ಬಿಡಿಎ ಶಾಕ್: ಹೊಸ ಲೇಔಟ್ ಗಳಿಗೆ ನಿರ್ವಹಣಾ ಶುಲ್ಕ ಜಾರಿ!

ಸೈಟ್ ಮತ್ತು ಲೇ ಔಟ್ ಮಾಲೀಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಸ ಶಾಕ್ ನೀಡಿದ್ದು, ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮತ್ತು ಮುಂಬರುವ ಲೇಔಟ್ ಗಳಿಗೆ ನೂತನ ನಿರ್ವಹಣಾ ಶುಲ್ಕ ವಿಧಿಸಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ಬೆಂಗಳೂರು: ಸೈಟ್ ಮತ್ತು ಲೇ ಔಟ್ ಮಾಲೀಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಸ ಶಾಕ್ ನೀಡಿದ್ದು, ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮತ್ತು ಮುಂಬರುವ ಲೇಔಟ್ ಗಳಿಗೆ ನೂತನ ನಿರ್ವಹಣಾ ಶುಲ್ಕ ವಿಧಿಸಿದೆ.

ಹಾಲಿ ವಿತ್ತೀಯ ವರ್ಷದಿಂದಲೇ ನೂತನ ನಿರ್ವಹಣಾ ವೆಚ್ಚ ಜಾರಿಗೆ ಬರುವಂತೆ ಇತ್ತೀಚೆಗೆ ಅಭಿವೃದ್ಧಿಪಡಿಸಿದ ಮತ್ತು ಮುಂಬರುವ ಲೇ ಔಟ್ ಗಳಿಗೆ ನಿರ್ವಹಣಾ ಶುಲ್ಕವಿಧಿಸಿದೆ. ಮೂಲಗಳ ಈ ಶುಲ್ಕವು  100 ರಿಂದ 300 ರೂಗಳಷ್ಟಿದ್ದು, ಆಸ್ತಿ ಆಯಾಮಗಳನ್ನು ಅವಲಂಬಿಸಿ ಈ ದರ ಬದಲಾವಣೆಯಾಗುತ್ತದೆ ಎಂದು  ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಹಿರಿಯ ಬಿಡಿಎ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದು, 'ಈ ಶುಲ್ಕವು ಬಿಡಿಎಯೊಂದಿಗಿನ ಐದು ಲೇಔಟ್ ಗಳಿಗೆ ಮಾತ್ರ ಅನ್ವಯಿಸುತ್ತದೆ ಮತ್ತು ಪೂರ್ಣಗೊಂಡ ನಂತರ ಬಿಬಿಎಂಪಿಗೆ ಹಸ್ತಾಂತರಿಸಬೇಕಾಗಿದೆ. ಫ್ಲ್ಯಾಟ್‌ಗಳು ಮತ್ತು ಸೈಟ್ ಗಳ ಮಾಲೀಕರು ಈ ನಿರ್ವಹಣಾ  ಶುಲ್ಕವನ್ನು ಪಾವತಿಸಬೇಕಾಗುತ್ತದೆ. ವಾರ್ಷಿಕವಾಗಿ ವಿಧಿಸಲಾಗುವ ಆಸ್ತಿ ತೆರಿಗೆ ಶುಲ್ಕಗಳೊಂದಿಗೆ ಬಿಲ್ಲಿಂಗ್ ಅನ್ನು ವಾರ್ಷಿಕವಾಗಿ ಮಾಡಲಾಗುವುದು ಎಂದು ಇತ್ತೀಚೆಗೆ ಹೊರಡಿಸಲಾದ ಮಸೂದೆಯಲ್ಲಿ ಜಾರಿಗೆ ತರಲಾಗಿದೆ. ಬೀದಿ ದೀಪಗಳು, ಕಸ ನಿರ್ವಹಣೆ ಮತ್ತು ಇತರೆ ನಿರ್ವಹಣಾ ಚಟುವಟಿಕೆಗಳಿಗೆ  ವಿಧಿಸಲಾಗುವ ಸೆಸ್ ಅನ್ನು ಈ ಶುಲ್ಕದಲ್ಲಿ ಬಳಸಲಾಗುತ್ತದೆ. ಇದು ನಾಡಪ್ರಭು ಕೆಂಪೇಗೌಡ, ಅರ್ಕಾವತಿ, ಸರ್ ಎಂ ವಿಶ್ವೇಶ್ವರಯ್ಯ, ಬನಶಂಕರಿ VIನೇ ಹಂತ ಮತ್ತು ಅಂಜನಾಪುರದ ಬಿಡಿಎ ಲೇಔಟ್ ಗಳಿಗೆ ಅನ್ವಯವಾಗುತ್ತದೆ. ಎಂದು ತಿಳಿಸಿದರು.

ಬೆಂಗಳೂರಿನ ಅನೇಕ ಲೇಔಟ್​ಗಳಲ್ಲಿ ಬಿಬಿಎಂಪಿ ಮತ್ತು ಬಿಡಿಎ ರಸ್ತೆ, ಫುಟ್​ಪಾತ್, ಪೈಪ್​ಲೈನ್​ಗಳು, ನೈಮರ್ಲ್ಯಸುಧಾರಣೆ ಮತ್ತು ಪಾರ್ಕ್​ಗಳನ್ನೇ ನಿರ್ಮಿಸಿಲ್ಲ. ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯಗಳನ್ನೇ ನೀಡಿಲ್ಲ. ಅಷ್ಟರಲ್ಲಿ ತೆರಿಗೆಯನ್ನು ಈ ಪ್ರಮಾಣದಲ್ಲಿ ಏರಿಸಿರುವುದು, ನಿರ್ವಹಣಾ ಶುಲ್ಕವನ್ನು  ಹೆಚ್ಚಿಸಿರುವುದು ಅನೇಕ ಸೈಟ್ ಮಾಲೀಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಸೈಟ್ ಮಾಲೀಕರು ಬಿಡಿಎ ರೇರಾ ಮತ್ತು ರಾಜ್ಯ ಸರ್ಕಾರಕ್ಕೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ಈಗ ಕೊರೋನಾ ಲಾಕ್​ಡೌನ್​ ತೆಗೆಯಲಾಗುತ್ತಿದ್ದು, ಜನ ಜೀವನ,  ವ್ಯಾಪಾರ-ವಹಿವಾಟು ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ, ಅಷ್ಟರಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಆಸ್ತಿ ತೆರಿಗೆಯನ್ನು ದ್ವಿಪಟ್ಟು ಹೆಚ್ಚು ಮಾಡಿರುವುದು ನಗರದ ಆಸ್ತಿ ಮಾಲೀಕರ ಪಾಲಿಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com