ವಿದೇಶಕ್ಕೆ ತೆರಳುವವರಿಗೆ ಬೆಂಗಳೂರು ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಜೂನ್ 22ರಂದು ಲಸಿಕೆ

ನೂತನ ಲಸಿಕಾ ನೀತಿ ಇಂದಿನಿಂದ ಜಾರಿಗೆ ಬರುತ್ತಿರುವ ಬೆನ್ನಲ್ಲೇ ನಾಳೆ ಅಂದರೆ ಜೂನ್ 22ರಂದು ವ್ಯಾಸಂಗ ಅಥವಾ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅಭಿಯಾನ ಆರಂಭಿಸಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.
ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಲಸಿಕೆ ಅಭಿಯಾನ
ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಲಸಿಕೆ ಅಭಿಯಾನ

ಬೆಂಗಳೂರು: ನೂತನ ಲಸಿಕಾ ನೀತಿ ಇಂದಿನಿಂದ ಜಾರಿಗೆ ಬರುತ್ತಿರುವ ಬೆನ್ನಲ್ಲೇ ನಾಳೆ ಅಂದರೆ ಜೂನ್ 22ರಂದು ವ್ಯಾಸಂಗ ಅಥವಾ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವವರಿಗೆ ಲಸಿಕೆ ಅಭಿಯಾನ ಆರಂಭಿಸಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಅವರು ಮಾಹಿತಿ ನೀಡಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, 'ವ್ಯಾಸಂಗ ಅಥವಾ ಉದ್ಯೋಗದ ಸಲುವಾಗಿ ವಿದೇಶಕ್ಕೆ ತೆರಳುವವರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯದ ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಜೂನ್ 22ರಿಂದ ಪುನಃ ಲಸಿಕೆ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಹೇಳಿದ್ದಾರೆ. ಅಂತೆಯೇ ಟೋಕಿಯೋ  ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ತೆರಳುವ ಕ್ರೀಡಾಪಟುಗಳು ಕೂಡಾ ಇಲ್ಲಿಯೇ ಲಸಿಕೆ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.

ಅಂತೆಯೇ ಜಗತ್ತಿನ ಅತೀ ದೊಡ್ಡ ಲಸಿಕಾ ಅಭಿಯಾನ ಆರಂಭವಾಗಿದ್ದು, ಲಸಿಕೆ ಪಡೆಯುವ ಮೂಲಕ ಅಮೂಲ್ಯ ಲಸಿಕೆ ಪಡೆದು ಜೀವ ಉಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com