ಹೈಟೆಕ್ ಲ್ಯಾಬ್: ಮಣಿಪಾಲ್ ಆಸ್ಪತ್ರೆ ಜೊತೆ ಬಿಬಿಎಂಪಿ ಒಪ್ಪಂದ

ಬೆಂಗಳೂರಿನಲ್ಲಿ ಹೈಟೆಕ್ ಲ್ಯಾಬ್ ನಿರ್ಮಿಸುವ ಸಂಬಂಧ ಮಣಿಪಾಲ್ ಆಸ್ಪತ್ರೆಯೊಂದಿಗೆ ಬಿಬಿಎಂಪಿ ಒಡಂಬಡಿಕೆ ಮಾಡಿಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್

ಬೆಂಗಳೂರು: ಬೆಂಗಳೂರಿನಲ್ಲಿ ಹೈಟೆಕ್ ಲ್ಯಾಬ್ ನಿರ್ಮಿಸುವ ಸಂಬಂಧ ಮಣಿಪಾಲ್ ಆಸ್ಪತ್ರೆಯೊಂದಿಗೆ ಬಿಬಿಎಂಪಿ ಒಡಂಬಡಿಕೆ ಮಾಡಿಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಮಲ್ಲೇಶ್ವರಂ ಶಾಸಕ ಡಾ.ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶ್ವತ್ಥ ನಾರಾಯಣ್, ತಮ್ಮ ವಿಧಾನಸಭಾ ಕ್ಷೇತ್ರ ಮಲ್ಲೇಶ್ವರಂನಲ್ಲಿ ಪ್ರಾಥಮಿಕವಾಗಿ ಲ್ಯಾಬ್ ಕಾರ್ಯಾರಂಭ ಮಾಡಲಿದ್ದು ಮುಂದಿನ ದಿನಗಳಲ್ಲಿ ಬೆಂಗಳೂರಿನ ಎಲ್ಲೆಡೆ ಲ್ಯಾಬ್ ಕಾರ್ಯಾರಂಭ ಮಾಡಲಿದೆ. ಲ್ಯಾಬ್ ನಿರ್ಮಾಣಕ್ಕೆ ಬಿಬಿಎಂಪಿ ಕಟ್ಟಡವನ್ನು ಒದಗಿಸಲಿದ್ದು, ಮಣಿಪಾಲ್ ಆಸ್ಪತ್ರೆ ಲ್ಯಾಬ್ ಗೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನೀಡಲಿದೆ ಎಂದು ಮಾಹಿತಿ ನೀಡಿದರು.

ಅಂತೆಯೇ ಕೈಗೆಟಕುವ ದರದಲ್ಲಿ ಎಲ್ಲರಿಗೂ ಈ ಲ್ಯಾಬ್ ಸೇವೆ ದೊರೆಯಲಿದ್ದು, ಖಾಸಗಿ ಡಯಾಗ್ನಿಸ್ಟಿಕ್ ಗೆ ಈ ಲ್ಯಾಬ್ ನಲ್ಲಿ ಶೇ.30 ರಷ್ಟು ಕಡಿಮೆ ದರದಲ್ಲಿ ಸೇವೆ ಸಿಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಶಿಫಾರಸ್ಸು ಮಾಡಿದ ರೋಗಿಗಳಿಗೆ ಶೇ.40 ರ ದರದಲ್ಲಿ ಹಾಗೂ ಬಿಪಿಎಲ್ ಕಾರ್ಡುದಾರರಿಗೆ ಶೇ.50ರಷ್ಟು ರಿಯಾಯಿತಿ ಸಿಗಲಿದೆ ಎಂದು ವಿವರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com