ಸ್ವಾತಂತ್ರೋತ್ಸವ ಸಂಭ್ರಮ: ಪಾಕ್ ಸೈನಿಕರ ಜೊತೆ ಸಿಹಿ ಹಂಚಿಕೊಂಡ ಬಿಎಸ್ ಎಫ್ ಯೋಧರು

ಸ್ವಾತಂತ್ರೋತ್ಸವ ಅಂಗವಾಗಿ ಜಮ್ಮು-ಕಾಶ್ಮೀರದ ಅಟಾರಿ- ವಾಘಾ ಗಡಿಯಲ್ಲಿ ಪಾಕಿಸ್ತಾನದ ರೇಂಜರ್ ಗಳೊಂದಿಗೆ ಭಾರತೀಯ ಗಡಿ ಭದ್ರತಾ ಪಡೆ ಭಾನುವಾರ ಸಿಹಿ ಹಂಚಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತ-ಪಾಕ್ ಸೈನಿಕರು
ಭಾರತ-ಪಾಕ್ ಸೈನಿಕರು

ಜಮ್ಮು-ಕಾಶ್ಮೀರ: ಸ್ವಾತಂತ್ರೋತ್ಸವ ಅಂಗವಾಗಿ ಜಮ್ಮು-ಕಾಶ್ಮೀರದ ಅಟಾರಿ- ವಾಘಾ ಗಡಿಯಲ್ಲಿ ಪಾಕಿಸ್ತಾನದ ರೇಂಜರ್ ಗಳೊಂದಿಗೆ ಭಾರತೀಯ ಗಡಿ ಭದ್ರತಾ ಪಡೆ ಭಾನುವಾರ ಸಿಹಿ ಹಂಚಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು- ಕಾಶ್ಮೀರ ಮತ್ತು ಪಂಜಾಬ್ ನ ಅಂತಾರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ನೆರೆಯ ಪಾಕಿಸ್ತಾನದ ಸೈನಿಕರಿಗೆ ಸಿಹಿ ಹಂಚಿದ್ದು, ಶುಭಾಶಯ  ವಿನಿಮಯ ಮಾಡಿಕೊಂಡಿದ್ದಾರೆ.

ಅಟಾರಿ- ವಾಘಾ ಗಡಿಯಲ್ಲಿ ಪಾಕ್ ರೇಂಜರ್ಸ್ ನಿನ್ನೆ  ಬಿಎಸ್ ಎಫ್ ಯೋಧರಿಗೆ ಸಿಹಿ ಹಂಚಿದ್ದರು. ಇದಕ್ಕೆ ಪ್ರತಿಯಾಗಿ  ಭಾರತೀಯ ಗಡಿ ರಕ್ಷಣಾ ಪಡೆ ಯೋಧರು ಕೂಡಾ ಇಂದು ಪಾಕ್ ಸೈನಿಕರಿಗೆ ಸಿಹಿ ಹಂಚಿದ್ದಾರೆ. ಎರಡೂ ಕಡೆಯ ಭದ್ರತಾ ಸಿಬ್ಬಂದಿ ಪರಸ್ಪರ ಕೈಕುಲುಕಿ, ಶುಭ ಹಾರೈಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com