ಚುನಾವಣಾ ನೀತಿ ಸಂಹಿತೆ ಬಳಿಕ ನಾಡಗೀತೆ ಬಗ್ಗೆ ಅಂತಿಮ ತೀರ್ಮಾನ: ಸಚಿವ ಸುನಿಲ್ ಕುಮಾರ್

ನಾಡಗೀತೆ ಸಮಯ ಕಡಿತ ಮಾಡುವ ವಿಚಾರ ಮಾಡಬೇಕೇ ಬೇಡವೇ ಎಂಬ ಬಗ್ಗೆ ಈಗಾಗಲೇ ಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿದ್ದು ಚುನಾವಣೆ ನೀತಿ ಸಂಹಿತರ ಬಳಿಕ ಈ ಬಗ್ಗೆ ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ್ ಹೇಳಿದ್ದಾರೆ.
ಸಚಿವ ಸುನಿಲ್ ಕುಮಾರ್
ಸಚಿವ ಸುನಿಲ್ ಕುಮಾರ್

ಬೆಂಗಳೂರು: ನಾಡಗೀತೆ ಸಮಯ ಕಡಿತ ಮಾಡುವ ವಿಚಾರ ಮಾಡಬೇಕೇ ಬೇಡವೇ ಎಂಬ ಬಗ್ಗೆ ಈಗಾಗಲೇ ಸಮಿತಿ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿದ್ದು ಚುನಾವಣೆ ನೀತಿ ಸಂಹಿತರ ಬಳಿಕ ಈ ಬಗ್ಗೆ ಸರ್ಕಾರ ತನ್ನ ಅಂತಿಮ ನಿರ್ಧಾರ ಪ್ರಕಟಿಸುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ಕುಮಾರ್ ಹೇಳಿದ್ದಾರೆ.

ಕನ್ನಡ ರಾಜ್ಯೋತ್ಸವ ಪ್ರಯುಕ್ತ "ಮಾತಾಡ್ ಮಾತಾಡ್ ಕನ್ನಡ" ಶೀರ್ಷಿಕೆಯಡಿ ಅಭಿಯಾನಕ್ಕೆ ಲಾಲ್‌ಬಾಗ್‌ನಲ್ಲಿ ಚಾಲನೆ ನೀಡಿ ಸುದ್ದುಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್,ಕನ್ನಡಕ್ಕೆ ನಾವು ವಿಶೇಷ ಅಭಿಯಾನ ರಾಜ್ಯಾದ್ಯಂತ ಆರಂಭ ಆಗಿದೆ.ಮಾತಾಡ್ ಮಾತಾಡ್ ಸಂಕಲ್ಪದಡಿ ನವೆಂಬರ್ 1ರವರೆಗೂ ಅಭಿಯಾನ ಇರಲಿದೆ. ರಾಜ್ಯದಲ್ಲಿ ಬೇರೆ ಭಾಷೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಕನ್ನಡ ಬೆಳೆಸಬೇಕಾಗಿದೆ. ಒಂದು ವಾರಗಳ ಕಾಲ ಕನ್ನಡಕ್ಕಾಗಿ ಅಭಿಯಾನ ಆರಂಭ ಆಗಿದೆ. ನಾವು ಕುಟುಂಬದ ಸದಸ್ಯರ ಜೊತೆಗೆ ಕನ್ನಡ ಮಾತಾಡೋಣ. ಮಕ್ಕಳು ಹಾಗೂ ಕುಟುಂಬದ ನಡುವೆ ಕನ್ನಡ ಮಾತನಾಡುವುದು ಕಡಿಮೆ ಆಗುತ್ತಿದೆ.ಕನ್ನಡದಲ್ಲಿಯೇ ಸಹಿ ಮಾಡುವ ಅಭ್ಯಾಸ ‌ಮಾಡೋಣ.ಎಲ್ಲಾ ಜಿಲ್ಲಾ, ತಾಲೂಕಿನಲ್ಲಿ ಕನ್ನಡ ಸಾಮೂಹಿಕ ಗಾಯನ ಹಮ್ಮಿಕೊಂಡಿದ್ದೇವೆ.ಕನ್ನಡದ ಮೂರು ಗೀತೆ ಹಾಡನ್ನು ಪ್ರತಿಯೊಬ್ಬರೂ ಹಾಡಬೇಕು.ಕನ್ನಡದ ಪ್ರೇಮ ಭಾಷಣದ ವಸ್ತು ಅಲ್ಲ. ಬೆಂಗಳೂರು ಕೆಂಪೇಗೌಡರಿಂದ ನಿರ್ಮಾಣದ ನಗರವಾಗಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ಅಭಿಯಾನ ಮಾಡುತ್ತಿದ್ದೇವೆ ಎಂದರು.

ಮುಂದಿನ ಒಂದು ವಾರ ಕನ್ನಡ ಪಸರಿಸುವ ಕಾರ್ಯಕ್ರಮ ನಡೆಯಲಿದೆ.ಇವತ್ತು ಬೆಂಗಳೂರಿನಿಂದ ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಶುರುಮಾಡಿದ್ದೇವೆ. ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೇ ಕನ್ನಡ ಭಾಷೆಗಳನ್ನು ಕನ್ನಡ ರಾಜ್ಯದಲ್ಲಿ ತಿಳಿಸಬೇಕು. ಹೀಗಾಗಿ ಕನ್ನಡಕ್ಕಾಗಿ ನಾವು ಅಭಿಯಾನ ಆರಂಭವಾಗಿದೆ. ವಿಶೇಷವಾಗಿ ನವೆಂಬರ್ 28ರಂದು ಬೆಳಗ್ಗೆ 11ರಿಂದ 11:30ರವರೆಗೂ ವಿವಿಧ ಪ್ರಮುಖ ಸ್ಥಳದಲ್ಲಿ ಉದ್ಯಮಿಗಳು, ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು, ಲಕ್ಷ ಕಂಠದಲ್ಲಿ ಸಮೂಹ ಗಾಯನ ಕಾರ್ಯಕ್ರಮ ನಡೆಯುತ್ತದೆ. ಕನ್ನಡದ ಮೂರು ಹಾಡು ಹಾಡಬೇಕು ಎಂದು ಮನವಿ ಮಾಡುತ್ತೇನೆ. ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು, ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಹಾಡುಗಳನ್ನು ಹಾಡಲಾಗುತ್ತದೆ. ಸಮಯವಕಾಶ ಇದ್ದರೆ ಇನ್ನಷ್ಟು ಹಾಡುಗಳನ್ನು ಹಾಡಬಹುದು ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.

ಕನ್ನಡದಲ್ಲಿ ಸಹಿ ಅಭಿಯಾನ
ಸಹಿ ಹಾಗೂ ಸುತ್ತೂಲೆ ಎರಡು ಕನ್ನಡದಲ್ಲೇ ಆಗಬೇಕು. ಇದಕ್ಕೆ ನನ್ನ ಬೆಂಬಲವಿದೆ. ಕನ್ನಡದಲ್ಲಿ ಸಹಿ ಅಭಿಯಾನದ ಮೂಲಕ ಹೊಸ ರೂಪ ಪಡೆದುಕೊಂಡಿದೆ ಎಂದು ಸ್ಪಷ್ಟಪಡಿಸುತ್ತೇನೆ. ಹಿಂದೆ ಯಾವ ರೀತಿ ಇತ್ತು ಎನ್ನುವ ಚರ್ಚೆ ಬೇಡ. ಮುಂದೆ ಯಾವ ರೀತಿ ಆಗಬೇಕು ಎನ್ನುವುದನ್ನು ಚರ್ಚೆ ಮಾಡೋಣ. ರಾಜ್ಯದಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿ ಕನ್ನಡ ಕಡಗಣನೆ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕದಲ್ಲಿ ಕನ್ನಡವೇ ಅಳವಡಿಸಬೇಕು. ನಾವೂ ಕೂಡ ಹತ್ತಾರು ಬಾರಿ ಮನವಿ ಕೂಡ ಮಾಡಿದ್ದೇವೆ. ಎಲ್ಲೋ ಕೆಲವೊಂದು ಕಡೆ ವ್ಯತ್ಯಾಸಗಳು ಆಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನಿಲ್‌ ಕುಮಾರ್ ತಿಳಿಸಿದ್ದಾರೆ

ಪರ್ವ ನಾಟಕಕ್ಕೆ ಚಾಲನೆ
ಮಾತಾಡ್ ಮಾತಾಡ್ ಕನ್ನಡ ಅಭಿಯಾನ ಪ್ರಯುಕ್ತ ಎಸ್​.ಎಲ್​.ಭೈರಪ್ಪ ಕಾದಂಬರಿ ಆಧಾರಿತ ‘ಪರ್ವ’ ನಾಟಕಕ್ಕೆ ಚಾಲನೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಚಿವ ಸುನಿಲ್ ಕುಮಾರ್ ಪರ್ವ ನಾಟಕಕ್ಕೆ ಚಾಲನೆ ನೀಡಿದರು. ಕನ್ನಡಕ್ಕಾಗಿ ನಾವು ಅಭಿಯಾನದ ಹಿನ್ನೆಲೆ ಬಿತ್ತಿ ಪತ್ರ ಹಾಗೂ ವಿಡಿಯೋಗಳ ಅನಾವರಣ ಮಾಡಲಾಗಿದ್ದು, ಎಲ್​ಇಡಿ ಪರದೆ ಹೊಂದಿರುವ ವಾಹನದಲ್ಲಿ ವಿಡಿಯೋ ಪ್ರದರ್ಶನ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com