ಬೆಂಗಳೂರು: ಕೆಐಎಯಲ್ಲಿ 200 ಸ್ನೈಪರ್ ಉಪಕರಣಗಳ ವಶಪಡಿಸಿಕೊಂಡ ಅಧಿಕಾರಿಗಳು

ಕೆಐಎಯ ಏರ್ ಕಾರ್ಗೋ ಸೆಂಟರ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಸ್ನೈಪರ್ ರೈಫಲ್‌ಗಳಿಗೆ ಜೋಡಿಸಲಾದ ಸುಮಾರು 200 ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೆಐಎಯ ಏರ್ ಕಾರ್ಗೋ ಸೆಂಟರ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಗುರುವಾರ ಸ್ನೈಪರ್ ರೈಫಲ್‌ಗಳಿಗೆ ಜೋಡಿಸಲಾದ ಸುಮಾರು 200 ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈ ಉಪಕರಣಗಳು ಹೈದರಾಬಾದ್‌ನಲ್ಲಿರುವ ವ್ಯಕ್ತಿಗೆ ತಲುಪಿಸಬೇಕಾಗಿತ್ತು. ಕೊರಿಯರ್ ಸೆಂಟರ್ ಮೂಲಕ ರವಾನೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ವಶಪಡಿಸಿಕೊಂಡ ಉಪಕರಣಗಳಲ್ಲಿ ಮಾನೋಕ್ಯುಲರ್ ಇರುವುದು ಕಂಡು ಬಂದಿದೆ. ಈ ಮಾನೋಕ್ಯುಲರ್ ಕತ್ತಲೆಯಲ್ಲಿಯೂ ನಿಖರವಾದ ನೋಡಲು ಸಹಾಯ ಮಾಡುತ್ತದೆ.

ಮೊದಲಿಗೆ ಕಸ್ಟಮ್ಸ್ ಅಧಇಕಾರಿಗಳು "ಸ್ನೈಪರ್ ರೈಫಲ್‌ಗಳಲ್ಲಿ ಬಳಸಲಾದ ಮಾನೋಕ್ಯುಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆಯೇ ಎಂದು ಪರಿಶೀಲಿಸಲು ಮುಂದಾಗಿದ್ದು. ಇದರಂತೆ ರೈಫಲ್ಸ್ ಗಳನ್ನು ಭದ್ರತಾ ಸಂಸ್ಥೆಗಳಿಗೆ ರವಾನಿಸಿದ್ದರು. ರೈಫಲ್ಸ್ ನಲ್ಲಿ ಮಾನೋಕ್ಯುಲರ್‌ ಇರುವುದನ್ನು ಸಂಸ್ಥೆ ಖಚಿತಪಡಿಸಿವೆ ಎಂದು ಮೂಲಗಳು ತಿಳಿಸಿವೆ.

ಕಸ್ಟಮ್ಸ್ ಅಧಿಕಾರಿಗಳು ಕಾರ್ಗೋ ಘಟಕಕ್ಕೆ ಖುದ್ದಾಗಿ ತೆರಳಿ ಕಾರ್ಗೋ ಕೇಂದ್ರದಿಂದ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಸರ್ಕಾರದ ಆಮದು ಪಟ್ಟಿಯಲ್ಲಿ ಮಾನೋಕ್ಯುಲರ್ ಅನ್ನು ನಿರ್ಬಂಧಿಸಲಾಗಿದೆ. ರವಾನೆಗಾಗಿ ಲಗತ್ತಿಸಲಾದ ಸರಕುಪಟ್ಟಿ ಇದನ್ನು "ಟೆಲಿಸ್ಕೋಪಿಕ್ ಉಪಕರಣ" ಎಂದು ಕರೆಯಲಾಗುತ್ತದೆ ಎಂದು ಮತ್ತೊಂದು ಮೂಲ ತಿಳಿಸಿದೆ.

ಇದನ್ನು ಸರಕು ವಿಮಾನದ ಮೂಲಕ ರವಾನಿಸಲಾಗಿದೆ. ಇಂತಹ ವಸ್ತುವನ್ನು ಆಮದು ಮಾಡಿಕೊಳ್ಳಲು ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಅಧಿಕಾರಿಗಳು ಯಾವುದೇ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.

ಕಸ್ಟಮ್ಸ್ ಅಧಿಕಾರಿಯೊಬ್ಬರು ಮಾತನಾಡಿ, "ತನಿಖೆ ನಡೆಯುತ್ತಿದೆ". ತನಿಖಾ ಸಂಸ್ಥೆ ಈಗ ಸರಕುದಾರರ ರುಜುವಾತುಗಳನ್ನು ಪರಿಶೀಲಿಸುವ ಪ್ರಕ್ರಿಯೆ ನಡೆಸುತ್ತಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com