ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ಸುಧಾರಣೆ, ದಾಖಲೆಯ ಇ-ವಾಹನಗಳು ನೋಂದಣಿ

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಈ ವರ್ಷ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಾಕ್ಷಿಯಾಗಿದೆ. 2021-22ರಲ್ಲಿ 44,217 ಇ-ವಾಹನಗಳು ನೋಂದಣಿಯಾಗಿವೆ. ರಾಜ್ಯ ಸಾರಿಗೆ ಇಲಾಖೆಯಿಂದ ಪಡೆದ ಮಾಹಿತಿ ಪ್ರಕಾರ, 2022-23ರಲ್ಲಿ ಅಕ್ಟೋಬರ್‌ವರೆಗೆ 49,577 ವಾಹನಗಳನ್ನು ನೋಂದಾಯಿಸಲಾಗಿದೆ ಎಂದು ತಿಳಿಸಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ನೋಂದಣಿ ಈ ವರ್ಷ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಾಕ್ಷಿಯಾಗಿದೆ. 2021-22ರಲ್ಲಿ 44,217 ಇ-ವಾಹನಗಳು ನೋಂದಣಿಯಾಗಿವೆ. ರಾಜ್ಯ ಸಾರಿಗೆ ಇಲಾಖೆಯಿಂದ ಪಡೆದ ಮಾಹಿತಿ ಪ್ರಕಾರ, 2022-23ರಲ್ಲಿ ಅಕ್ಟೋಬರ್‌ವರೆಗೆ 49,577 ವಾಹನಗಳನ್ನು ನೋಂದಾಯಿಸಲಾಗಿದೆ ಎಂದು ತಿಳಿಸಿದೆ.

ನವೆಂಬರ್ ಮತ್ತು ಡಿಸೆಂಬರ್‌ ವರೆಗಿನ ಮಾಹಿತಿ ಪ್ರಕಾರ, 2022ರಲ್ಲಿ ಒಟ್ಟು ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರಗಳ ನೋಂದಣಿ 50,000 ಗಡಿ ದಾಟಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
2017-18 ರಲ್ಲಿ, ರಾಜ್ಯದಲ್ಲಿ 1,922 ವಾಹನಗಳ ನೋಂದಣಿಯಾಗಿತ್ತು. ಇದು ಶೇ 65 ರಷ್ಟು ಹೆಚ್ಚಳ ಕಂಡಿದೆ ಮತ್ತು 2018-19 ರಲ್ಲಿ 5,542 ರಷ್ಟು ವಾಹನಗಳು ನೋಂದಣಿಯಾಗಿವೆ. ಕೋವಿಡ್ ಲಾಕ್‌ಡೌನ್‌ನಿಂದಾಗಿ 2020 ರಲ್ಲಿ ವಾಹನ ನೋಂದಣಿ ತೀವ್ರವಾಗಿ ಕುಸಿದಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. 2019-20 ರಲ್ಲಿ, 6,774 ವಾಹನಗಳು ನೋಂದಣಿಯಾಗುವುದರೊಂದಿಗೆ ಕೇವಲ ಶೇ 18 ರಷ್ಟು ಏರಿಕೆ ಕಂಡಿದ್ದರೆ, 2020-21ರಲ್ಲಿ 11,593 ವಾಹನಗಳ ನೋಂದಣಿಯೊಂದಿಗೆ ಶೇ 41 ರಷ್ಟು ಏರಿಕೆ ಕಂಡಿದೆ.

ಕೋವಿಡ್ ಸಾಂಕ್ರಾಮಿಕದಿಂದಾಗಿ, ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯು ವಿದ್ಯುತ್ ವಾಹನ ಉತ್ಪಾದನೆ, ಪೂರೈಕೆ ಮತ್ತು ನೋಂದಣಿಯ ಮೇಲೆ ಪರಿಣಾಮ ಬೀರಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, 2021-22ರಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದ್ದು, 44,217 ವಾಹನಗಳು 2020-21ರಲ್ಲಿ ನೋಂದಣಿಯಾಗಿವೆ. ಈ ಮೂಲಕ ಶೇ 73 ರಷ್ಟು ಏರಿಕೆ ಕಂಡಿದೆ. ರಾಜ್ಯದಲ್ಲಿ 44,979 ದ್ವಿಚಕ್ರ ವಾಹನಗಳು, 2,537 ನಾಲ್ಕು ಚಕ್ರ ವಾಹನಗಳು ಮತ್ತು 2,061 ತ್ರಿಚಕ್ರ ವಾಹನಗಳಿವೆ. 'ಮುಂಬರುವ ವರ್ಷಗಳಲ್ಲಿ, ದ್ವಿಚಕ್ರ ವಾಹನಗಳಂತೆಯೇ ಹೆಚ್ಚಿನ ನಾಲ್ಕು ಚಕ್ರದ ಎಲೆಕ್ಟ್ರಿಕ್ ವಾಹನಗಳು ನೋಂದಣಿಯಾಗುವುದನ್ನು ನಾವು ನಿರೀಕ್ಷಿಸುತ್ತಿದ್ದೇವೆ' ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರಿಗೆ (ಪರಿಸರ ಮತ್ತು ಇ-ಆಡಳಿತ) ಹೆಚ್ಚುವರಿ ಆಯುಕ್ತ ಜೆ. ಜ್ಞಾನೇಂದ್ರ ಕುಮಾರ್ ಮಾತನಾಡಿ, ಇ-ವಾಹನ ನೋಂದಣಿ ಸಂಖ್ಯೆಯಲ್ಲಿ ಜಿಗಿತಕ್ಕೆ ರಾಜ್ಯ ಸಾರಿಗೆ ಇಲಾಖೆ ನೀಡಿದ ಉತ್ತೇಜನ ಮತ್ತು ಪರಿಸರ ಸ್ನೇಹಿ ಆಯ್ಕೆಗಳತ್ತ ಸಾಗಲು ಸಾರ್ವಜನಿಕರಲ್ಲಿ ಹೆಚ್ಚಿದ ಜಾಗೃತಿ ಕಾರಣವಾಗಿದೆ ಎಂದರು.

2017ರಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಮತ್ತು ಎನರ್ಜಿ ಸ್ಟೋರೇಜ್ ನೀತಿಯನ್ನು ರೂಪಿಸಿದ ಭಾರತದ ಮೊದಲ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ರಾಜ್ಯದಲ್ಲಿ ನೋಂದಣಿಯಾಗುವ ಇ-ವಾಹನಗಳಿಗೆ ನಾವು ಶೇ 100 ರಷ್ಟು ರಸ್ತೆ ತೆರಿಗೆ ವಿನಾಯಿತಿಯನ್ನು ನೀಡುತ್ತಿದ್ದೇವೆ. ಅಲ್ಲದೆ, ರಾಜ್ಯದಲ್ಲಿನ ಚಾರ್ಜಿಂಗ್ ಮೂಲಸೌಕರ್ಯದಲ್ಲಿನ ಸುಧಾರಣೆಯು ವಾಹನ ನೋಂದಣಿಯಲ್ಲಿನ ಜಿಗಿತಕ್ಕೆ ಮತ್ತೊಂದು ಕಾರಣವಾಗಿದೆ ಎಂದು ಕುಮಾರ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com