ರಾಜ್ಯದ ಎಲ್ಲಾ ಸಂಚಾರಿ ಪೊಲೀಸರಿಗೆ ರೈನ್ ಕೋಟ್: ಸಚಿವ ಬೊಮ್ಮಾಯಿ

ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಂಚಾರ ವಿಭಾಗದ ಪೊಲೀಸರಿಗೆ ಸರ್ಕಾರದ ವತಿಯಿಂದಲೇ ರೈನ್ ಕೋಟ್ ವಿತರಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 
ಪೊಲೀಸರಿಗೆ ರೇನ್ ಕೋಟ್ ವಿತರಿಸುತ್ತಿರುವ ಸಚಿವ ಬೊಮ್ಮಾಯಿ
ಪೊಲೀಸರಿಗೆ ರೇನ್ ಕೋಟ್ ವಿತರಿಸುತ್ತಿರುವ ಸಚಿವ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿಗಳ ಸೂಚನೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸಂಚಾರ ವಿಭಾಗದ ಪೊಲೀಸರಿಗೆ ಸರ್ಕಾರದ ವತಿಯಿಂದಲೇ ರೈನ್ ಕೋಟ್ ವಿತರಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ. 

ಬೆಂಗಳೂರು ಮೆಟ್ರೋ ರೈಲು ನಿಗಮ, ಎಂಬೆಸ್ಸಿ ಮತ್ತು ಆಕ್ಸ್ ಇಂಟರ್ ನೆಟ್ ಕಂಪನಿ ಸಹಯೋಗದಲ್ಲಿ ಬುಧವಾರ ನಗರದ ಪುರಭವನದ ಬಳಿ ಬೆಂಗಳೂರು ಸಂಚಾರ ಪೊಲೀಸ್ ವಿಭಾಗ ಬುಧವಾರ ಆಯೋಜಿಸಿದ್ದ ಪೊಲೀಸರಿಗೆ ರೈನ್ ಕೋಟ್ ಹಾಗೂ ಫೇಸ್ ಶೀಲ್ಡ್ ಸಾಂಕೇತಿಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಳೆ, ಗಾಳಿ, ಹಾಗೂ ಚಳಿ ಎನ್ನದೆ ಕರ್ತವ್ಯ ನಿರ್ವಹಿಸುವ ಪೊಲೀಸರ ಸಂಕಷ್ಟ ತಿಳಿದಿದೆ. ಹೀಗಾಗಿ ಮಳೆಯಲ್ಲಿ ರಕ್ಷಣೆಗೆ ಪೊಲೀಸರಿಗೆ ಉಡುಪು ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ. 

ನಗರದಲ್ಲಿ ಸಂಚಾರ ದಟ್ಟಣೆ ತಗ್ಗಿಸುವ ಸಲುವಾಗಿ ನಡೆದಿರುವ 12 ಹೈಸ್ಪೀಡ್ ಕಾರಿಡಾರ್ ಗಳ ನಿರ್ಮಾಣ ಕಾಮಗಾರಿ ಎಂಟು ತಿಂಗಳಲ್ಲಿ ಮುಗಿಯಲಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ನಗರ ಪ್ರವೇಶಿಸುವ ವಾಹನಗಳಿಂದ ಉಂಟಾಗುವ ದಟ್ಟಣೆ ಕಡಿಮೆಯಾಗಲಿದೆ ಎಂದು ತಿಳಿಸಿದ್ದಾರೆ. 

ನಗರದ ಪೊಲೀಸ್ ಠಾಣೆಗಳ ಆಧುನೀಕರ ಕೆಲಸವು ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಸಾಗೋಂಪಾಗಿ ಸಾಗಿದೆ. ನಗರದ ಪೊಲೀಸ್ ವ್ಯವಸ್ಥೆಯ ಪುನಾರಚನೆಗೆ ಕೂಡ ನಿರ್ಧರಿಸಲಾಗಿದೆ. 

ಕೊರೋನಾ ಸಂಕಷ್ಟದ ಕಾಲದಲ್ಲೂ ಕೂಡ ಎದೆಗುಂದದೆ ಹಗಲಿರುಳು ಕಾರ್ಯ ನಿರ್ವಹಿಸುತ್ತಿರುವ ಸಂಚಾರ ವಿಭಾಗದ ಪೊಲೀಸರಿಗೆ ಎಂಬೆಸ್ಸಿ ಕಂಪನಿ ರೂ.15 ಲಕ್ಷ ವೆಚ್ಚದಲ್ಲಿ 4500 ಫೇಸ್ ಶೀಲ್ಡ್, 8 ಸಾವಿರ ಹ್ಯಾಂಡ್ ಗ್ಲೌಸ್ ಗಳನ್ನು ಸಿಎಸ್ಆರ್ ನಿಧಿಯಲ್ಲಿ ನೀಡಿದೆ. ಆಕ್ಟ್ ಇಂಟರ್ ನೆಟ್ ಕಂಪನಿ ರೂ.57 ಲಕ್ಷ ವೆಚ್ಚದಲ್ಲಿ 4750 ರೈನ್ ಕೋಟ್ ಗಳು ಹಾಗೂ ಬಿಎಂಆರ್'ಸಿಎಲ್ ವತಿಯಿಂದ ರೂ.88 ಲಕ್ಷ ಮೊತ್ತ ಮೇರಿಯಲ್ ಮೆಸೇಜಿಂಗ್ ಸಿಸ್ಟಂಗಳನ್ನು ಕೊಡುಗೆಯಾಗಿ ನೀಡಿವೆ. ಈ ಕಂಪನಿಗಳ ಸಾಮಾಜಿಕ ಕಾರ್ಯಕ್ರಮವನ್ನು ಅಭಿನಂದಿಸುತ್ತೇನೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com