ಕಾಲೇಜು, ಹಾಸ್ಟೆಲ್ ಗಳಲ್ಲಿನ ಕೋವಿಡ್ ಕ್ಲಸ್ಟರ್ ಆತಂಕ ಸೃಷ್ಟಿಸುತ್ತಿದೆ: ಬಿಬಿಎಂಪಿ

ನಗರದಲ್ಲಿನ ನರ್ಸಿಂಗ್ ಕಾಲೇಜು ಹಾಗೂ ಹಾಸ್ಟೆಲ್ ಗಳಲ್ಲಿನ ಕೋವಿಡ್ ಕ್ಲಸ್ಟರ್ ಗಳು ಆತಂಕವನ್ನು ಹೆಚ್ಚಿಸುತ್ತಿದೆ ಎಂಬು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸೋಮವಾರ ಹೇಳಿದ್ದಾರೆ. 
ಗೌರವ್ ಗುಪ್ತಾ
ಗೌರವ್ ಗುಪ್ತಾ

ಬೆಂಗಳೂರು: ನಗರದಲ್ಲಿನ ನರ್ಸಿಂಗ್ ಕಾಲೇಜು ಹಾಗೂ ಹಾಸ್ಟೆಲ್ ಗಳಲ್ಲಿನ ಕೋವಿಡ್ ಕ್ಲಸ್ಟರ್ ಗಳು ಆತಂಕವನ್ನು ಹೆಚ್ಚಿಸುತ್ತಿದೆ ಎಂಬು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು ಸೋಮವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಹೊರ ರಾಜ್ಯದಿಂದ ಬರುತ್ತಿರುವವರಿಂದಲೇ ಸೋಂಕು ಹೆಚ್ಚಾಗುತ್ತಿಲ್ಲ. ನಗರದಲ್ಲಿರುವವರಿಂದಲೂ ಸೋಂಕು ಹೆಚ್ಚಾಗುತ್ತಿದೆ. ಪ್ರಸ್ತುತ ಕೆಲವು ರಾಜ್ಯಗಳಿಂದ ಬರುವವರನ್ನು ಮಾತ್ರವೇ ಪರೀಕ್ಷೆಗೊಳಪಡಿಸಲಾಗುತ್ತಿದೆ. ಈ ಪಟ್ಟಿಗೆ ಮತ್ತಷ್ಟು ರಾಜ್ಯಗಳನ್ನೂ ಸೇರಿಸುವ ಕುರಿತು ಅಧಿಕಾರಿಗಳು, ತಜ್ಞರು ಹಾಗೂ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

"ಇಲ್ಲಿಯವರೆಗೆ, ಎರಡು ಕಾಲೇಜುಗಳು ಮತ್ತು ಐದು ಹಾಸ್ಟೆಲ್‌ಗಳನ್ನು ಕಂಟೈನ್‌ಮೆಂಟ್ ವಲಯಗಳಾಗಿ ಘೋಷಿಸಲಾಗಿದೆ. ಎಲ್ಲಾ ನರ್ಸಿಂಗ್ ಕಾಲೇಜುಗಳು, ಹಾಸ್ಟೆಲ್‌ಗಳು, ಪಿಜಿ ವಸತಿಗಳು ಮತ್ತು ವೈದ್ಯಕೀಯ ಸಂಸ್ಥೆಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ತಿಳಿಸಿದ್ದಾರೆ. 

ಕೇರಳದಿಂದ ಬರುವವರಿಗೆ ಪರೀಕ್ಷಾ ಪ್ರಮಾಣಪತ್ರದೊಂದಿಗೆ ಪ್ರತ್ಯೇಕತೆ ಅಗತ್ಯ ಎಂದು ಗುಪ್ತಾ ಹೇಳಿದರು. ಎಲ್ಲಾ ವಿದ್ಯಾರ್ಥಿಗಳು ಮತ್ತು ಇತರರು ನಿಯಮಗಳನ್ನು ಪಾಲಿಸಬೇಕು ಎಂದಿದ್ದಾರೆ. 

ಕೇರಳ ರಾಜ್ಯದಿಂದ ಬರುವವರಿಗೆ ವೈದ್ಯಕೀಯ ಪರೀಕ್ಷೆ ವರದಿ ಜೊತೆಗೆ ಐಸೋಲೇಷನ್ ನ್ನೂ ಕಡ್ಡಾಯ ಮಾಡಬೇಕಿದೆ. ಸರ್ಕಾರದ ನಿಯಮಗಳಿಗೆ ಎಲ್ಲಾ ವಿದ್ಯಾರ್ಥಿಗಳು ತಲೆಬಾಗಬೇಕೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com