ಬೆಂಗಳೂರು: ಐಎಎಸ್ ಅಧಿಕಾರಿ ಪಿ ರಾಜೇಂದ್ರ ಚೋಳನ್ ಸೇರಿದಂತೆ 3 ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತರಾಗಿದ್ದ ಪಿ ರಾಜೇಂದ್ರ ಚೋಳನ್ ಸೇರಿದಂತೆ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
Published: 06th June 2021 12:31 AM | Last Updated: 06th June 2021 01:13 AM | A+A A-

ವಿಧಾನಸೌಧ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತರಾಗಿದ್ದ ಪಿ ರಾಜೇಂದ್ರ ಚೋಳನ್ ಸೇರಿದಂತೆ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
Karnataka | P Rajendra Cholan IAS posted as Managing Director, BESCOM, Bengaluru with concurrent charge in the post of Special Commissioner (Health & IT) BBMP, Bengaluru and Dr Bagadi Gautham IAS transferred & posted as Dy Commissioner, Mysuru with immediate effect pic.twitter.com/44U32ylAIr
— ANI (@ANI) June 5, 2021
ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಬಿಬಿಎಂಪಿಯ ಆರೋಗ್ಯ ಮತ್ತು ಐಟಿ ವಿಭಾಗದ ವಿಶೇಷ ಆಯುಕ್ತರಾಗಿದ್ದ ಪಿ ರಾಜೇಂದ್ರ ಚೋಳನ್ ಅವರನ್ನು ಬೆಸ್ಕಾಂ ಆಡಳಿತ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದ್ದು, ಅಂತೆಯೇ ಅವರಿಗೆ ಹೆಚ್ಚುವರಿಯಾಗಿ ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ ಮತ್ತು ಐಟಿ) ಹುದ್ದೆ ನೀಡಲಾಗಿದೆ. ಆ ಮೂಲಕ ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ರಾಜೇಶ್ ಗೌಡ ಅವರನ್ನು ವರ್ಗಾವಣೆ ಮಾಡಲಾಗಿದೆ.
ಇದನ್ನೂ ಓದಿ: ಮೈಸೂರು ಐಎಎಸ್ ಅಧಿಕಾರಿಗಳ ಜಟಾಪಟಿಗೆ ತಾರ್ಕಿಕ ಅಂತ್ಯ; ರೋಹಿಣಿ ಸಿಂಧೂರಿ, ಶಿಲ್ಪಾನಾಗ್ ವರ್ಗಾವಣೆ
ಇನ್ನು ರಾಜೇಶ್ ಗೌಡ ಅವರನ್ನು ಯಾವ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂಬುದು ತಿಳಿದುಬಂದಿಲ್ಲ. ಅಂತೆಯೇ ಬಿಬಿಎಂಪಿ ವಿಶೇಷ ಆಯುಕ್ತ ( ಆಡಳಿತ)ರಾಗಿ ದಯಾನಂದ ಕೆ.ಎ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.