ಚಿಕಿತ್ಸೆ ವೇಳೆ ನಿರ್ಲಕ್ಷ್ಯದ ಆರೋಪ: ಕೋವಿಡ್ ಸೋಂಕಿತನ ಕುಟುಂಬಸ್ಥರು, ಆಸ್ಪತ್ರೆ ಸಿಬ್ಬಂದಿ ನಡುವೆ ಜಟಾಪಟಿ

ಚಿಕಿತ್ಸೆ ವೇಳೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಮೇರೆಗೆ ಕೋವಿಡ್ ಸೋಂಕಿತ ವ್ಯಕ್ತಿಯನ್ನು ಬೇರೆ ಆಸ್ಪತ್ರೆಗೆ ರವಾನಿಸಲು ಮುಂದಾಗ ಘಟನೆ ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಚಿಕಿತ್ಸೆ ವೇಳೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಮೇರೆಗೆ ಕೋವಿಡ್ ಸೋಂಕಿತ ವ್ಯಕ್ತಿಯನ್ನು ಬೇರೆ ಆಸ್ಪತ್ರೆಗೆ ರವಾನಿಸಲು ಮುಂದಾಗ ಘಟನೆ ನಗರದ ಕೆಸಿ ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.

ಕೋವಿಡ್ ಸೋಂಕಿಗೆ ತುತ್ತಾಗಿದ್ದ ಇಆರ್‌ಟಿ ಸ್ವಯಂಸೇವಕರಾಗಿದ್ದ 45 ವರ್ಷದ ಮೊಹಮ್ಮದ್ ಫಯಾಜ್ ಅವರ ಆಮ್ಲಜನಕದ ಮಟ್ಟವು 85 ರಷ್ಟಿತ್ತು. ಹೀಗಾಗಿ ಅವರ ಕುಟುಂಬಸ್ಥರು ಮೊದಲು ಬಿಬಿಎಂಪಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಅವರಿಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಬೆಡ್ ದೊರೆತಿತ್ತು. ಮೇ 20ರ ಹೊತ್ತಿಗೆ ಅವರ ಆಮ್ಲಜನಕದ ಮಟ್ಟವು 79ಕ್ಕೆ ಕುಸಿದಿತ್ತು. ಅವರ ಸಿಟಿ ಸ್ಕ್ಯಾನ್ ವರದಿಯಲ್ಲೂ ಕೂಡ ಅವರು ಗಂಭೀರವಾಗಿದ್ದಾರೆ ಎಂದು ಹೇಳಲಾಗಿತ್ತು. 

ಈ ವೇಳೆ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದ ಸಿಬ್ಬಂದಿ ಚಿಕಿತ್ಸೆ ನೀಡಿದ್ದರು. ಪ್ರತಿದಿನ ಅವರ ಆರೋಗ್ಯದ ಕುರಿತು ಕುಟುಂಬಸ್ಥರಿಗೆ ಮಾಹಿತಿ ನೀಡುತ್ತಿದ್ದರು. ಆದರೆ ಕುಟುಂಬಸ್ಥರು ಖುದ್ಧು ತಾವೇ ಫಯಾಜ್ ಅವರ ಆರೋಗ್ಯ ವಿಚಾರಿಸಲು ಬಂದಾಗ ಅವರ ಆಮ್ಲಜನಕದ ಪ್ರಮಾಣ 79ರಲ್ಲಿಯೇ ಇತ್ತು. ಈ ಬಗ್ಗೆ  ಸಿಬ್ಬಂದಿಗಳನ್ನು ಪ್ರಶ್ನಿಸಿದಾಗ ಅವರು ಹೊರಗಿನಿಂದ ಕೆಲ ಔಷಧಿಗಳನ್ನು ತರಲು ಹೇಳಿದರು. ನಾವು ಕೂಡ ಔಷಧಿಗಳನ್ನು ತಂದುಕೊಟ್ಟೆವು. ಆದರೆ ನಾವು ಔಷಧಿಗಳನ್ನು ಕೊಟ್ಟ ನಾಲ್ಕು ದಿನಗಳ ಬಳಿಕ ಅವರಿಗೆ ಔಷಧಿಗಳನ್ನು ನೀಡಿದ್ದಾರೆ. ಅವರ ಆರೋಗ್ಯ ತೀರಾ ಗಂಭೀರವಾದಾಗ ಔಷಧಿಗಳನ್ನು ನೀಡಿದ್ದಾರೆ.  ನಾವೇ ಔಷಧಿಗಳನ್ನು ತಂದು ಕೊಡಬೇಕಾದರೆ ಸರ್ಕಾರಿ ಆಸ್ಪತ್ರೆಗಳಿಗೆ ಏಕೆ ಹೋಗಬೇಕು ಎಂದು ಅವರ ಮಗ ಇಶಾನ್ ಪ್ರಶ್ನಿಸಿದ್ದಾರೆ.

ನಮ್ಮ ತಂದೆಯ ಆರೋಗ್ಯ ಮತ್ತಷ್ಟು ಕ್ಷೀಣಿಸಿದಾಗ ಅವರನ್ನು ಮೇ 25ರಂದು ಬೇರೆ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದೆವು. ಈ ವೇಳೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ಸೂಚಿಸಿದ್ದ ಔಷಧಿಗಳು ಅಗತ್ಯವಿಲ್ಲ ಎಂದು ಖಾಸಗಿ ಆಸ್ಪತ್ರೆಯಲ್ಲಿ ಹೇಳಿದರು. ಅಗತ್ಯವೇ ಇಲ್ಲದ ಔಷಧಿಗಳನ್ನು ಅವರು ತರಿಸಿದ್ದೇಕೆ? ಎಂದು ಇಶಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಕೆಸಿ ಜನರಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಬಿ.ಆರ್.ವೆಂಕಟೇಶಯ್ಯ ಅವರು, ವೈದ್ಯರು ಸೂಚಿಸಿದ ಔಷಧಿಗಳನ್ನು ಹಿಂದಿನ ಆಸ್ಪತ್ರೆಯಿಂದ ಉಲ್ಲೇಖಿಸಲಾಗಿತ್ತು. ರೋಗಿಯು ಕೂಡ ಅದೇ ಔಷಧಿಗಳನ್ನು ನೀಡುವಂತೆ ಒತ್ತಾಯಿಸಿದರು. ನಮ್ಮಲ್ಲಿ ಸ್ಟಾಕ್ ಇರಲಿಲ್ಲ, ಆದ್ದರಿಂದ ನಾವು ಅದನ್ನು ಹೊರಗಿನಿಂದ ಖರೀದಿಸಲು ಕೇಳಿದೆವು. ಅಲ್ಲದೆ ಅವರು ಚೇತರಿಸಿಕೊಳ್ಳುತ್ತಿದ್ದರು. ಹೀಗಾಗಿ ಅವರನ್ನು ಜನರಲ್ ವಾರ್ಡ್‌ಗೆ ಸ್ಥಳಾಂತರಿಸಲು ಸಿದ್ಧರಾಗಿದ್ದರು. ಆದರೆ ವೈದ್ಯಕೀಯ ಸಲಹೆಯ ವಿರುದ್ಧ ಅವರು ಡಿಸ್ಚಾರ್ಜ್ ಆಗಿದ್ದಾರೆ. ಆಮ್ಲಜನಕದ ಮಟ್ಟವನ್ನು ಮೇಲ್ವಿಚಾರಣೆ ಮಾಡುವಲ್ಲಿ  ಅಥವಾ ಔಷಧಿಗಳನ್ನು ನೀಡುವಲ್ಲಿ ಯಾವುದೇ ನಿರ್ಲಕ್ಷ್ಯವಾಗಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com