'ಸೂಕ್ಷ್ಮಾಣು ನಾಶಕ' ಏರ್ ಫಿಲ್ಟರ್‌ ಅಭಿವೃದ್ಧಿಪಡಿಸಿದ ಐಐಎಸ್'ಸಿ

ಗ್ರೀನ್ ಟೀ ರೋಗನಿರೋಧಕ ಶಕ್ತಿ ಹೆಚ್ಚಿಸಲು, ತೂಕ ಕಡಿಮೆ ಮಾಡಲು, ಹೊಟ್ಟೆಗೆ ಸಂಬಧಿಸಿದ ರೋಗಗಳ ನಿವಾರಿಸಲು ಮತ್ತು ಸೋಂಕಿನಿಂದ ದೂರವಿಡುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೀಗ ಈ ಗ್ರೀನ್ ಟೀ ಗಾಳಿಯಲ್ಲಿರುವ ಸೂಕ್ಷ್ಮಾಣುಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ ಎಂಬ ವಿಚಾರವನ್ನು ಐಐಎಸ್'ಸಿ ತಿಳಿಸಿಕೊಂಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಗ್ರೀನ್ ಟೀ ರೋಗನಿರೋಧಕ ಶಕ್ತಿ ಹೆಚ್ಚಿಸಲು, ತೂಕ ಕಡಿಮೆ ಮಾಡಲು, ಹೊಟ್ಟೆಗೆ ಸಂಬಧಿಸಿದ ರೋಗಗಳ ನಿವಾರಿಸಲು ಮತ್ತು ಸೋಂಕಿನಿಂದ ದೂರವಿಡುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೀಗ ಈ ಗ್ರೀನ್ ಟೀ ಗಾಳಿಯಲ್ಲಿರುವ ಸೂಕ್ಷ್ಮಾಣುಗಳನ್ನು ನಾಶ ಮಾಡಲು ಸಹಾಯ ಮಾಡುತ್ತದೆ ಎಂಬ ವಿಚಾರವನ್ನು ಐಐಎಸ್'ಸಿ ತಿಳಿಸಿಕೊಂಡಿದೆ.

ಗ್ರೀನ್ ಟೀ ನಲ್ಲಿರುವ ಪ್ರಯೋಜನಗಳನ್ನು ಮತ್ತಷ್ಟು ಬಳಕೆ ಮಾಡಿಕೊಂಡಿಸುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc)ಯ ಸಂಶೋದಕರು, ಇದರಿಂದ 'ಸೂಕ್ಷ್ಮಾಣು ನಾಶಕ' ಏರ್ ಫಿಲ್ಟರ್‌'ನ್ನು ಅಭಿವೃದ್ಧಿಪಡಿಸಿದ್ದಾರೆ.

ಸಂಶೋಧಕರು ಗ್ರೀನ್ ಟೀ ಯಲ್ಲಿ ಕಂಡುಬರುವ ಪಾಲಿಫಿನಾಲ್‌ಗಳು ಮತ್ತು ಪಾಲಿಕಯಾನಿಕ್ ಪಾಲಿಮರ್‌ಗಳಂತಹ ಪದಾರ್ಥಗಳಿಂದ 'ಜರ್ಮ್ ಕಿಲ್ಲರ್' ಏರ್ ಫಿಲ್ಟರ್‌ನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಜರ್ಮ್ ಕಿಲ್ಲರ್ ನಿರ್ದಿಷ್ಟ ಸ್ಥಳಧಲ್ಲಿ ಸೂಕ್ಷ್ಮಜೀವಿಗಳನ್ನು ನಾಶಪಡಿಸುತ್ತದೆ. ಈ ಫಿಲ್ಟರ್ ಗಳು ಗಾಳಿಯಿಂದ ಹರಡುವ ರೋಗಕಾರಕಗಳಿಂದ ಉಂಟಾಗುವ ರೋಗಗಳನ್ನು ತಡೆಯಲಿದೆ.

ಐಐಎಸ್'ಸಿ ಅಭಿವೃದ್ಧಿಪಡಿಸಿರುವ ಈ ಫಿಲ್ಟರ್‌ಗಳನ್ನು ಏರ್ ಕಂಡಿಷನರ್‌ಗಳು, ಸೆಂಟ್ರಲ್ ಡಕ್ಟ್‌ಗಳು ಮತ್ತು ಏರ್ ಪ್ಯೂರಿಫೈಯರ್‌ಗಳಲ್ಲಿ ಬಳಸಬಹುದಾಗಿದೆ.

ಇದು ವಾಯು ಮಾಲಿನ್ಯದ ವಿರುದ್ಧ ಹೋರಾಡುವಲ್ಲಿ ಮತ್ತು ಸಾಂಕ್ರಾಮಿಕ ರೋಗವಾಗಿರುವ ಕೊರೋನಾ ವೈರಸ್ ನಂತಹ ಗಾಳಿಯಿಂದ ಹರಡುವ ರೋಗಕಾರಕಗಳ ಹರಡುವಿಕೆಯನ್ನು ತಡೆಯುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಸಂಶೋಧನೆಯ ತಂಡದ ನೇತೃತ್ವವನ್ನು ಪ್ರಾಧ್ಯಾಪಕ ಸೂರ್ಯಸಾರಥಿ ಬೋಸ್ ಮತ್ತು ಪ್ರಾಧ್ಯಾಪಕ ಕೌಶಿಕ್ ಚಟರ್ಜಿ ವಹಿಸಿದ್ದು, ಏರ್ ಫಿಲ್ಟರ್‌ಗಳ ನಿರಂತರ ಬಳಕೆಯು ಸೂಕ್ಷ್ಮಾಣುಜೀವಿಗಳ ಸಂತಾನೋತ್ಪತ್ತಿ ಸ್ಥಳಗಳನ್ನೂ ನಾಶಪಡಿಸಲಿದೆ ಎಂದು ವಿವರಿಸಿದ್ದಾರೆ.

ಫಿಲ್ಟರ್‌ನ ರಂಧ್ರಗಳು ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿ ಸ್ಥಳಗಳನ್ನು ಮುಚ್ಚಿ, ಅದರ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ಸೂಕ್ಷ್ಮಾಣುಗಳ ಪುನರುಜ್ಜೀವನದಿಂದ ಎದುರಾಗುವ ಸೋಂಕನ್ನೂ ಇದು ತಡೆಯಲಿದೆ ಎಂದು ತಿಳಿಸಿದ್ದಾರೆ.

ಆಂಟಿಮೈಕ್ರೊಬಿಯಲ್ ಏರ್ ಫಿಲ್ಟರ್‌ಗಳನ್ನು ನ್ಯಾಷನಲ್ ಅಕ್ರೆಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಮತ್ತು ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್ (NABL) ನಲ್ಲಿ ಪರೀಕ್ಷಿಸಲಾಗಿದೆ. ಇದು 99.24 ಶೇಕಡಾ ದಕ್ಷತೆಯೊಂದಿಗೆ ಕೋವಿಡ್‌ನ ಡೆಲ್ಟಾ ರೂಪಾಂತರವನ್ನು ನಿಷ್ಕ್ರಿಯಗೊಳಿಸಲು ಸಾಧ್ಯವಾಗಿರುವುದನ್ನು ಖಚಿತಪಡಿಸಿದೆ.

ಕೋವಿಡ್ ಸಮಯದಲ್ಲಿ ನಡೆದ ಈ ಸಂಶೋಧನೆಗೆ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ (SERB) ಮತ್ತು SERB-ತಂತ್ರಜ್ಞಾನ ಅನುವಾದ ಪ್ರಶಸ್ತಿಗಳು (SERB-TETRA) ಬೆಂಬಲ ನೀಡಿದ್ದು, ಈ ವರ್ಷ ಇದಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ ಎದು ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com