ಸೈಟಿಗಾಗಿ ಕರ್ನಾಟಕ ನಿವೃತ್ತ ಸೈನಿಕನ ಹೋರಾಟ: ಹೈಕೋರ್ಟ್ ಮಧ್ಯಪ್ರವೇಶದಿಂದ ಕಡೆಗೂ ಯಶಸ್ಸು!

ನ್ಯಾಯಾಲಯ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸುಬ್ರಮಣಿ, ಗಡಿಯಲ್ಲಿ ಶತ್ರುಗಳ ವಿರುದ್ಧದ ಹೋರಾಟಕ್ಕಿಂತ  ಸೈಟು ಪಡೆಯಲು ನಡೆಸಿದ ಹೋರಾಟವೇ ಕಷ್ಟಕರ ಎಂದಿದ್ದಾರೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್

ಬೆಂಗಳೂರು: ದೇಶದ ರಕ್ಷಣೆಗಾಗಿ ಗಡಿಯಲ್ಲಿ ಹೋರಾಟ ನಡೆಸಿದ್ದ ಯೋಧನೊಬ್ಬ ಸೈಟಿಗಾಗಿ ಹೋರಾಟ ನಡೆಸಿದ ಪ್ರಕರಣವಿದು. ಸೈನಿಕ, ಕನ್ನಡಿಗ ಕೆ. ಎ ಸುಬ್ರಮಣಿ ಎಂಬುವವರು ಇತ್ತೀಚಿಗೆ ಸೇನೆಯಿಂದ ನಿವೃತ್ತರಾಗಿದ್ದರು. 

ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ(ಮುಡಾ) ಅವರಿಗೆ ಸೈಟು ಅಲಾಟ್ ಆಗಿತ್ತು. ಆ ಸಂದರ್ಭದಲ್ಲಿ ಸೈಟು ಕೊಳ್ಳಲು ಅವರ ಬಳಿ 3 ಲಕ್ಷ ಹಣ ಇರಲಿಲ್ಲ. 

ಹೀಗಾಗಿ ಹಣ ಪಾವತಿಸಲು ಅವರು ಕಾಲಾವಕಾಶ ಕೋರಿದ್ದರು. ನಂತರ ಕಷ್ಟಪಟ್ಟು 3 ಲಕ್ಷ ರೂ. ಹೊಂದಿಸಿ ಸೈಟು ಖರೀದಿಸಲು ಮುಂದಾಗಿದ್ದರು. ಆದರೆ ಅಷ್ಟರಲ್ಲಾಗಲೇ ಅವರಿಗೆ ನಿಗದಿಯಾಗಿದ್ದ ಸೈಟನ್ನು ಬೇರೆಯವರಿಗೆ ನೀಡಲಾಗಿತ್ತು. ಹಣ ಪಾವತಿಗೆ ಗಡುವು ಮೀರಿದ ಕಾರಣ ಇನ್ನೊಬ್ಬರಿಗೆ ನೀಡಬೇಕಾಯಿತೆಂದು ಅಧಿಕಾರಿಗಳು ತಿಳಿಸಿದ್ದರು. 

ಸೈಟು ಕೈತಪ್ಪಿದ್ದಕ್ಕೆ ಅವರು ಕರ್ನಾಟಕ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ವಿಚಾರಣೆ ನಂತರ ಇದೀಗ ನ್ಯಾಯಾಲಯ ಸುಬ್ರಮಣಿ ಅವರ ಪರವಾಗಿ ತೀರ್ಪು ನೀಡಿದೆ.

ನ್ಯಾಯಾಲಯ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಸುಬ್ರಮಣಿ, ಗಡಿಯಲ್ಲಿ ಶತ್ರುಗಳ ವಿರುದ್ಧದ ಹೋರಾಟಕ್ಕಿಂತ  ಸೈಟು ಪಡೆಯಲು ನಡೆಸಿ ಹೋರಾಟವೇ ಕಷ್ಟಕರ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com