ಚಿತ್ರಹಿಂಸೆ ನೀಡಿ 10 ವರ್ಷ ಬಾಲಕನ ಹತ್ಯೆ: ತಾಯಿ ಸೇರಿ ಇಬ್ಬರ ಬಂಧನ

ನಗರದಲ್ಲಿ10 ವರ್ಷದ ಬಾಲಕನಿಗೆ ದೈಹಿಕ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. 
ಹತ್ಯೆ (ಸಾಂಕೇತಿಕ ಚಿತ್ರ)
ಹತ್ಯೆ (ಸಾಂಕೇತಿಕ ಚಿತ್ರ)
Updated on

ಬೆಂಗಳೂರು: ನಗರದಲ್ಲಿ10 ವರ್ಷದ ಬಾಲಕನಿಗೆ ದೈಹಿಕ ಚಿತ್ರ ಹಿಂಸೆ ನೀಡಿ ಕೊಲೆ ಮಾಡಿರುವ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. 

ನಗರದ ಮೈಕೋ ಲೇಔಟ್​ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಸಿಂಧು ಹಾಗೂ ರೌಡಿಶೀಟರ್ ಸುನೀಲ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಪತಿ ತೊರೆದಿದ್ದರಿಂದ ಮಗುವನ್ನು ನೋಡಿಕೊಳ್ಳಲು ಕಷ್ಟವಾಗಿದೆ ಎಂದು ಸಿಂಧು, ಮಗುವನ್ನು ರೌಡಿಶೀಟರ್ ಸುನೀಲ್ ಹತ್ತಿರ ಬಿಟ್ಟಿದ್ದಳು. ಬಾಲಕನ ಜವಾಬ್ದಾರಿ ವಹಿಸಿಕೊಂಡ ಸುನೀಲ್​ ಆತನನ್ನು ಸರಿಯಾಗಿ ನೋಡಿಕೊಳ್ಳದೇ , ಪ್ರತಿ ದಿನವೂ ಚಿತ್ರಹಿಂಸೆ ನೀಡಿ ತೊಂದರೆ ಕೊಡುತ್ತಿದ್ದನು. ಫೆಬ್ರವರಿಯಲ್ಲಿ ಕೊಠಡಿಯಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟಾಗ, ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com