ಬೆಂಗಳೂರು: ಹೋಟೆಲಿನಲ್ಲಿ ಗಲಾಟೆ; ಭೀಮಾ ಜ್ಯುವೆಲರಿ ಮಾಲೀಕನ ಪುತ್ರ ಪೊಲೀಸ್ ವಶಕ್ಕೆ
ನಗರದ ಪ್ರತಿಷ್ಠಿತ ಹೋಟೆಲ್ ಒಂದರ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಿಂದ ಭೀಮಾ ಜುವೆಲರಿ ಮಾಲೀಕರ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published: 06th November 2021 09:55 PM | Last Updated: 06th November 2021 09:56 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್ ಒಂದರ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದಿಂದ ಭೀಮಾ ಜುವೆಲರಿ ಮಾಲೀಕರ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಂದು ಗಲಾಟೆ ನಡೆದಿದೆ. ಆರೋಪಿ ವಿಷ್ಣುಭಟ್ ಸದ್ಯ ಪೊಲೀಸರ ವಶದಲ್ಲಿದ್ದಾರೆ. ರಾಯಲ್ ಆರ್ಕೇಡ್ ಹೋಟೆಲಿನಲ್ಲಿ ಗಲಾಟೆ ನಡೆದಿದೆ.
ಹೋಟೆಲಿಗೆ ಹೋದ ವಿಷ್ಣುಭಟ್ ಅಲ್ಲಿನ ಪ್ರಾಥಮಿಕ ನಿಯಮವಳಿಗಳನ್ನು ಅನುಸರಿಸಿಲ್ಲ. ಹೆಸರು, ಯಾರನ್ನು ಭೇಟಿಯಾಗಲು ಬಂದಿರುವುದು. ಎಷ್ಟನೇ ರೂಮ್, ಪೋನ್ ನಂಬರ್ ಇತ್ಯಾದಿ ವಿವರಗಳನ್ನು ಭರ್ತಿ ಮಾಡಲು ಭದ್ರತಾ ಸಿಬ್ಬಂದಿ ಸೂಚಿಸಿದ್ದಾರೆ.
ಇದಕ್ಕೆ ಒಪ್ಪದ ರೂಂಗೆ ಹೋಗಲು ಯತ್ನಿಸಿದಾಗ ವಿಷ್ಣುಭಟ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕೂಡಲೇ ಹೋಟೆಲ್ ಸಿಬ್ಬಂದಿ ಭೀಮಾನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ವಿಷ್ಣುಭಟ್ ನನ್ನು ಪೊಲೀಸರು ಬಂಧಿಸಿದ್ದಾರೆ.