ಹಲ್ಲೆ, ಎಫ್ ಐಆರ್ ದಾಖಲಿಸದ ಪೊಲೀಸರು: ಉದ್ಯಮಿ ಆರೋಪ

ಹಣಕಾಸು ವಿವಾದದಲ್ಲಿ ಹಲ್ಲೆಗೊಳಗಾದ 40 ವರ್ಷದ ಉದ್ಯಮಿಯೊಬ್ಬರು, ಹಲಸೂರು ಗೇಟ್ ಪೊಲೀಸರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ. ತಮ್ಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರಿಗೆ ಉದ್ಯಮಿ ಇಬ್ರಾನ್ ಷರೀಫ್ ಶುಕ್ರವಾರ ದೂರು ಸಲ್ಲಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಣಕಾಸು ವಿವಾದದಲ್ಲಿ ಹಲ್ಲೆಗೊಳಗಾದ 40 ವರ್ಷದ ಉದ್ಯಮಿಯೊಬ್ಬರು, ಹಲಸೂರು ಗೇಟ್ ಪೊಲೀಸರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ. ತಮ್ಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರಿಗೆ ಉದ್ಯಮಿ ಇಬ್ರಾನ್ ಷರೀಫ್ ಶುಕ್ರವಾರ ದೂರು ಸಲ್ಲಿಸಿದ್ದಾರೆ. 

ತನ್ನ ಹಿರಿಯ ಸಹೋದರನೊಂದಿಗೆ ವ್ಯವಹಾರ ವಹಿವಾಟು ನಡೆಸಿದ ಫೈಜಲ್, 7.50 ಲಕ್ಷ ರೂ. ಹಿಂತಿರುಗಿಸಬೇಕಾಗಿತ್ತು. ಸುಮಾರು ಒಂದು ವರ್ಷದಿಂದ ಪದೇ ಪದೇ ಕೇಳುತ್ತಿದ್ದರೂ, ಹಣ ಹಿಂತಿರುಗಿಸಿಲ್ಲ, ಕೇಳಲೂ ಹೋದರೆ ತನ್ನಗೆ ಹಾಗೂ  ಸಹೋದರಿಗೆ ಫೈಜಲ್ ಬೆದರಿಕೆ ಹಾಕುತ್ತಿದ್ದ ಎಂದು ಇಮ್ರಾನ್ ಷರೀಫ್ ದೂರಿನಲ್ಲಿ ತಿಳಿಸಿದ್ದಾರೆ.

ಮೇ 15 ರಂದು ಬೆಳಗ್ಗೆ 2 ಗಂಟೆ ಸುಮಾರಿನಲ್ಲಿ ಫೋನ್ ಕರೆ ಮಾಡಿದ್ದ ಫೈಜಲ್, ಹಣವನ್ನು ವಾಪಸ್ ನೀಡಲು ಬಂದಿದ್ದು, ಮನೆಯಿಂದ ಹೊರಗೆ ಬರುವಂತೆ ಒತ್ತಾಯಿಸಿದ.ನಂತರ ಮನೆಯಿಂದ ಹೊರಗೆ ಬಂದಾಗ ಫೈಜಲ್ ಹಾಗೂ ಆತನ ಸಹೋದರ ಪಾವದ್, ಮತ್ತೋರ್ವ ವ್ಯಕ್ತಿ ಬಂದಿದ್ದರು. ಪದೇ ಪದೇ ಹಣ ಕೇಳಿದರೆ, ಭೀಕರ ಪರಿಣಾಮ ಎದುರಿಸಬೇಕಾದೀತು ಎಂಬ ಬೆದರಿಕೆ ಹಾಕಿದರು. ಹೊಯ್ಸಳಕ್ಕೆ ಕರೆ ಮಾಡಿದ್ದರಿಂದ ಅಲ್ಲಿಂದ ಅವರು ನಿರ್ಗಮಿಸಿದ್ದರು. ತದ ನಂತರ ಮೂವರು ವಾಪಸ್ ಬಂದು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಎಡಕಣ್ಣಿನ ಹತ್ತಿರ ತೀವ್ರವಾಗಿ ಗಾಯವಾಗಿರುವುದಾಗಿ ಷರೀಫ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಮೇ 16 ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಾಯಿತು. ಸಕಾರಾತ್ಮಕವಾಗಿ ವರ್ತಿಸಿದ ಇನ್ಸ್ ಪೆಕ್ಟರ್, ಎಫ್ ಐಆರ್ ದಾಖಲಿಸುವಂತೆ ಸಹಾಯಕರಿಗೆ ಹೇಳಿದರು ನಂತರ ಅಲ್ಲಿಂದ ನಿರ್ಗಮಿಸಿದ್ದೇವು. ಈ ಮಧ್ಯೆ, ಫೈಜಲ್ ಹಲಸೂರು ಗೇಟ್ ಉಪ ವಿಭಾಗೀಯದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಫೈಜಲ್ ಆಗಮಿಸಿದ್ದನ್ನು ನಾವು ನೋಡಿದ್ದೇವು. ಫೈಜಲ್ ಕಚೇರಿಯಿಂದ ತೆರಳಿದ ನಂತರ ಎಸಿಪಿ ನಜ್ಮಾ ಫಾರೂಖಿ ನಮಗೆ ಕರೆ ಮಾಡಿ, ಬೈಯಲು ಶುರು ಮಾಡಿದರು. ಎಫ್ ಐಆರ್ ದಾಖಲಿಸದಂತೆ  ಸಿಬ್ಬಂದಿಗೆ ಆಕೆ ಸೂಚನೆ ನೀಡಿದ್ದಾರೆ. ಪೊಲೀಸರು ನನ್ನ ಪ್ರಕರಣವನ್ನು ಅರಿವಿಲ್ಲದ ವರದಿಯಾಗಿ ತೆಗೆದುಕೊಂಡಿದ್ದಾರೆ ಎಂದು ಷರೀಫ್ ಆರೋಪಿದರು.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಎಸಿಪಿಯನ್ನು ಸಂಪರ್ಕಿಸಿದಾಗ, ದೂರಿನಲ್ಲಿ ಹಲ್ಲೆ ನಡೆದಿರುವ ಬಗ್ಗೆ ಉಲ್ಲೇಖಿಸಿಲ್ಲ, ಕೇವಲ ಮಾತಿನ ಚಕಮಕಿ ನಡೆದಿದೆ ಎಂದು ಹೇಳಿರುವುದರಿಂದ ಆದೇ ರೀತಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ತಾವು ಸ್ಥಳಕ್ಕೆ ಧಾವಿಸಿದಾಗ ದೂರುದಾರರು ಮದ್ಯಪಾನ ಮಾಡಿದ್ದರು, ಅವರಿಗೆ ಯಾವುದೇ ಗಾಯವಾಗಿರಲಿಲ್ಲ ಎಂದು ಹೊಯ್ಸಳ ಪೊಲೀಸರು ವರದಿ ನೀಡಿದ್ದಾರೆ. ಆದಾಗ್ಯೂ,, ಅವರು ಸ್ಥಳದಲ್ಲಿದ್ದವರನ್ನು ಚದುರಿಸಿ ಹಿಂದಿರುಗಿದ್ದಾರೆ. ದೂರುದಾರನ ಬಿದ್ದು ಗಾಯಗೊಂಡಿದ್ದಾನೆ ಎಂದು ಕಂಡುಬಂದಿದೆ ಎಂದು ಎಸಿಪಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com