ಹಲೋ ಡಾಕ್ಟರ್: ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಂದ ಕೋವಿಡ್ ಹೆಲ್ಪ್ ಲೈನ್ ಆರಂಭ

ಪರೀಕ್ಷೆಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ತಮ್ಮ ಖಾಲಿ ಸಮಯದಲ್ಲಿ ಕೋವಿಡ್ ಹೆಲ್ಪ್ ಲೈನ್ ಆರಂಭಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೋವಿಡ್-19 ತಪಾಸಣೆ ಚಿತ್ರ
ಕೋವಿಡ್-19 ತಪಾಸಣೆ ಚಿತ್ರ

ಬೆಂಗಳೂರು: ಪರೀಕ್ಷೆಗಳಿಗಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ತಮ್ಮ ಖಾಲಿ ಸಮಯದಲ್ಲಿ ಕೋವಿಡ್ ಹೆಲ್ಪ್ ಲೈನ್ ಆರಂಭಿಸುವ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಏಡ್ಸೊ (AIDSO) ಎಂಬ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಮಿತಿಯು ಮೇ 22 ರಿಂದ ಕೋವಿಡ್- 19 ರೋಗಲಕ್ಷಣಗಳನ್ನು ಹೊಂದಿರುವವರಿಗೆ ಉಚಿತ ಟೆಲಿ-ಕ್ಲಿನಿಕ್ ‘ಹಲೋ ಡಾಕ್ಟರ್’ ಅನ್ನು ಪ್ರಾರಂಭಿಸಿದೆ. ಸುಮಾರು 35-40 ವೈದ್ಯರು ಹಲೋ ಡಾಕ್ಟರ್ ಟೆಲಿಸೇವೆಯಲ್ಲಿ ತೊಡಗಿಸಿಕೊಳ್ಳಲ್ಲಿದ್ದು,  ಇದಕ್ಕಾಗಿ ರಾಜ್ಯದಾದ್ಯಂತ ಸುಮಾರು 10 ಸ್ವಯಂಸೇವಕ ವಿದ್ಯಾರ್ಥಿಗಳು ಕಾರ್ಯಮಗ್ನರಾಗಿದ್ದಾರೆ ಎಂದು ಏಡ್ಸೋ ರಾಜ್ಯ ಕಾರ್ಯದರ್ಶಿ ಸದಸ್ಯ ಮತ್ತು ಬೆಂಗಳೂರು ಜಿಲ್ಲಾ ಖಜಾಂಚಿ ವಿನಯ್ ಚಂದ್ರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಕೋವಿಡ್ -19 ಗಾಗಿ ಹೋಮ್ ಐಸೊಲೇಷನ್ ಮತ್ತು ಪ್ರಾಥಮಿಕ ಚಿಕಿತ್ಸೆಗಾಗಿ ತಜ್ಞರಿಂದ ಮಾರ್ಗದರ್ಶನ, ತೊಂದರೆಯಲ್ಲಿರುವವರಿಗೆ ಸಮಾಲೋಚನೆ ಮತ್ತು ಚಿಕಿತ್ಸೆಯನ್ನು ಟೆಲಿ-ಸಮಾಲೋಚನೆಯ ಮೂಲಕ ನೀಡಲಾಗುತ್ತದೆ. ಆರಂಭದಲ್ಲಿ ಸೋಮವಾರದಿಂದ ಶನಿವಾರದವರೆಗೆ (ಬೆಳಿಗ್ಗೆ 9-10 ಮತ್ತು ಸಂಜೆ  4-5) ತಲಾ ಒಂದು ಗಂಟೆಯ ಎರಡು ಸೆಷನ್‌ಗಳು ಮತ್ತು ಭಾನುವಾರ ಬೆಳಿಗ್ಗೆ 10-11; ಮಧ್ಯಾಹ್ನ 12 ರಿಂದ ಮಧ್ಯಾಹ್ನ 1, ಸಂಜೆ5 ರಿಂದ 6 ಗಂಟೆ) ಮೂರು ಸೆಷನ್‌ಗಳು ನಡೆಯಲಿದೆ ಎಂದು ವಿನಯ್ ಹೇಳಿದರು.

ಏತನ್ಮಧ್ಯೆ, 4,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸದಸ್ಯರ ಪಡೆಯನ್ನು ಹೊಂದಿರುವ ಬೆಂಗಳೂರು ವಿದ್ಯಾರ್ಥಿ ಸಂಘಟನೆ ವೇದಿಕೆಯು ವಿವಿಧ ತಂಡಗಳಾಗಿ ವಿಭಜನೆಯಾಗಿ, ಪ್ರತಿಯೊಂದು ತಂಡವೂ ಅಗತ್ಯವಿರುವವರಿಗೆ ಸಹಾಯ ಮಾಡಲು ಕಾರ್ಯಪ್ರವೃತ್ತವಾಗಿವೆ. ಅಂತೆಯೇ 100 ಸದಸ್ಯರ ತಂಡಗಳಾಗಿ  ವಿಭಜನೆಯಾಗಿ ಸ್ಥಳೀಯ ಸೋಂಕಿತರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ಮಾಡುತ್ತಿದೆ. 

ಆಸಕ್ತರು 9164220387, 9035762866, 8951824630, 9538627750, 8880744437, 9632127094 ನಂಬರ್ ಗಳಿಗೆ ಕರೆ ಮಾಡಿ ವೈದ್ಯರ ಜೊತೆ ಸಮಾಲೋಚನೆಗಾಗಿ ಸಮಯ ಕಾಯ್ದಿರಿಸಬಹುದು.

ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಅಥವಾ ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಈ ತಂಡಗಳು ವೈದ್ಯಕೀಯ ವಿದ್ಯಾರ್ಥಿಗಳೊಂದಿಗೆ ಆರೋಗ್ಯ ತಪಾಸಣೆ ಮಾಡಿಸುವ ಜವಾಬ್ದಾರಿ ಹೊತ್ತಿವೆ ಎಂದು ಬೆಂಗಳೂರು ವಿದ್ಯಾರ್ಥಿ ಸಮುದಾಯದ ಅಧ್ಯಕ್ಷ ಧ್ರುವ್ ಜಟ್ಟಿ ಹೇಳಿದರು, ಅಂತೆಯೇ ಅಗತ್ಯ  ಇರುವವರಿಗೆ ಈ ತಂಡವು ವ್ಯಾಕ್ಸಿನೇಷನ್ ನೋಂದಣಿಗೆ ತಾಂತ್ರಿಕ ಸಹಾಯವನ್ನೂ ಕೂಡ ನೀಡಲಿದೆ ಎಂದು ಅವರು ಹೇಳಿದರು. ನೆರವಿಗಾಗಿ ತಂಡವನ್ನು ಫೇಸ್ ಬುಕ್, ಟ್ವಿಟರ್ ಮತ್ತು 7760161751 ಈ ಸಂಖ್ಯೆಯ ವಾಟ್ಸಪ್ ನಲ್ಲಿ ಸಂಪರ್ಕಿಸಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com