ಬೆಂಗಳೂರಿನಲ್ಲಿ ಮತ್ತೊಂದು 3 ಅಂತಸ್ತಿನ ಕಟ್ಟಡ ಕುಸಿತ; ಡೈರಿ ಸರ್ಕಲ್ ಬಳಿ ದುರ್ಘಟನೆ, ನಾಲ್ವರಿಗೆ ಗಾಯ

ನಗರದಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ವಿಲ್ಸನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ ನಿನ್ನೆ 3 ಅಂತಸ್ತಿನ ಮನೆ ಕುಸಿದು ಬಿದ್ದ ಅರ್ಧ ಕಿಲೋ ಮೀಟರ್ ಮುಂದೆ ಕೆಎಂಎಫ್ ಕ್ವಾರ್ಟರ್ಸ್ ನೊಳಗಿರುವ 50 ವರ್ಷದ ಕಟ್ಟಡ ಕುಸಿದುಬಿದ್ದಿದೆ. ಇದು ಡೇರಿ ಸರ್ಕಲ್ ಬಳಿ ಇರುವ ಬಮೂಲ್ ನೌಕಕರ ಕ್ವಾರ್ಟರ್ಸ್ ಆಗಿದೆ.
ಕಟ್ಟಡ ಕುಸಿದ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪರಿಶೀಲನೆ
ಕಟ್ಟಡ ಕುಸಿದ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪರಿಶೀಲನೆ

ಬೆಂಗಳೂರು: ನಗರದಲ್ಲಿ ಮತ್ತೊಂದು ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ವಿಲ್ಸನ್ ಗಾರ್ಡನ್ ಸಮೀಪದ ಲಕ್ಕಸಂದ್ರದಲ್ಲಿ ನಿನ್ನೆ 3 ಅಂತಸ್ತಿನ ಮನೆ ಕುಸಿದು ಬಿದ್ದ ಅರ್ಧ ಕಿಲೋ ಮೀಟರ್ ಮುಂದೆ ಕೆಎಂಎಫ್ ಕ್ವಾರ್ಟರ್ಸ್ ನೊಳಗಿರುವ 50 ವರ್ಷದ ಕಟ್ಟಡ ಬಮೂಲ್ ನೌಕರರು ನೆಲೆಸಿರುವ ಮೂರು ಅಂತಸ್ತಿನ ಕಟ್ಟಡ ಇಂದು ಬೆಳಗ್ಗೆ 9.30ರ ಸುಮಾರಿಗೆ ಕುಸಿದುಬಿದ್ದಿದೆ.

40 ವರ್ಷದ ಹಿಂದೆ ನಿರ್ಮಿಸಿರುವ ಹಳೆ ಕಟ್ಟಡದಲ್ಲಿ ಬಿರುಕು ಬಿಡಲು ಆರಂಭವಾಯಿತು ಎಂದು ನಿವಾಸಿಗಳು ಹೇಳುತ್ತಿದ್ದಾರೆ. ಕಟ್ಟಡ ಕುಸಿಯುತ್ತಿದ್ದಂತೆ ವಸ್ತುಗಳನ್ನೆಲ್ಲಾ ಬಿಟ್ಟು ಪ್ರಾಣರಕ್ಷಣೆಯ ಕಾಳಜಿಯಿಂದ ನಿವಾಸಿಗಳೆಲ್ಲರೂ ಓಡಿಕೊಂಡು ಹೊರಗೆ ಬಂದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಕೂಡಲೇ ಅಕ್ಕಪಕ್ಕದವರಿಗೂ ಎಚ್ಚರಿಸಿದರು. ಮೊದಲ ಮಹಡಿಯಿಂದ ನಿವಾಸಿಗಳೆಲ್ಲ ಹೊರಗೆ ಬರುತ್ತಿದ್ದಂತೆ ಎರಡನೇ ಮತ್ತು ಮೂರನೇ ಮಹಡಿಯಿಂದ ಜನ ಹೊರಗೆ ಬಂದರು.

ಹೀಗೆ ಒಂದಾದ ಮೇಲೊಂದರಂತೆ ದುರಂತ ಸಂಭವಿಸುತ್ತಿರುವುದು ನಿಜಕ್ಕೂ ನಗರದ ಜನತೆಯನ್ನು ಆತಂಕಕ್ಕೀಡುಮಾಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ,ಪೊಲೀಸರು, ಬಿಬಿಎಂಪಿ ಸಿಬ್ಬಂದಿ ಬಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ. 

ದುರಂತದಲ್ಲಿ ನಾಲ್ವರಿಗೆ ಗಾಯಗಳಾಗಿವೆ. ಕಟ್ಟಡ ಕುಸಿತದ ವೇಳೆ ಸಿಕ್ಕಿಬಿದ್ದಿದ್ದ ಎರಡು ಶ್ವಾನಗಳನ್ನು ರಕ್ಷಿಸಲಾಗಿದೆ. ಕಟ್ಟಡ ಬೀಳುವ ಸೂಚನೆ ಸಿಕ್ಕ ಕೂಡಲೇ ಪೋಷಕರು ಮಗುವನ್ನು ಹೊರಗೆ ಕರೆತಂದು ರಕ್ಷಿಸಿದ್ದಾರೆ.ಇಂದು ಕೂಡ ಕಟ್ಟಡ ಕುಸಿತದಲ್ಲಿ ಭಾರೀ ಅನಾಹುತ ತಪ್ಪಿದೆ.

ಕುಸಿತಗೊಂಡ ಕಟ್ಟಡ 50 ವರ್ಷದ ಹಳೆಯದ್ದಾಗಿದೆ. ನಾಳೆ ಕೆಎಂಎಫ್​ನಲ್ಲಿ ಸಿಎಂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಟ್ಟಡದಲ್ಲಿ 18 ಕುಟುಂಬ ವಾಸವಾಗಿತ್ತು. ಕೆಎಂಎಫ್ ಕೆಲಸ ಮಾಡುತ್ತಿದ್ದ ಸಿಬ್ಬಂದಿ ಕಟ್ಟಡ ಕುಸಿಯಲು ಆರಂಭವಾಗುತ್ತಿದ್ದಂತೆ ಮನೆಯಿಂದ ಹೊರ ಓಡಿದ್ದಾರೆ. ಇದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಮೂಲ್ ಅಧಿಕಾರಿಗಳು ನಿರ್ಲಕ್ಷ್ಯ?: ಕಟ್ಟಡ ಬಿರುಕು ಬಿಡುವ ಸ್ಥಿತಿಯಲ್ಲಿದೆ, ಕಳಪೆಯಾಗಿದೆ ಎಂದು ನಿವಾಸಿಗಳು ಈ ಹಿಂದೆಯೇ ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೇ ಇಂದಿನ ದುರ್ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಕಟ್ಟಡ ಕುಸಿತ ಕಂಡು ಅಕ್ಕಪಕ್ಕದವರೂ ಕೂಡ ಭಯದಿಂದ ತಮ್ಮ ಮನೆ ತೊರೆಯುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com