ಬೆಂಗಳೂರು: ಕೋಲ್ಡ್-ಮಿಕ್ಸ್ ಡಾಂಬರಿನೊಂದಿಗೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ ಬಿಬಿಎಂಪಿ!

ನಗರದ ರಸ್ತೆಗಳ ಗುಂಡಿಗಳನ್ನು ಹಾಟ್-ಮಿಕ್ಸ್ ಡಾಂಬರಿನ ಬದಲಿಗೆ ಕೋಲ್ಡ್-ಮಿಕ್ಸ್ ಡಾಂಬರು ಬಳಕೆ ಮಾಡಿ ಮುಚ್ಚಲು ಬಿಬಿಎಂಪಿ ತನ್ನ ಕಾರ್ಯವನ್ನು ಆರಂಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಗರದ ರಸ್ತೆಗಳ ಗುಂಡಿಗಳನ್ನು ಹಾಟ್-ಮಿಕ್ಸ್ ಡಾಂಬರಿನ ಬದಲಿಗೆ ಕೋಲ್ಡ್-ಮಿಕ್ಸ್ ಡಾಂಬರು ಬಳಕೆ ಮಾಡಿ ಮುಚ್ಚಲು ಬಿಬಿಎಂಪಿ ತನ್ನ ಕಾರ್ಯವನ್ನು ಆರಂಭಿಸಿದೆ.

ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹಲ್ಲಾದ್ ಮಾತನಾಡಿ, ಈ ತಂತ್ರ ನಿರ್ವಹಿಸುವುದು ಸುಲಭವಾಗಿದೆ. ಮೂರು ದಿನಗಳ ಹಿಂದೆ ಕೋಲ್ಡ್-ಮಿಕ್ಸ್ ಡಾಂಬರು ಕಾರ್ಯವನ್ನು ಪ್ರಾರಂಭಿಸಿದ್ದೇವೆಂದು ಹೇಳಿದ್ದಾರೆ.

ಕಚ್ಚಾ ವಸ್ತುಗಳ ನಿರ್ವಹಣೆಯ ಸುಲಭತೆ ಮತ್ತು ಗುಂಡಿಗಳನ್ನು ತುಂಬಲು ಭಾರೀ ಉಪಕರಣಗಳ ಅಗತ್ಯವಿಲ್ಲದ ಕಾರಣ ಈ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ. ಕೋಲ್ಡ್-ಮಿಕ್ಸ್ ಡಾಂಬರಿಗೆ ಮಿಶ್ರಣವನ್ನು ಸುಲಭವಾಗಿ ತಯಾರಿಸಲಾಗುತ್ತಿದೆ. ಬಿಸಿ ಮತ್ತು ತಣ್ಣನೆಯ ಆಸ್ಫಾಲ್ಟ್ ಎರಡೂ ವಿಧಾನಗಳು ಒಂದೇ ಗುಣಮಟ್ಟವನ್ನು ಒದಗಿಸುತ್ತವೆ ಎಂದು ತಿಳಿಸಿದ್ದಾರೆ.

ಕಚ್ಚಾ ವಸ್ತುಗಳಿಗೆ ನಿರ್ದಿಷ್ಟ ತಾಪಮಾನವನ್ನು ಕಾಯ್ದುಕೊಳ್ಳಬೇಕಾಗಿರುವುದರಿಂದ, ರಸ್ತೆಗೆ ಟಾರ್ ಹಾಕಿದ ನಂತರ ಅದನ್ನು ರೋಡ್ ರೋಲರ್‌ನಿಂದ ಚಪ್ಪಟೆಗೊಳಿಸಬೇಕಾಗಿರುವುದರಿಂದ ಡಾಂಬರೀಕರಣದ ಗುಂಡಿಗಳಿಗೆ ಬಿಸಿ ಮಿಶ್ರಣವನ್ನು ಬಳಸುವುದು ಕಷ್ಟಕರವಾಗುತ್ತದೆ. ಕೋಲ್ಡ್ ಮಿಕ್ಸ್‌ ಡಾಂಬರಿಗೆ ಅದರ ಅಗತ್ಯವಿಲ್ಲ. ಇದರಿಂದ ಸುಲಭವಾಗಿ ಗುಂಡಿಯನ್ನು ತುಂಬಬಹುದು. ಹಸ್ತಚಾಲಿತವಾಗಿ ಚಪ್ಪಟೆ ಮಾಡಬಹುದು ಎಂದಿದ್ದಾರೆ.

ರಸ್ತೆಗಳ ಡಾಂಬರೀಕರಣಕ್ಕೆ ಕೋಲ್ಡ್ ಮಿಕ್ಸ್ ಅಥವಾ ಹಾಟ್ ಮಿಕ್ಸ್ ಬಳಸಬಹುದು. ಆದರೆ, ಅದನ್ನು ಸರಿಯಾಗಿ ಹಾಕುವ ಪ್ರಕ್ರಿಯೆಯು ಮಹತ್ವದ್ದಾಗಿರುತ್ತದೆ. ಗುಂಡಿಯನ್ನು ತುಂಬಿದಾಗಲೂ ಅದನ್ನು ಉಳಿದ ಮೇಲ್ಮೈಯಿಂದ ನೆಲಸಮಗೊಳಿಸಬೇಕು ಮತ್ತು ಉಬ್ಬುಗಳಿರದಂತೆ ನೋಡಿಕೊಳ್ಳಬೇಕು ಎಂದು ಸಿವಿಲ್ ಎಂಜಿನಿಯರ್ ವಿವರಿಸಿದರು.

ಸಮಸ್ಯೆ ಕಾಮಗಾರಿಗೆ ಸಂಬಂಧಿಸಿದ್ದೇ ಹೊರತು ಪ್ರಕ್ರಿಯೆಯಲ್ಲ. ಉದಾಹರಣೆಗೆ, ಒಂದು ಗುಂಡಿಯು ಅನಿಯಮಿತ ಆಕಾರವನ್ನು ಹೊಂದಿದ್ದರೆ, ಅದನ್ನು ನಿಯಮಿತ ಆಕಾರದಲ್ಲಿ ಕತ್ತರಿಸಿ ಅದಕ್ಕೆ ಅನುಗುಣವಾಗಿ ರಸ್ತೆಯ ಮಟ್ಟದಲ್ಲಿ ತುಂಬಬೇಕು ಎಂದು ಹೇಳಿದರು.

ನಗರದಾದ್ಯಂತ ರಸ್ತೆ ಕಾಮಗಾರಿಯೂ ನಡೆಯುತ್ತಿದ್ದು, ರಸ್ತೆಯ ಕಾಂಪಾಕ್ಟಿಂಗ್ ಸರಿಯಾಗಿ ಆಗದಿದ್ದಲ್ಲಿ ಗುಂಡಿಗಳು ಕಾಣಿಸಿಕೊಳ್ಳುತ್ತಲೇ ಇರುತ್ತವೆ ಎಂದರು.

ಈ ನಡುವೆ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ), ಕರ್ನಾಟಕ ರೈಲ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪ್‌ಮೆಂಟ್ ಎಂಟರ್‌ಪ್ರೈಸಸ್ (ಕೆ-ರೈಡ್) ಅನುಷ್ಠಾನಕ್ಕೆ 268 ಮರಗಳನ್ನು ಕಡಿಯಲು ಬಿಬಿಎಂಪಿ ನೋಡಲ್ ಸಂಸ್ಥೆಗೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com