ಉಪಚುನಾವಣೆ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿಯಲ್ಲ: ಬಿಎಸ್ ವೈ

ಉಪಚುನಾವಣೆ ಫಲಿತಾಂಶ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಾರದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಎಸ್ ವೈ ಮತ್ತು ಸಿಎಂ ಬೊಮ್ಮಾಯಿ
ಬಿಎಸ್ ವೈ ಮತ್ತು ಸಿಎಂ ಬೊಮ್ಮಾಯಿ

ಬೆಂಗಳೂರು: ಉಪಚುನಾವಣೆ ಫಲಿತಾಂಶ ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಲಾರದು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆ ಕುರಿತು ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂಧಗಿಯಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ಸಾಧಿಸಿದ್ದೇವೆ. ಕಾಂಗ್ರೆಸ್ ನಾಯಕರು ಏಕೆ ಹಿಗ್ಗುತ್ತಿದ್ದಾರೆಯೋ ಗೊತ್ತಿಲ್ಲ.  ಹಾನಗಲ್‌ನ ಗೆಲುವು ಕಾಂಗ್ರೆಸ್ ಗೆಲುವು ಅಲ್ಲ. ಅದು ಶ್ರೀನಿವಾಸ್ ಮಾನೆ ಅವರ ಗೆಲುವು ಎಂದು ಹೇಳಿದರು.

ಮಾನೆ ಅವರು ಕ್ಷೇತ್ರದಲ್ಲಿ ಕೊರೊನಾ ಸಂಕಷ್ಟದಲ್ಲಿ ಓಡಾಟ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಹಾನಗಲ್ ಅನ್ನು ಬಿಜೆಪಿ ಮತ್ತೆ ವಶಕ್ಕೆ ಪಡೆಯಲಿದೆ. ನಮ್ಮ ಮತಗಳು ಎಲ್ಲಿಯೂ ಹೋಗಿಲ್ಲ. ಕೇವಲ ಶೇ.2-3 ರಷ್ಟು ಮತಗಳಷ್ಟೇ ಆಚೆ ಈಚೆಯಾಗಿವೆ. ಹಾನಗಲ್ ನಲ್ಲಿ ಗೆಲ್ಲುವ ನಿರೀಕ್ಷೆಯಿತ್ತಾದರೂ ಏಕೆ ಹಿನ್ನಡೆಯಾಗಿದೆ ಎಂಬುದು ಗೊತ್ತಿಲ್ಲ. ಸಿಂಧಗಿಯಲ್ಲಿ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ. ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಹಾನಗಲ್​ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆ ಆಗಿದೆ. ಸಾಧಿಸಿದ್ದೇವೆಂದು ಕಾಂಗ್ರೆಸ್​​ ಸಂಭ್ರಮಿಸುವುದು ಬೇಡ. ಎಲ್ಲಿ ಎಡವಿದ್ದೇವೆ ಎಂದು ನಾವು ಚರ್ಚೆ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗೆ ಭೇಟಿ ನೀಡುತ್ತೇನೆ. ಈ ಸೋಲನ್ನು ಸಿಎಂ ಒಬ್ಬರ ಮೇಲೆ ಹಾಕಲು ಆಗಲ್ಲ. ಎಲ್ಲರೂ ಕುಳಿತು ಸೋಲಿನ ಬಗ್ಗೆ ಚರ್ಚೆಯನ್ನು ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಹಾನಗಲ್ ನಲ್ಲಿ ಬಿಜೆಪಿಗಾಗಿರುವ ಸೋಲು ಸಾಮೂಹಿಕ ಸೋಲು: ಸಚಿವ ವಿ ಸೋಮಣ್ಣ
 
ಒಬ್ಬ ವ್ಯಕ್ತಿಯನ್ನು ಹೊಣೆಗಾರಿಕೆ ಮಾಡಲಾಗುವುದಿಲ್ಲ
ಸಿಂದಗಿಯಲ್ಲಿ ನಿರೀಕ್ಷೆ ಮೀರಿ ಗೆಲುವು ಆಗಿದೆ. 30ಸಾವಿರ ಅಂತರದಲ್ಲಿ ಗೆದ್ದಿದ್ದಾರೆ. ರಮೇಶ್ ಭೂಸನೂರು ಗೆಲುವಿಗೆ ಕಾರಣರಾದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾನಗಲ್ ಸೋಲಿಗೆ ಒಬ್ಬ ವ್ಯಕ್ತಿಯನ್ನು ಹೊಣೆಗಾರಿಕೆ ಮಾಡಲಾಗುವುದಿಲ್ಲ.‌ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಎದುರಿಸಿದ್ದೇವೆ. ಹೀಗಾಗಿ ಹಾನಗಲ್ ಸೋಲಿಗೆ ಒಬ್ಬ ವ್ಯಕ್ತಿಯನ್ನು ಹೊಣೆಗಾರಿಕೆ ಮಾಡಲಾಗುವುದಿಲ್ಲ. ಎಲ್ಲರೂ ಕೂಡ ಜವಾಬ್ದಾರಿ ಹೊರಬೇಕು. ಈ ಸೋಲಿನಿಂದ ಬೊಮ್ಮಾಯಿ‌ ನಾಯಕತ್ವಕ್ಕೆ ಯಾವುದೇ ಹಿನ್ನಡೆಯಿಲ್ಲ. ಮುಂದಿನ ಚುನಾವಣೆಗೂ ಫಲಿತಾಂಶ ದಿಕ್ಸೂಚಿಯಲ್ಲ ಎಂದು ಹೇಳಿದರು.
 
ಹಾನಗಲ್ ಹಿನ್ನಡೆ ಕುರಿತು ಚರ್ಚಿಸುತ್ತೇವೆ
ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲು ಬಹಳ ಉತ್ತಮ ವಾತಾವರಣ ಇತ್ತು, ಆದರೂ ಯಾಕೆ‌ ಹಿನ್ನಡೆಯಾಯ್ತು ಎಂಬುದನ್ನು ಚರ್ಚಿಸುತ್ತೇವೆ. ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್‌ ದೊಡ್ಡ ಸಾಧನೆ ಮಾಡಿದಂತೆ ಬೀಗುವುದು ಬೇಡ. ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ. ನಾನು ರಾಜ್ಯದಲ್ಲಿ ಸಂಘಟನೆ ಮಾಡುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com