ಬಿಬಿಎಂಪಿ ವಾರ್ ರೂಂಗೆ ಸಿಎಂ ಖುದ್ದು ಭೇಟಿ: ಸ್ವತಃ ಕರೆ ಸ್ವೀಕರಿಸಿ ಸಮಸ್ಯೆ ಆಲಿಸಿ, ಸ್ಪಂದಿಸಿದ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಂಜೆ ದಿಢೀರನೆ ನಗರದ ದೊಮ್ಮಲೂರಿನಲ್ಲಿರುವ ಬಿಬಿಎಂಪಿಯ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಿಬಿಎಂಪಿ ವಾರ್ ರೂಮ್ ನಲ್ಲಿ ಸಿಎಂ ಯಡಿಯೂರಪ್ಪ
ಬಿಬಿಎಂಪಿ ವಾರ್ ರೂಮ್ ನಲ್ಲಿ ಸಿಎಂ ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಂಜೆ ದಿಢೀರನೆ ನಗರದ ದೊಮ್ಮಲೂರಿನಲ್ಲಿರುವ ಬಿಬಿಎಂಪಿಯ ವಾರ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ತಾವೇ ಖುದ್ದಾಗಿ ವಾರ್ ರೂಂನ ಕಾಲ್ ಸೆಂಟರ್ ನಲ್ಲಿ ಕುಳಿತು ಕರೆಯೊಂದನ್ನು ಸ್ವೀಕರಿಸಿದರು. ಕರೆ ಮಾಡಿದ ವ್ಯಕ್ತಿ ಐಸಿಯು ಹಾಸಿಗೆಗಾಗಿ ಮನವಿ ಮಾಡಿದ. ಅದಕ್ಕೆ ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿಗಳು ಐಸಿಯು ವ್ಯವಸ್ಥೆಯನ್ನೂ ಮಾಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, ಕೊರೋನಾ ಸೋಂಕಿತರಿಗೆ ಎದುರಾಗಿದ್ದ ಆಕ್ಸಿಜನ್ ಹಾಗೂ ಐಸಿಯು ಹಾಸಿಗೆಗಳ ಸಮಸ್ಯೆ ಸುಧಾರಿಸಿದೆ. ಹಾಗೆಯೇ ಆಸ್ಪತ್ರೆಗಳಲ್ಲಿ ಐಸಿಯೂ ಬೆಡ್ ಗಳ ವ್ಯವಸ್ಥೆಯನ್ನೂ ಮಾಡಿದ್ದೇವೆ ಎಂದು ಹೇಳಿದರು. 

ನಗರದಲ್ಲಿ 28 ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಒಂಡು ಸಾವಿರ ಆಕ್ಸಿಜನ್ ಬೆಡ್ ಗಳು ಸೇರಿದಂತೆ ಮೂರು ಸಾವಿರ ಬೆಡ್'ಗಳ ವ್ಯವಸ್ಥೆ ಮಾಡಲಾಗಿದೆ. ದಿನದ 24 ತಾಸುಗಳ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸೇವೆ ಲಭ್ಯವಿರುತ್ತದೆ. ಕೊರೋನಾ ಸ್ಥಿತಿ ಮೊದಲಿಗಿಂತ ಈಗ ಸುಧಾರಣೆಯಾಗಿದೆ. ಆಕ್ಸಿಜನ್ ಹಾಗೂ ಐಸಿಯು ಬೆಡ್ ಗಳು ಕೂಡ ಸೋಂಕಿತರಿಕೆ ಸಕಾಲಕ್ಕೆ ಸಿಗುವಂತೆ ಮಾಡಿದ್ದೇವೆಂದು ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com