ಬೆಂಗಳೂರು: ಮೈಸೂರಿನ ಕಿಕ್ ಬಾಕ್ಸರ್ ಸಾವು ಪ್ರಕರಣ; ಸ್ಪರ್ಧೆಗಳಲ್ಲಿ ಸುರಕ್ಷತೆ ಕುರಿತ ವಿಷಯ ಮುನ್ನಲೆಗೆ

ಭಾನುವಾರ ನಡೆದ ಕೆ1 ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 23 ವರ್ಷದ ಕಿಕ್‌ಬಾಕ್ಸರ್ ಗಾಯಗೊಂಡು ಬುಧವಾರ ಸಾವನ್ನಪ್ಪಿದ ನಂತರ ಇಂತಹ ಕಾದಾಟದ ಸ್ಪರ್ಧೆಗಳಲ್ಲಿ ಸುರಕ್ಷತೆಯ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ನಗರದ ಜ್ಞಾನಜ್ಯೋತಿ ನಗರದ ಪೈ ಅಂತರಾಷ್ಟ್ರೀಯ ಕಟ್ಟಡದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.
ಮೃತಪಟ್ಟ ಕಿಕ್ ಬಾಕ್ಸರ್
ಮೃತಪಟ್ಟ ಕಿಕ್ ಬಾಕ್ಸರ್

ಬೆಂಗಳೂರು: ಭಾನುವಾರ ನಡೆದ ಕೆ1 ಕಿಕ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 23 ವರ್ಷದ ಕಿಕ್‌ಬಾಕ್ಸರ್ ಗಾಯಗೊಂಡು ಬುಧವಾರ ಸಾವನ್ನಪ್ಪಿದ ನಂತರ ಇಂತಹ ಕಾದಾಟದ ಸ್ಪರ್ಧೆಗಳಲ್ಲಿ ಸುರಕ್ಷತೆಯ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ. ನಗರದ ಜ್ಞಾನಜ್ಯೋತಿ ನಗರದ ಪೈ ಅಂತರಾಷ್ಟ್ರೀಯ ಕಟ್ಟಡದಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆ ನಡೆಯುವ ಸ್ಥಳದಲ್ಲಿ ವೈದ್ಯರು ಮತ್ತು ಆಂಬ್ಯುಲೆನ್ಸ್ ಇರಲಿಲ್ಲ ಮೃತ ಎಸ್ ನಿಖಿಲ್ ಅವರ ಕುಟುಂಬಸ್ಥ ಹಾಗೂ ರಾಜ್ಯ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕಿರಣ್ ಆರೋಪಿಸಿದ್ದಾರೆ. ಆದಾಗ್ಯೂ, ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಇಬ್ಬರು ವೈದ್ಯರು ಸ್ಥಳದಲ್ಲಿದ್ದರು ಎಂದು ಆಯೋಜಕರು ಹೇಳುತ್ತಿದ್ದಾರೆ.

ಮೈಸೂರಿನ ಕೆಆರ್ ಮೊಹಲ್ಲಾ ನಿವಾಸಿ ನಿಖಿಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿದ್ದರು. ಎಲೆಕ್ಟ್ರಿಕಲ್ ನಲ್ಲಿ ಐಟಿಐ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪಂದ್ಯದ ವೇಳೆ ನಿಖಿಲ್‌ಗೆ ಗಾಯಗಳಾಗಿವೆ ಎಂದು ತಡವಾಗಿ ತಿಳಿಸಲಾಯಿತು. ಕಾರ್ಯಕ್ರಮ ಆಯೋಜಕರಿಂದ ಸರಿಯಾದ ವಿವರಣೆ ನೀಡಲಿಲ್ಲ ಎಂದು ಅವರ ಚಿಕ್ಕಪ್ಪ ಕಿರಣ್  ಹೇಳಿದರು.

ಗಾಯಗೊಂಡ ನಿಖಿಲ್ ನನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿದೆ ಎಂದು  ನಮಗೆ ತಿಳಿಸಲಾಯಿತು. ನಾವು ಮೈಸೂರಿನಿಂದ ಆಸ್ಪತ್ರೆಗೆ ಬಂದೇವು. ಆದರೆ ಚಿಕಿತ್ಸೆಯಿಂದ ತೃಪ್ತರಾಗದೆ, ನಾವು ಆತನನ್ನು ಯಶವಂತಪುರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿದೇವು. ಅಲ್ಲಿ ನಮಗೆ ತಡವಾಗಿದೆ ಎಂದು ಹೇಳಿದರು. ಇದರಲ್ಲಿ ಆಯೋಜಕರು, ತರಬೇತುದಾರರು ಮತ್ತು ಎಲ್ಲರದ್ದು ತಪ್ಪಿದೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ನಿಖಿಲ್ ಸಾವಿನ ನಂತರ ನಿವೃತ್ತ ಉದ್ಯೋಗಿಯಾಗಿರುವ ಆತನ 62 ವರ್ಷದ ತಂದೆ ಪಿ ಸುರೇಶ್ ಬುಧವಾರ ಬೆಳಗ್ಗೆ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಆಯೋಜಕ ನವೀನ್ ರವಿಶಂಕರ್ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ನಿರ್ಲಕ್ಷ್ಯದಿಂದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಆರೋಪ ಕುರಿತು ಪ್ರತಿಕ್ರಿಯಿಸಿರುವ ರವಿಶಂಕರ್, ಎಲ್ಲಾ ವಿಧಾನಗಳನ್ನು ಅನುಸರಿಸಲಾಯಿತು. ಸ್ಫರ್ಧೆ ವೇಳೆ ಇಬ್ಬರು ವೈದ್ಯರು ಇದ್ದರು. ನಿಖಿಲ್ ಕುಸಿದ ನಂತರ ವೈದ್ಯರು ಆತನನ್ನು ಪರೀಕ್ಷಿಸಿದರು. ಅವರ ಸೂಚನೆ ಮೇರೆಗೆ ನೆಲಮಾಳಿಗೆಯಲ್ಲಿ ನಿಲ್ಲಿಸಲಾಗಿದ್ದ ವಾಹನದ ಮೂಲಕ ಸ್ಥಳಾಂತರಿಸಲಾಯಿತು. ಆಸ್ಪತ್ರೆ 5 ಕಿ.ಮೀ ಒಳಗಡೆ ಇದ್ದರೆ ಆಂಬ್ಯುಲೆನ್ಸ್ ಅಗತ್ಯವಿಲ್ಲ ಎಂಬ ನಿಯಮವಿದೆ. ಆಸ್ಪತ್ರೆಯಿಂದ 4 ಕಿ. ಮೀ. ದೂರದಲ್ಲಿ ಸ್ಫರ್ಧೆ ನಡೆಯುತಿತ್ತು. ಘಟನೆ ನಂತರ ನಿಖಿಲ್ ತಂದೆಗೆ ಫೋನ್ ಮಾಡಿದೆ. ಇದು ಅತ್ಯಂತ ದುರದೃಷ್ಟಕರ ಘಟನೆಯಾಗಿದೆ ಎಂದು ಹೇಳಿದರು.

ಮಗನ ಸಾವಿನ ಹಿಂದೆ ತಂದೆ ದುಷ್ಕೃತ್ಯವೆಸಗಿರುವ ಶಂಕೆಯಿಂದ ದೂರು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು .ಖಾಸಗಿ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿರುವುದರಿಂದ ಅವರು ಜವಾಬ್ದಾರರಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಜಿತೇಂದ್ರ ಶೆಟ್ಟಿ ತಿಳಿಸಿದರು.

ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಸಿ. ರವಿ ಮಾತನಾಡಿ, ಸ್ಥಳದಲ್ಲಿ ಆಂಬ್ಯುಲೆನ್ಸ್ ಅಥವಾ ವೈದ್ಯರೂ ಇರಲಿಲ್ಲ. 5 ನೇ ಮಹಡಿಯಲ್ಲಿ ಸ್ಪರ್ಧೆ ನಡೆಯುತಿತ್ತು. ಅಲ್ಲಿ ತುಂಬಾ ಜನರು ಸೇರಿದ್ದರು. ನೆಲದ ರಿಂಗ್ ಬದಲಿಗೆ ಸರಿಯಾದ ಬಾಕ್ಸಿಂಗ್ ರಿಂಗ್ ಇರಬೇಕಾಗಿತ್ತು ಎಂದು ಹೇಳಿದರು.

ರೆಫರಿ ಅನುಭವಿಯಾಗಿ ಕಾಣಲಿಲ್ಲ ನಿಖಿಲ್ ಕುಸಿದು ಬಿದ್ದಾಗ, ತಕ್ಷಣ ತನ್ನ ಟೂತ್ ಗಾರ್ಡ್ ಮತ್ತು ಹೆಲ್ಮೆಟ್ ತೆಗೆಯಲಿಲ್ಲ. ಸರಿಯಾದ ಪ್ರಥಮ ಚಿಕಿತ್ಸೆ ನೀಡಿದ್ದರೆ, ಇಡೀ ಪರಿಸ್ಥಿತಿಯನ್ನು ತಪ್ಪಿಸಬಹುದಿತ್ತು ಎಂದು ಅವರು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com