ಬೆಂಗಳೂರು: ಆರ್ ವಿ ಯೂನಿವರ್ಸಿಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಕೋರ್ಸುಗಳು ಪ್ರಾರಂಭ

ಕೊರೊನಾದಿಂದ ಒಬ್ಬರು ಅಥವಾ ಇಬ್ಬರು ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಆರ್ ವಿ ಶಿಕ್ಷಣ ಸಂಸ್ಥೆ ಶೇ.100ರಷ್ಟು ಸ್ಕಾಲರ್ ಶಿಪ್ ನೀಡುತ್ತಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆರ್ ವಿ ಯೂನಿವರ್ಸಿಟಿ ಪಿಜಿ ಮತ್ತು ಯುಜಿ ಕೋರ್ಸುಗಳನ್ನು ಸೆ.20ರಿಂದ ಪ್ರಾಂಭಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಡಿ  ಆರ್ ವಿ ಯೂನಿವರ್ಸಿಟಿ ಮೂರು ಕೋರ್ಸುಗಳನ್ನು ಪ್ರಾರಂಭಿಸುತ್ತಿದೆ. ಡಿಸೈನ್, ಎಕನಾಮಿಕ್ಸ್ ಅಂಡ್ ಫೈನಾನ್ಸ್ ಮತ್ತು ಲಿಬರಲ್ ಆರ್ಟ್ಸ್ ಅಂಡ್ ಸೈನ್ಸ್.

ಕೊರೊನಾದಿಂದ ಒಬ್ಬರು ಅಥವಾ ಇಬ್ಬರು ಪಾಲಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಆರ್ ವಿ ಶಿಕ್ಷಣ ಸಂಸ್ಥೆ ಶೇ.100ರಷ್ಟು ಸ್ಕಾಲರ್ ಶಿಪ್ ನೀಡುತ್ತಿದೆ. 

ಯುಜಿ ಮತ್ತು ಪಿಜಿ ಪ್ರೊಗ್ರಾಮುಗಳ ಜೊತೆಗೇ ಆರ್ ವಿ ಯೂನಿವರ್ಸಿಟಿ ಫುಲ್ ಟೈಮ್ ಹಾಗೂ ಪಾರ್ಟ್ ಟೈಮ್ ಪಿ ಎಚ್ ಡಿ ಪ್ರೊಗ್ರಾಮುಗಳನ್ನು ನಡೆಸುತ್ತಿದೆ. ಕಾನೂನು, ಸಮಾಜ ವಿಜ್ನಾನ, ಡಿಸೈನ್, ಎಕನಾಮಿಕ್ಸ್, ಫೈನಾನ್ಸ್, ಮ್ಯಾನೇಜ್ಮೆಂಟ್, ಫಿಲ್ಮ್ ಸ್ಟಡೀಸ್ ಮತ್ತು ಪಬ್ಲಿಕ್ ಪಾಲಿಸಿ ವಿಷಯಗಳಲ್ಲಿ ಆಸಕ್ತರು ಪಿ ಎಸ್ ಡಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com