ಬೆಂಗಳೂರಿನಲ್ಲಿ ಬೀದಿ ನಾಯಿ‌ಗಳ ದಾಳಿಯಿಂದ ವೃದ್ಧೆ ಸಾವು

ಬೀದಿ ನಾಯಿ‌ಗಳು ಕಚ್ಚಿ ವೃದ್ಧೆಯೊಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಶಶಿಧರ್ ಲೇಔಟ್​​ನ ದ್ವಾರಕನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೀದಿ ನಾಯಿ‌ಗಳು ಕಚ್ಚಿ ವೃದ್ಧೆಯೊಬ್ಬರು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಶಶಿಧರ್ ಲೇಔಟ್​​ನ ದ್ವಾರಕನಗರದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಅಂದಾಜು 60ರಿಂದ 65 ವರ್ಷದ ವೃದ್ಧೆ ಮೃತಪಟ್ಟಿದ್ದು, ವೃದ್ಧೆಯ ಹೆಸರು ತಿಳಿದು ಬಂದಿಲ್ಲ. ಪೊಲೀಸರು ಮಾಹಿತಿ ನೀಡಿದ್ದಾರೆ. ವೃದ್ಧೆ, ನಿರ್ಗತಿಕರಾಗಿದ್ದು, ಶುಕ್ರವಾರ ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನು ಬೀದಿ ನಾಯಿಗಳು ಬೆನ್ನಟ್ಟಿದ್ದವು. ಕೂಡಲೇ ಸ್ಥಳೀಯರೇ ಧಾವಿಸಿ ನಾಯಿಗಳನ್ನು ಓಡಿಸಿ  ವೃದ್ಧೆಯನ್ನು ರಕ್ಷಿಸಿದ್ದರು. ತಡರಾತ್ರಿ ಮತ್ತೆ ನಾಯಿಗಳು ವೃದ್ಧೆ ಮೇಲೆ‌ ದಾಳಿ ಮಾಡಿ ಕಚ್ಚಿವೆ. 

ಅದರಿಂದ ತೀವ್ರವಾಗಿ ಗಾಯಗೊಂಡಿದ್ದ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಓರ್ವರು ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವೃದ್ಧೆಯ ಮುಖ ಹಾಗೂ ಕಾಲು ಭಾಗಗಳನ್ನು ನಾಯಿಗಳು ಸಂಪೂರ್ಣ ಕಚ್ಚಿ ತಿಂದು ಹಾಕಿವೆ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ತಲಘಟ್ಟಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com