳಲ್ಲಿ ಸೋಂಕು  ಇನ್ನೂ ಸಕಾರಾತ್ಮಕವಾಗಿಯೇ ಇರುವುದು ಕಂಡುಬಂದಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಆರ್‌ಜಿಐಸಿಡಿ ನಿರ್ದೇಶಕ ಡಾ ಸಿ ಸಿ ನಾಗರಾಜ್ ಅವರು, 'ಸಣ್ಣ ಆಸ್ಪತ್ರೆಗಳು ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲ, ಸ್ಟೀರಾಯ್ಡ್‌ಗಳನ್ನು ನ್ಯಾಯಯುತವಾಗಿ ಬಳಕೆ ಮಾಡುವುದಿಲ್ಲ, ಆದರೆ ತೃತೀಯ ಆರೈಕೆ ಆಸ್ಪತ್ರೆಗಳ ಪರಿಸ್ಥಿತಿ ಹೀಗಿಲ್ಲ. 7 ನೇ ದಿನದ ನಂತರ ಇವುಗಳನ್ನು  ನಿರ್ವಹಿಸಬೇಕಾದರೆ, ಕೆಲವು ಖಾಸಗಿ ಆಸ್ಪತ್ರೆಗಳು ಆರಂಭಿಕ ದಿನಗಳಲ್ಲೇ ಸ್ಟಿರಾಯ್ಡ್ ಗಳನ್ನು ನೀಡುತ್ತವೆ. ಇದರಿಂದ ಸೋಂಕು ಹೆಚ್ಚುವುದಿಲ್ಲ ಎಂದು ಅವರು ನಂಬಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಇದು ಸೆಪ್ಸಿಸ್ ನಂತಹ ಹೆಚ್ಚಿನ ತೊಂದರೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

ಅಕಾಲಿಕ ಡಿಸ್ಚಾರ್ಜ್ ಮತ್ತು ಸ್ಟೀರಾಯ್ಡ್‌ಗಳ ಅತಿಯಾದ ಬಳಕೆ ಎರಡೂ ಸೆಪ್ಸಿಸ್ ಅಥವಾ ಉಸಿರಾಟದ ವೈಫಲ್ಯದಿಂದ ಉಂಟಾಗುವ ಬಹು-ಅಂಗಗಳ ವೈಫಲ್ಯಕ್ಕೆ (ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಒಳಗೊಳ್ಳುವಿಕೆಯೊಂದಿಗೆ) ಕಾರಣವಾಗುತ್ತದೆ. ಕೋವಿಡ್ ನಂತರದ ಚಿಕಿತ್ಸಾ ಕೇಂದ್ರದಲ್ಲಿ 15 ರೋಗಿಗಳಲ್ಲಿ  ಬಹುಪಾಲು ಸಾವಿಗೆ ಇವು ಪ್ರಮುಖ ಕಾರಣಗಳಾಗಿವೆ. ಮೊದಲ ಅಲೆಯಲ್ಲಿ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಬಳಿಕ ಇತರೆ ಅನಾರೋಗ್ಯ ತೊಂದರೆಗೀಡಾದ 17 ಪ್ರಕರಣಗಳು ಇಲ್ಲಿವೆ. ಆದರೆ ಅವುಗಳಲ್ಲಿ ಯಾವುದೂ ಸೋಂಕಿಗೆ ಬಲಿಯಾಗಿಲ್ಲ. ಎರಡನೇ ತರಂಗದಲ್ಲಿ, 62 ಪ್ರಕರಣಗಳು ದಾಖಲಾಗಿದ್ದು, 15  ಸಾವುನೋವುಗಳು ಸಂಭವಿಸಿವೆ.

ಕೋವಿಡ್ ನಂತರದ ತೊಡಕುಗಳು ಸಂಪೂರ್ಣ ಗುಣಪಡಿಸಿದ 6-8 ವಾರಗಳ ನಂತರ, ಸ್ಥಿರವಾದ ಕ್ಲಿನಿಕಲ್ ನಿಯತಾಂಕಗಳೊಂದಿಗೆ ಸಂಭವಿಸುತ್ತವೆ. ಇವುಗಳಲ್ಲಿ ಏರ್ ಲೀಕ್ ಸಿಂಡ್ರೋಮ್ ಕೂಡ ಸೇರಿವೆ, ಅಲ್ಲಿ ರೋಗಿಗಳು ಎದೆನೋವಿನಿಂದ ಬಳಲುತ್ತಾರೆ. ಇದಕ್ಕೆ ಶ್ವಾಸಕೋಶ ಮತ್ತು ಪ್ಲೆರಾ ನಡುವೆ ಗಾಳಿಯ  ಸಂಗ್ರಹ ಕಾರಣ. ಇದು ವೈದ್ಯಕೀಯ ತುರ್ತುಸ್ಥಿತಿ, ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಕೃತಕ ಆಮ್ಲಜನಕ ವ್ಯವಸ್ಥೆ ಅಳವಡಿಸಬೇಕಾಗುತ್ತದೆ. ಆದರೆ ಅದು ವಿಫಲಗೊಳ್ಳುತ್ತದೆ. ಪಾರ್ಶ್ವವಾಯುವಿನಿಂದ ಬಳಲುತ್ತಿರುವವರನ್ನು ನಿಮ್ಹಾನ್ಸ್ ಮತ್ತು ಹೃದಯದ ತೊಂದರೆ ಇರುವವರನ್ನು ಜಯದೇವ ಆಸ್ಪತ್ರೆಗೆ  ಕಳುಹಿಸಲಾಗುತ್ತದೆ. ಕೋವಿಡ್ ನಂತರದ ಇತರ ತೊಡಕುಗಳಲ್ಲಿ ಉಸಿರಾಟದ ವೈಫಲ್ಯ, ಶ್ವಾಸಕೋಶದ ಕಾಯಿಲೆ ಅಥವಾ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಗಳು ಸೇರಿವೆ. ಟೇಕ್-ಹೋಮ್ ಸಂದೇಶವೆಂದರೆ ಆಸ್ಪತ್ರೆಗಳು ರೋಗಿಗಳನ್ನು ಮೊದಲೇ ಬಿಡುಗಡೆ ಮಾಡಬಾರದು, ಏಕೆಂದರೆ ಇದು  ಅಸ್ತಿತ್ವದಲ್ಲಿರುವ ರೋಗವನ್ನು ಹೆಚ್ಚಿಸುತ್ತದೆ, ಅಥವಾ ಅವರು ಸ್ಟೀರಾಯ್ಡ್ ಗಳನ್ನು ಯಥೇಚ್ಚವಾಗಿ ನೀಡಬಾರದು ಎಂದು ಅವರು ಹೇಳಿದರು.

ಆರ್ಜಿಐಸಿಡಿಯಲ್ಲಿರುವ ಪ್ರಕರಣಗಳ ದತ್ತಾಂಶ
* ಮೊದಲ ಅಲೆ ವೇಳೆ ಕೋವಿಡ್ ನಂತರದ 17 ಪ್ರಕರಣಗಳು, ಯಾವುದೇ ಸಾವಿಲ್ಲ
* ಎರಡನೇ ಅಲೆಯಲ್ಲಿ 62 ಪ್ರಕರಣಗಳು, 15 ಮಂದಿ ಸಾವು
* ಹೆಚ್ಚಿನ ಪ್ರಕರಣಗಳು ಪುರುಷರು, ಶೇ.27 ರಷ್ಟು ಮಹಿಳೆಯರು
* ಶೇ.73 ರಷ್ಟು ರೋಗಿಗಳು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
* ಶೇ.70 ಜನರು ಕೊಮೊರ್ಬಿಡಿಟಿಗಳನ್ನು ಹೊಂದಿದ್ದು, ಮಧುಮೇಹ, ಅಧಿಕ ರಕ್ತದೊತ್ತಡ ಸಮಸ್ಯೆಗಳನ್ನು ಹೊಂದಿದ್ದಾರೆ.
* ಸುಮಾರು ಶೇ.15ರಷ್ಟು ರೋಗಿಗಳು ಆಸ್ಪತ್ರೆ ತಲುಪಿದಾಗ ಇನ್ನೂ ಸೋಂಕು ಸಕಾರಾತ್ಮಕವಾಗಿದ್ದರು
* 470 ಪ್ರಕರಣಗಳು ಒಪಿಡಿಗೆ ಬಂದಿದ್ದು, ಅದರಲ್ಲಿ ಶೇ.16.80ರಷ್ಟು ದಾಖಲಾಗಿದ್ದು, ಉಳಿದವುಗಳನ್ನು ಸಲಹೆಯೊಂದಿಗೆ ಮನೆಗೆ ಕಳುಹಿಸಲಾಗಿದೆ
* 25% ರಿಂದ 30% ರೋಗಿಗಳು ಮಾನಸಿಕ ಖಿನ್ನತೆ, ಆಯಾಸ, ದೌರ್ಬಲ್ಯವನ್ನು ಹೊಂದಿದ್ದರು
* 8% ರಿದ 10% ರೋಗಿಗಗಳು ನಿಜವಾದ ಕೋವಿಡ್ ನಂತರದ ಲಕ್ಷಣಗಳನ್ನು ಹೊಂದಿದ್ದರು 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com