'007 ಮತ್ತೆ ಬರುತ್ತೇವೆ': ಕಳ್ಳರ ಗ್ಯಾಂಗ್​​​ ಬಂಧಿಸುವಲ್ಲಿ ಯಶಸ್ವಿಯಾದ ಬೆಂಗಳೂರು ಪೊಲೀಸರು

ನಗರದಲ್ಲಿ ಜೇಮ್ಸ್ ಬಾಂಡ್ ರೀತಿಯಲ್ಲೇ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ರಾಜಸ್ಥಾನದ ಮೂಲದ ಬಿಚ್ಚು ಗ್ಯಾಂಗ್​​ನ ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರದಲ್ಲಿ ಜೇಮ್ಸ್ ಬಾಂಡ್ ರೀತಿಯಲ್ಲೇ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ರಾಜಸ್ಥಾನದ ಮೂಲದ ಬಿಚ್ಚು ಗ್ಯಾಂಗ್​​ನ ಅರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗ್ಯಾಂಗ್​ನ ಪ್ರಮುಖ ಆರೋಪಿ ಸುನೀಲ್, ಭವಾನಿ ಸಿಂಗ್, ಆಶುರಾಮ್ ಗುಜಾರ್ ಮತ್ತು ಕಿಶೋರ್ ಸಿಂಗ್ ಬಂಧಿತ ಆರೋಪಿಗಳು.

ಆ. 22ರ ರಾತ್ರಿ ಮಾರ್ಕೆಟ್​​ನ ಟೆಕ್ಸ್ ಟೈಲ್ಸ್ ಸೇಲ್ಸ್ ಕಾರ್ಪೊರೇಷನ್ ನಲ್ಲಿ ಕಳ್ಳತನ ಮಾಡಿದ ಆರೋಪಿಗಳು ಶೋರೂಂ ಬೀಗ ಮುರಿದು ಡ್ರಾದಲ್ಲಿದ್ದ ಸುಮಾರು 25.45 ಲಕ್ಷ  ರೂ. ಹಣ ಎಗರಿಸಿ ಪರಾರಿಯಾಗಿದ್ದರು. 

ಗೋಡೆ ಹೊರಗಡೆ '007 ಫೀರ್ ಆಯೇಂಗೇ(ಮತ್ತೆ ಬರುತ್ತೇವೆ)' ಅಂತ ಬರೆದು ಹೋಗಿದ್ದರು. ಕಳ್ಳತನದ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ಟೆಕ್ಸ್ ಟೈಲ್ಸ್  ಶೋರೂಂ ಮಾಲೀಕ ದೂರು ನೀಡಿದ್ದರು. ಬಿಚ್ಚು ಗ್ಯಾಂಗ್ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com