ಕೊರೋನಾ ಅಬ್ಬರ ತಡೆಗೆ ಕರ್ನಾಟಕದಲ್ಲಿ ಮೇ 10 ರಿಂದ 24ರ ವರೆಗೆ ಸಂಪೂರ್ಣ ಲಾಕ್`ಡೌನ್ ಘೋಷಣೆ!

ರಾಜ್ಯದಲ್ಲಿ ಜನತಾ ಕರ್ಫ್ಯೂ ಹೊರತಾಗಿಯೂ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮೇ 10ರಿಂದ 24ರ ವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್'ಡೌನ್ ಘೋಷಣೆ ಮಾಡಿದ್ದಾರೆ.

Published: 07th May 2021 08:10 PM  |   Last Updated: 07th May 2021 08:15 PM   |  A+A-


Yediyurappa

ಯಡಿಯೂರಪ್ಪ

Posted By : Srinivasamurthy VN
Source : ANI

'ಇದು ತಾತ್ಕಾಲಿಕ ನಿರ್ಧಾರ', ಊರು ತೊರೆಯದಂತೆ ವಲಸೆ ಕಾರ್ಮಿಕರಿಗೆ ಸಿಎಂ ಮನವಿ

ಬೆಂಗಳೂರು: ರಾಜ್ಯದಲ್ಲಿ ಜನತಾ ಕರ್ಫ್ಯೂ ಹೊರತಾಗಿಯೂ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮೇ 10 ರಿಂದ 24ರ ವರೆಗೆ ರಾಜ್ಯಾದ್ಯಂತ ಸಂಪೂರ್ಣ ಲಾಕ್'ಡೌನ್ ಘೋಷಣೆ ಮಾಡಿದ್ದಾರೆ.

ಈ ಕುರಿತಂತೆ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಅಧಿಕತವಾಗಿ ಘೋಷಣೆ ಮಾಡಿದ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಮೇ 10ರ ಬೆಳಿಗ್ಗೆ 6.30ರಿಂದ 24ರ ಬೆಳಿಗ್ಗೆ 6.30ರವರೆಗೆ ಸಂಪೂರ್ಣ ಲಾಕ್‌ಡೌನ್‌ ಮಾಡುವುದಾಗಿ ಘೋಷಿಸಿದ್ದಾರೆ.

'ಕರ್ನಾಟದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಹೆಚ್ಚಾಗಿರುವ ಕಾರಣ ಸೋಂಕು ನಿಯಂತ್ರಣಕ್ಕೆ ಲಾಕ್​ಡೌನ್ ಅನಿವಾರ್ಯ ಎಂದು ಹೇಳಿರುವ ಸಿಎಂ ಬಿಎಸ್ ವೈ, ರಾಜ್ಯದಲ್ಲಿ ಸಾವು-ನೋವುಗಳನ್ನು ತಡೆಗಟ್ಟಬೇಕೆಂದರೆ ಲಾಕ್​ಡೌನ್​ ಮಾಡಲೇಬೇಕೆಂದು ತಜ್ಞರು ಕೂಡಾ ಮೇಲಿಂದ ಮೇಲೆ ಎಚ್ಚರಿಕೆ ನೀಡಿದ್ದರು.  ತಜ್ಞರ ಅಭಿಪ್ರಾಯದಂತೆ ಲಾಕ್ಡೌನ್ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಇದೇ ವೇಳೆ ಲಾಕ್ ಡೌನ್ ವೇಳೆ ಎಲ್ಲಾ ಹೋಟೆಲ್‌ಗಳು, ಪಬ್‌ಗಳು ಮತ್ತು ಬಾರ್‌ಗಳು ಮುಚ್ಚಲ್ಪಡುತ್ತವೆ. ಬೆಳಿಗ್ಗೆ 6ರಿಂದ10ರವರೆಗೆ ಮಾತ್ರ ತಿನಿಸುಗಳು, ಮಾಂಸದ ಅಂಗಡಿಗಳು ಮತ್ತು ತರಕಾರಿ ಅಂಗಡಿಗಳು ಕಾರ್ಯನಿರ್ವಹಿಸಬಹುದು. ಅದೂ ಹೊಟೆಲ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅವಕಾಶವಿರುತ್ತದೆ.  ಬೆಳಗ್ಗೆ 10 ಗಂಟೆಯ ಬಳಿಕ ಯಾರೂ ಕೂಡ ರಸ್ತೆಗಳಲ್ಲಿ ಓಡಾಡುವಂತಿಲ್ಲ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಗತ್ಯ ವಸ್ತುಗಳ ಸರಬರಾಜಿಗೆ ಗೂಡ್ಸ್ ವಾಹನಗಳ ಓಡಾಟ ಇರಲಿದ್ದು, ಆನ್‌ಲೈನ್ ಡೆಲಿವರಿ ಸರ್ವಿಸ್‌ಗೂ ಅವಕಾಶ ನೀಡಲಾಗಿದೆ ಎಂದು ಹೇಳಿದರು.

'ಇದು ತಾತ್ಕಾಲಿಕ ನಿರ್ಧಾರ, ಊರು ತೊರೆಯದಂತೆ ವಲಸೆ ಕಾರ್ಮಿಕರಿಗೆ ಸಿಎಂ ಮನವಿ'
ಇದೇ ವೇಳೆ ಹಾಲಿ ಘೋಷಣೆ ಮಾಡಲಾಗಿರುವ ಲಾಕ್ ಡೌನ್ ನಿರ್ಧಾರ ತಾತ್ಕಾಲಿಕವಾಗಿದ್ದು, ವಲಸೆ ಕಾರ್ಮಿಕರು ಊರು ತೊರೆಯಬಾರದು ಎಂದು ನಾನು ವಿನಂತಿಸುತ್ತೇನೆ. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಸಾವು-ನೋವುಗಳು ಸಂಭವಿಸುತ್ತಿರುವದರಿಂದ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಸಿಎಂ ಸ್ಪಷ್ಟನೆ  ನೀಡಿದ್ದಾರೆ.

ಗುರುವಾರ ಕೇರಳ ಮತ್ತು ರಾಜಸ್ಥಾನದಲ್ಲಿ ಕಂಪ್ಲೀಟ್ ಲಾಕ್‍ಡೌನ್ ಘೋಷಣೆಯಾಗಿದೆ. ಬಹುತೇಕ ರಾಜ್ಯಗಳು ಲಾಕ್‍ಡೌನ್ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಕಂಪ್ಲೀಟ್ ಲಾಕ್‍ಡೌನ್ ಮಾಡಿ ಕೊರೊನಾ ಚೈನ್ ಲಿಂಕ್ ಕಟ್ ಮಾಡಲು ಸರ್ಕಾರ ಮುಂದಾಗಿದೆ. 


Stay up to date on all the latest ರಾಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp