ಬೆಂಗಳೂರು: ಕಂಟೈನರ್​ಗೆ ಗುದ್ದಿದ ಪ್ಯಾಸೆಂಜರ್ ರೈಲು; ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ

ಪ್ಯಾಸೆಂಜರ್ ರೈಲು  ಕಂಟೈನರ್​ಗೆ ಗುದ್ದಿದ್ದು, ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಭಾರಿ ಅನಾಹುತವೊಂದು ತಪ್ಪಿರುವ ಘಟನೆ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕಂಟೈನರ್ ಗೆ ರೈಲು ಢಿಕ್ಕಿ
ಕಂಟೈನರ್ ಗೆ ರೈಲು ಢಿಕ್ಕಿ

ಬೆಂಗಳೂರು: ಪ್ಯಾಸೆಂಜರ್ ರೈಲು ಕಂಟೈನರ್​ಗೆ ಗುದ್ದಿದ್ದು, ಲೋಕೋ ಪೈಲಟ್ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಭಾರಿ ಅನಾಹುತವೊಂದು ತಪ್ಪಿರುವ ಘಟನೆ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ನಡೆದಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಆವಲಹಳ್ಳಿ ಬಳಿ ಪ್ಯಾಸೆಂಜರ್ ರೈಲೊಂದು ಕಂಟೈನರ್​ಗೆ ಗುದ್ದಿದ್ದು, ರೈಲು ಗುದ್ದಿದ ರಭಸಕ್ಕೆ ಕಂಟೈನರ್ ಸಂಪೂರ್ಣ ಪುಡಿ ಪುಡಿ ಆಗಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೈಸೂರಿನಿಂದ ತಮಿಳುನಾಡಿನ ಮೈಲಾಡುದೊರೈಗೆ ಎಕ್ಸ್‌ಪ್ರೆಸ್‌ ಪ್ಯಾಸೆಂಜರ್ ರೈಲು ಹೋಗುತ್ತಿತ್ತು. ಈ ವೇಳೆ, ಈ ದುರ್ಘಟನೆ ಸಂಭವಿಸಿದೆ.

ಮೂಲಗಳ ಪ್ರಕಾರ ಈ ಮಾರ್ಗದಲ್ಲಿ ಎರಡು ಹಳಿಗಳು ನಿರ್ಮಾಣ ಕಾರ್ಯ ಪ್ರಗತಿಲ್ಲಿತ್ತು. ಒಂದು ಹಳಿ ಮೇಲೆ ರೈಲು ಸಂಚರಿಸುತಿತ್ತು. ಸಂಜೆ ಅದೇ ಹಳಿ ಮೇಲೆ ಕಂಟೈನರ್ ದಾಟಲು ಯತ್ನಿಸಿದ್ದಾಗ ಹಳಿ ಮೇಲೆ ಕಂಟೈನರ್ ನಿಂತು ಚಕ್ರವೊಂದು ಸಿಲುಕಿತ್ತು. ರೈಲು ಬರುತ್ತಿದ್ದನ್ನು ಕಂಡು ಚಾಲಕ ಓಡಿ ಹೋಗಿದ್ದ. ಆ ಬಳಿಕ, ರೈಲು ಕಂಟೈನರ್ ಗೆ ಗುದ್ದಿದೆ.  ಪರಿಣಾಮ ಕಂಟೈನರ್ ಸಂಪೂರ್ಣ ಜಖಂಗೊಂಡಿದೆ. ಆದರೆ, ಯಾವುದೇ ಪ್ರಣಾಪಾಯ ಸಂಭವಿಸಿಲ್ಲ.

ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ದುರ್ಘಟನೆ ನಡೆದಿದೆ. ಹುಸ್ಕೂರು ಬಳಿಯ ಆವಲಹಳ್ಳಿ ಬಳಿ ಘಟನೆ ನಡೆದಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ದೌಡಾಯಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ದಕ್ಷಿಣ ಪಶ್ಚಿಮ ರೈಲ್ವೆ ವಿಭಾಗ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರು, ರೈಲು ಚಾಲಕ ತುರ್ತು ಬ್ರೇಕ್ ಹಾಕಿದರೂ ಅಪಘಾತವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.  ಟ್ರಕ್‌ನ ಚಕ್ರಗಳು ರೈಲ್ವೆ ಹಳಿಗಳ ಮೇಲೆ ಲೋಕೋ (ಇಂಜಿನ್ ರೂಮ್) ಕೆಳಗೆ ಬಿದ್ದಿರುವುದರಿಂದ ಲಾರಿಗೆ ಸಾಕಷ್ಟು ಹಾನಿಯಾಗಿದೆ ಎಂದು ಹೇಳಿದರು. 

ಇದೇ ವಿಚಾರವಾಗಿ ಮಾತನಾಡಿದ ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ,  ಅನೀಶ್ ಹೆಗ್ಡೆ ಅವರು, "ರೈಲು ಸಂಖ್ಯೆ 06232 ಮತ್ತು ಟ್ರಕ್ ನಡುವೆ ತಾಂತ್ರಿಕವಾಗಿ Km 188/700 ಎಂದು ಕರೆಯಲ್ಪಡುವ ಸ್ಥಳದಲ್ಲಿ ಈ ಘಟನೆ ಸಂಭವಿಸಿದೆ. ಟ್ರಕ್ ಚಾಲಕ ರೈಲ್ವೇ ಹಳಿ ಮೇಲೆ ಹೇಗೆ ಪ್ರವೇಶಿಸಿದನೆಂದು ತಿಳಿಯಲು ನಾವು ಇನ್ನೂ ಪ್ರಯತ್ನಿಸುತ್ತಿದ್ದೇವೆ. ಹಳಿ ಮೇಲೆ ಹೇಗೆ ಟ್ರಕ್ ಓಡಿಸಿದ ಎಂಬ ವಿಚಾರದ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಟ್ರಕ್ ಚಾಲಕ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಿದರು.

4 ಗಂಟೆಗಳ ಬಳಿಕ ಸಂಚಾರ ಪುನಾರಂಭ
ಇನ್ನು ಅಪಘಾತದಿಂದಾಗಿ ಈ ಮಾರ್ಗದಲ್ಲಿ ಬರೊಬ್ಬರಿ 4 ಗಂಟೆಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು. ಸ್ಥಳಕ್ಕೆ ಧಾವಿಸಿದ್ದ ಅಧಿಕಾರಿಗಳು ಮತ್ತು ರೈಲ್ವೇ ಸಿಬ್ಬಂದಿ ರೈಲು ಹಳಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದರು. ಬಳಿಕ ಸುಮಾರು 4 ಗಂಟೆಗಳ ಬಳಿಕ ಅಂದರೆ ಮಧ್ಯರಾತ್ರಿ 12.30ರ ವೇಳೆಗೆ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಮಾರ್ಗದಲ್ಲಿ ಮತ್ತೆ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com