ಬೆಂಗಳೂರಿಗೆ 16ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಆಗಮನ

ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊತ್ತ 16ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಶುಕ್ರವಾರ ನಗರದ ವೈಟ್ ಫೀಲ್ಡ್'ಗೆ ಆಗಮಿಸಿದೆ.
ಆಕ್ಸಿಜನ್ ಎಕ್ಸ್ ಪ್ರೆಸ್
ಆಕ್ಸಿಜನ್ ಎಕ್ಸ್ ಪ್ರೆಸ್

ಬೆಂಗಳೂರು: ದ್ರವೀಕೃತ ವೈದ್ಯಕೀಯ ಆಮ್ಲಜನಕವನ್ನು ಹೊತ್ತ 16ನೇ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಶುಕ್ರವಾರ ನಗರದ ವೈಟ್ ಫೀಲ್ಡ್'ಗೆ ಆಗಮಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಕ್ಸಿಜನ್ ನೋಡಲ್ ಅಧಿಕಾರಿ ಮನೀಶ್ ಮೌದ್ಗಿಲ್ ಅವರು, ಅಗತ್ಯ ಇರುವ ಪ್ರದೇಶಗಳಿಗೆ ಈ ಆಕ್ಸಿಜನ್'ನ್ನು ಪೂರೈಕೆ ಮಾಡಲಾಗುತ್ತಿದೆ. ಪ್ರತೀನಿತ್ಯ 850 ಮೆ.ಟನ್ ಆಕ್ಸಿಜನ್ ಬೆಂಗಳೂರಿನಲ್ಲಿ ಬಳಕೆಯಾಗುತ್ತಿದೆ. ಹೀಗಾಗಿ ಬೆಂಗಳೂರಿಗೆ 150 ಮೆ.ಟನ್ ಬಫರ್ ಸ್ಟಾಕ್ ಆಗಿ ಇರಿಸಿದ್ದೇವೆ. ಈ ಬಫರ್ ಸ್ಟಾಕ್'ನ್ನು ಕೊರತೆ ಎದುರಾದ ಕೂಡಲೇ ಬಳಕೆ ಮಾಡಲಾಗುತ್ತದೆ. ಜಿಲ್ಲೆಗಳಲ್ಲೂ ಬಫರ್ ಸ್ಟಾಕ್ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. 

ಜಿಲ್ಲೆಗಳು ಹಾಗೂ ಆಸ್ಪತ್ರೆಗಳಿಗೆ ಎಷ್ಟರ ಪ್ರಮಾಣದಲ್ಲಿ ಆಕ್ಸಿಜನ್ ರವಾನಿಸಲಾಗುತ್ತಿದೆ ಎಂಬುದರ ಕುರಿತು ರಾಜ್ಯ ಸರ್ಕಾರದ ಯಾವುದೇ ಅಧಿಕಾರಿಗಳ ಬಳಿಯೂ ಮಾಹಿತಿಗಳಿಲ್ಲ. 

ದ್ರವೀಕೃತ ವೈದ್ಯಕೀಯ ಆಮ್ಲಜನಕದ ನೋಡಲ್ ಅಧಿಕಾರಿ ಪ್ರತಾಪ್ ರೆಡ್ಡಿ ಮಾತನಾಡಿ, ಖಾಸಗಿ ವಿತರಕರಿಂದಲೇ ಎಲ್ಲಾ ಆಕ್ಸಿಜನ್ ಗಳೂ ರಾಜ್ಯಕ್ಕೆ ಆಗಮಿಸಿದೆ. ಎಲ್ಲಾ ಆಕ್ಸಿಜನ್ ಗಳು ಒಂದೆಡೆ ಬರುತ್ತಿದ್ದು, ನಂತರ ಈ ಆಕ್ಸಿಜನ್ ನ್ನು ಅಗತ್ಯವಿರುವ ಪ್ರದೇಶಗಳಿಗೆ ರವಾನಿಸಲಾಗುತ್ತಿದೆ. ಭಾರತೀಯ ನೌಕಾಪಡೆಯಿಂದ ಬರುತ್ತಿರುವ ಆಕ್ಸಿಜನ್ ಉಚಿತವಾಗಿ ಬರುತ್ತಿವೆ. ಬಳಿಕ ಇದನ್ನು ರಾಜ್ಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. 

ರೈಲಿನ ಮುಖಾಂತರ ಈವರೆಗೂ ರಾಜ್ಯಕ್ಕೆ 1894.71 ಮೆ.ಟನ್ ಆಕ್ಸಿಜನ್ ಬಂದಿದೆ. ಬಾಕಿಯಿರುವ ಆಕ್ಸಿಜನ್ ನ್ನು ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಮೇ.1 ರಂದು ರೈಲ್ವೇ ಮಂಡಳಿಗೆ ಮನವಿ ಮಾಡಿಕೊಂಡಿತ್ತು. ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಕೂಡ ರೈಲ್ವೇ ಮಂಡಳಿ ಈ ಕುರಿತು ಯಾವುದೇ ಮಾಹಿತಿಗಳನ್ನೂ ನೀಡಿಲ್ಲ ಎಂದು ಹೇಳಲಾಗುತ್ತಿದೆ. 

ನಾನು ಬಿಝಿ ಇದ್ದೇನೆ. ಇಂತಹ ಸಣ್ಣ ವಿಚಾರಗಳಿಗೆ ಸಮಯ ನೀಡಲು ಸಾಧ್ಯವಿಲ್ಲ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com