ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಸ್ವರ್ಣಜಯಂತಿ ಫೆಲೋಶಿಪ್
ನವೀನ ಸಂಶೋಧನಾ ಕಲ್ಪನೆಗಳು ಮತ್ತು ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯಕ್ಕಾಗಿ ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಸ್ವರ್ಣಜಯಂತಿ ಫೆಲೋಶಿಪ್'ಗಳನ್ನು ನೀಡಲಾಗಿದೆ.
Published: 09th November 2021 01:39 PM | Last Updated: 09th November 2021 01:39 PM | A+A A-

ಡಾ. ಶ್ರೀಧರನ್ ದೇವರಾಜನ್, ಡಾ. ಮಾಯಾಂಕ್ ಶ್ರೀವಾಸ್ತವ ಮತ್ತು ಸುಭ್ರೋ ಭಟ್ಟಾಚಾರ್ಜಿ
ಬೆಂಗಳೂರು: ನವೀನ ಸಂಶೋಧನಾ ಕಲ್ಪನೆಗಳು ಮತ್ತು ವಿವಿಧ ವಿಭಾಗಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯಕ್ಕಾಗಿ ಬೆಂಗಳೂರಿನ ಮೂವರು ವಿಜ್ಞಾನಿಗಳಿಗೆ ಸ್ವರ್ಣಜಯಂತಿ ಫೆಲೋಶಿಪ್'ಗಳನ್ನು ನೀಡಲಾಗಿದೆ.
ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಶ್ರೀಧರನ್ ದೇವರಾಜನ್ ಮತ್ತು ಡಾ. ಮಾಯಾಂಕ್ ಶ್ರೀವಾಸ್ತವ ಮತ್ತು ಸುಭ್ರೋ ಭಟ್ಟಾಚಾರ್ಜಿ ಸಹಿತ ದೇಶದಾದ್ಯಂತ ವಿವಿಧ ವಿಜ್ಞಾನ ಸಂಸ್ಥೆಗಳ 17 ವಿಜ್ಞಾನಿಗಳು ಸ್ವರ್ಣಜಯಂತಿ ಫೆಲೋಶಿಪ್ ಗಳನ್ನು ಪಡೆದಿದ್ದಾರೆ.
ಭಾರತದ ಸ್ವಾತಂತ್ರ್ಯದ 50ನೇ ವರ್ಷದ ನೆನಪಿಗಾಗಿ ಸ್ವರ್ಣಜಯಂತಿ ಫೆಲೋಶಿಪ್ ಯೋಜನೆಯನ್ನು ಭಾರತ ಸರ್ಕಾರವು ಸ್ಥಾಪಿಸಿದೆ.
ಈ ಯೋಜನೆಯಡಿಯಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮೂಲಕ ಐದು ವರ್ಷಗಳ ಕಾಲ ಪ್ರತೀ ತಿಂಗಳು 25000 ರೂ.ಗಳ ಫೆಲೋಶಿಪ್ ನೀಡಲಾಗುತ್ತದೆ. ಸಂಶೋಧನೆಯನ್ನು ನಿರ್ವಹಿಸಲು ಎಲ್ಲಾ ಅಗತ್ಯತೆಗಳಿಗೆ ಹೆಚ್ಚುವರಿಯಾಗಿ ಐದು ವರ್ಷಗಳಲ್ಲಿ 5 ಲಕ್ಷ ರೂ. ಸಂಶೋಧನಾ ಅನುದಾನ ನೀಡುವ ಮೂಲಕ ಅವರನ್ನು ಬೆಂಬಲಿಸುತ್ತದೆ. ಅವರು ತಮ್ಮ ಮಾತೃ ಸಂಸ್ಥೆಯಿಂದ ಪಡೆಯುವ ವೇತನದ ಜೊತೆಗೆ ಫೆಲೋಶಿಪ್ ಅನ್ನು ಒದಗಿಸಲಾಗುತ್ತದೆ.
ಪ್ರಶಸ್ತಿಗೆ ಆಯ್ಕೆಯಾದ ವಿಜ್ಞಾನಿಗಳು ಸಂಶೋಧನಾ ಯೋಜನೆಯಲ್ಲಿ ಅನುಮೋದಿಸಿದಂತೆ ವೆಚ್ಚದ ವಿಷಯದಲ್ಲಿ ಸ್ವತಂತ್ರ ಮತ್ತು ಹೊಂದಾಣಿಕೆಯೊಂದಿಗೆ ಅನಿಯಂತ್ರಿತ ಸಂಶೋಧನೆಯನ್ನು ಮುಂದುವರಿಸಲು ಅನುಮತಿಸಲಾಗುತ್ತದೆ.
ದೃಢ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಮತ್ತು ಕಠಿಣವಾದ ಮೂರು ಹಂತಗಳ ಪರಿಶೀಲನಾ ಪ್ರಕ್ರಿಯೆಯ ಮೂಲಕ ಆಯ್ಕೆಯಾದ ವಿಜ್ಞಾನಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಚೌಕಟ್ಟಿನಲ್ಲಿ ಮೂಲಭೂತ ಸಂಶೋಧನೆಯನ್ನು ಮುಂದುವರಿಸುತ್ತಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರೊ.ಶ್ರೀಧರನ್ ಅವರು, ತಾವು ಸಂಶೋಧಿಸುತ್ತಿರುವ ಕ್ಷೇತ್ರವು ಕೆಲವು ವಿಷಯಗಳಿಗೆ ಆಯ್ದ ಗಮನವನ್ನು ನೀಡಲು ಮತ್ತು ಇತರರನ್ನು ನಿರ್ಲಕ್ಷಿಸಲು ಮೆದುಳು ನಮಗೆ ಹೇಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದನ್ನು ಸಂಶೋಧಿಸುತ್ತದೆ ಎಂದು ವಿವರಿಸಿದ್ದಾರೆ.
ಇನ್ನು ಮಯಾಂಕ್ ಶ್ರೀವಾಸ್ತವ ಅವರು, ಪವರ್ ಸೆಮಿಕಂಡಕ್ಟರ್ ಮೇಲೆ ಕೇಂದ್ರೀಕರಿಸುವ ಎಲೆಕ್ಟ್ರಾನ್ ಸಾಧನಗಳ ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಸಂಶೋಧನೆ ಮಾಡುತ್ತಿದ್ದಾರೆ. ಭಟ್ಟಾಚಾರ್ಜಿಯವರು ಭೌತಶಾಸ್ತ್ರದಲ್ಲಿ ಸಂಶೋಧನೆ ಮಾಡುತ್ತಾರೆ.