ಬೆಂಗಳೂರಿನ ರಸ್ತೆಗಳಲ್ಲಿ ಶೀಘ್ರದಲ್ಲೇ ಡಬಲ್ ಡೆಕ್ಕರ್ ಬಸ್'ಗಳ ಸಂಚಾರ ಆರಂಭ!

1970-80 ರಲ್ಲಿ ಡಬಲ್ ಡೆಕ್ಕರ್​ಗಳು ಬೆಂಗಳೂರಿನ ರಸ್ತೆಗಳನ್ನು ಆಳಿದ್ದವು. ಈ ಬಸ್ ಗಳು ಶೀಘ್ರದಲ್ಲೇ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಸಂಚಾರವನ್ನು ಆರಂಭಿಸಲಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: 1970-80 ರಲ್ಲಿ ಡಬಲ್ ಡೆಕ್ಕರ್​ಗಳು ಬೆಂಗಳೂರಿನ ರಸ್ತೆಗಳನ್ನು ಆಳಿದ್ದವು. ಈ ಬಸ್ ಗಳು ಶೀಘ್ರದಲ್ಲೇ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಸಂಚಾರವನ್ನು ಆರಂಭಿಸಲಿವೆ.

ಕೆಲವು ಕಾರಣಾಂತರಗಳಿಂದ 1997ರಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ ಡಬಲ್ ಡೆಕ್ಕರ್ ಬಸ್ ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ಈ ಬಸ್ ಗಳನ್ನು ರಸ್ತೆಗಿಳಿಸಲು ಸಿದ್ಥತೆಗಳನ್ನು ನಡೆಸಿದೆ.

ನವೆಂಬರ್ ತಿಂಗಳಿನಲ್ಲಿ ಪ್ರಕಟಣೆ ಹೊರಡಿಸಿದ್ದ ಬಿಎಂಟಿಸಿ, ಡಬಲ್ ಡೆಕ್ಕರ್ ಬಸ್ ಗಳ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿತ್ತು. ಬಿಡ್ಡಿಂಗ್ ಕಂಪನಿಯು ಕನಿಷ್ಠ 100 ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ಬಸ್‌ಗಳನ್ನು ತಯಾರಿಸುವ ಮತ್ತು ಪೂರೈಸುವ ಅನುಭವವನ್ನು ಹೊಂದಿರಬೇಕೆಂದು ತಿಳಿಸಿತ್ತು, ಇದರ ಜೊತೆಗೆ ಮೋಟಾರು ವಾಹನ ಕಾಯಿದೆಯ ಶಾಸನಬದ್ಧ ಅವಶ್ಯಕತೆಗಳನ್ನೂ ತಿಳಿಸಿತ್ತು.

ಬಿಎಂಟಿಸಿ ನಿರ್ದೇಶಕ (ಐಟಿ) ಎ ವಿ ಸೂರ್ಯ ಸೇನ್ ಅವರು ಮಾತನಾಡಿ, ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ತಯಾರಿಸುತ್ತಿರುವ ಸಂಸ್ಥೆಗಳು ಬಹಳ ಕಡಿಮೆಯಿದೆ. ನಾವು ತಯಾರಕರ ಬಳಿ ನಮ್ಮ ಆಸಕ್ತಿಗಳನ್ನು ವ್ಯಕ್ತಪಡಿಸಿದ್ದೇವೆ. ಐದು ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್‌ಗಳಿಗೆ ಶೀಘ್ರದಲ್ಲೇ ಟೆಂಡರ್ ಕರೆಯಲು ನಿರ್ಧರಿಸಿದ್ದೇವೆಂದು ಹೇಳಿದ್ದಾರೆ.

ಮೊದಲು ಐದು ಬಸ್ ಗಳನ್ನು ಪಡೆದು ಅನುಮೋದನೆ ಪಡೆದುಕೊಂಡ ಬಳಿಕ ಮತ್ತೆ ಐದು ಬಸ್ ಗಳಿಗೆ ಟೆಂಡರ್ ಕರೆಯುತ್ತೇವೆಂದು ತಿಳಿಸಿದ್ದಾರೆ

ಎಲೆಕ್ಟ್ರಿಕ್ ಡಬಲ್ ಡೆಕ್ಕರ್ ಬಸ್‌ಗಳು 9 ಮೀಟರ್ ಉದ್ದವಿದ್ದು, ಒಂದೇ ಚಾರ್ಜ್‌ನಲ್ಲಿ 200 ಕಿಲೋಮೀಟರ್ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ನಿರೀಕ್ಷಿಸಲಾಗಿದೆ.

ಈ ಬಸ್‌ಗಳು ಕಾರ್ಯನಿರ್ವಹಿಸುವ ಮಾರ್ಗಗಳ ಕುರಿತುಮಾತನಾಡಿದ ಸೇನ್ ಅವರು, “ನಾವು ಇನ್ನೂ ಮಾರ್ಗಗಳನ್ನು ನಿರ್ಧರಿಸಿಲ್ಲ. ಇದು ದೊಡ್ಡ ವಿಷಯವಲ್ಲ. ಮೊದಲ ಐದು ಬಸ್‌ಗಳು ತಲುಪಿದ ಬಳಿಕ ಮಾರ್ಗದ ಕುರಿತು ನಿರ್ಧರಿಸುತ್ತೇವೆಂದು ತಿಳಿಸಿದ್ದಾರೆ.

ಈ ಹಿಂದೆ ಕೆ.ಆರ್.ಮಾರುಕಟ್ಟೆ ಮತ್ತು ಮೆಜೆಸ್ಟಿಕ್‌ನಿಂದ ಶಿವಾಜಿನಗರ, ದೂಪನಹಳ್ಳಿ, ಜಯನಗರ ಮುಂತಾದ ಕಡೆಗಳಿಗೆ ಡಬಲ್‌ ಡೆಕ್ಕರ್‌ ಬಸ್‌ಗಳನ್ನು ಓಡಿಸಲಾಗುತ್ತಿತ್ತು. ಬಿಎಂಟಿಸಿ ಬಳಿ ಒಂದು ಡಬಲ್ ಡೆಕ್ಕರ್ ಬಸ್ ಇದ್ದು, ಈ ಬಸ್"ಗೆ ಕಾವೇರಿ ಎಂದು ಹೆಸರಿಸಲಾಗಿದೆ, ಇದನ್ನು ಚಲನಚಿತ್ರ ಚಿತ್ರೀಕರಣಕ್ಕಾಗಿ ಬಾಡಿಗೆಗೆ ನೀಡಲಾಗಿದೆ.

"ನಗರವು ಕಂಡಿರುವ ಪ್ರಚಂಡ ಅಭಿವೃದ್ಧಿಯನ್ನು ಗಮನಿಸಿದರೆ, ಮರದ ಕೊಂಬೆಗಳು ಮತ್ತು ನೇತಾಡುವ ಕೇಬಲ್‌ಗಳು, ಫ್ರೈಓವರ್‌ಗಳು, ಅಂಡರ್‌ಪಾಸ್‌ಗಳು ಮತ್ತು ರೈಲ್ವೆ ಸೇತುವೆಗಳು ಬರುತ್ತಿವೆ, ಕೋರ್ ಸಿಟಿ ಪ್ರದೇಶಗಳಲ್ಲಿ ಬಸ್‌ಗಳ ನಿರ್ವಹಣೆ ಕಠಿಣವಾಗಲಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.

ಮಾರ್ಗಗಳನ್ನು ಆಯ್ಕೆ ಮಾಡಲು ಸಮೀಕ್ಷೆ ನಡೆಸಲಾಗುವುದು ಮತ್ತು ಬಸ್‌ಗಳು ನಗರದ ಹೊರವಲಯದಲ್ಲಿ ಸಂಚರಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com