ಬಡ ಕುಟುಂಬಗಳಿಗೆ ನೆರವಾಗಲು ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ: ಸಚಿವ ಕೆ.ಗೋಪಾಲಯ್ಯ
ಶೀಘ್ರದಲ್ಲೇ ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
Published: 26th October 2021 01:53 PM | Last Updated: 26th October 2021 03:16 PM | A+A A-

ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿದ ಸಚಿವ ಗೋಪಾಲಯ್ಯ
ಬೆಂಗಳೂರು: ಶೀಘ್ರದಲ್ಲೇ ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಮಹಾಲಕ್ಶ್ಮೀ ಲೇಔಟ್ ವಿಧಾನಸಭಾ ಕ್ಷೇತ್ರ, ಶಂಕರಮಠ ವಾರ್ಡ್ ನಲ್ಲಿ ಬಿ.ಬಿ.ಎಂ.ಪಿ.ವತಿಯಿಂದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆಯನ್ನು ಸ್ಥಳೀಯ ಶಾಸಕರು, ಅಬಕಾರಿ ಸಚಿವ ಕೆ.ಗೋಪಾಲಯ್ಯ ಉದ್ಘಾಟಿಸಿದರು.
ಇಂದು ಶಂಕರಮಠ ವಾರ್ಡಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟನೆ ಮಾಡಲಾಯಿತು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಶ್ರೀ @narendramodi ಸರ್ಕಾರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಎಲ್ಲಾ ಪ್ರಯತ್ನ ಮಾಡುತ್ತಿವೆ. ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.@CMofKarnataka @mla_sudhakar pic.twitter.com/aXhU6ihRZE
— K Gopalaiah (@GopalaiahK) October 26, 2021
ಬಳಿಕ ಮಾತನಾಡಿದ ಸಚಿವ ಕೆ.ಗೋಪಾಲಯ್ಯ ಅವರು, ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಜನಸಂಖ್ಯೆಯಲ್ಲಿ ವಾಸವಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. ಅದ್ದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ ಲಭಿಸುವಂತೆ ಮಾಡಲು ಪ್ರತಿ ವಾರ್ಡ್ ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಶಂಕರಮಠ ವಾರ್ಡ್ನನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕ್ಕರೆ ಖಾಯಿಲೆ ,ಬಿ.ಪಿ. ಮತ್ತು ಜನರಲ್ ತಪಾಸಣೆ ಮಾಡಲಾಗುವುದು. ವಿಶೇಷವಾಗಿ ಗರ್ಭಿಣಿ ಸ್ತೃೀಯರ ತಪಾಸಣೆ, ಮಗುವಿನ ಬೆಳವಣಿಗೆ ತಪಾಸಣೆ ಮಾಡಲಾಗುತ್ತದೆ. ಪ್ರತಿಯೊಬ್ಬ ನಾಗರಿಕರು ಪ್ರತಿ ಆರು ತಿಂಗಳಿಗೆ ಸಂಪೂರ್ಣ ದೇಹ ತಪಾಸಣೆ ಮಾಡಿಸಿಕೊಳ್ಳಿ ಏನಾದರು ಸಮಸ್ಯೆಗಳು ಇದ್ದರೆ ವೈದ್ಯರ ಸಲಹೆ ಪಡೆಯಿರಿ ಎಂದು ಗೋಪಾಲಯ್ಯ ಸಲಹೆ ನೀಡಿದರು.
ಸ್ಥಳೀಯ ಬಿ.ಜೆ.ಪಿ.ಮುಖಂಡರಾದ ಜಯರಾಮಣ್ಣ, ಶ್ರೀನಿವಾಸಗೌಡ, ಜಯಸಿಂಹ ನಿಸರ್ಗ ಜಗದೀಶ್ ಮತ್ತು ಆರೋಗ್ಯಧಿಕಾರಿ ಮನೋರಂಜನ್ ಹೆಗಡೆ, ನೋಡಲ್ ಅಧಿಕಾರಿ ಸುರೇಶ್ ಲಿಂಗಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರಾದ ಪುಟ್ಟಸ್ವಾಮಿ ಉಪಸ್ಥಿತರಿದ್ದರು.