ಬೆಂಗಳೂರು: ಎಣ್ಣೆಯಲ್ಲಿ ಉಗುಳುತ್ತಿದ್ದ ಪಾಪ್ ಕಾರ್ನ್ ಮಾರಾಟಗಾರ ಬಂಧನ
ಬೆಂಗಳೂರು: ಅಡುಗೆ ಎಣ್ಣೆಯಲ್ಲಿ ಉಗುಳುತ್ತಿದ್ದ 21 ವರ್ಷದ ಪಾಪ್ ಕಾರ್ನ್ ಮಾರಾಟಾಗರ ವ್ಯಕ್ತಿಯನ್ನು ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
ಸೋಮೇಶ್ವರನಗರದ ನಿವಾಸಿ ನಯಾಜ್ ಪಾಷಾ ಬಂಧಿತ ಆರೋಪಿಯಾಗಿದ್ದಾನೆ. ಲಾಲ್ ಬಾಗ್ ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿ ಪಾಪ್ ಕಾರ್ನ್ ಮಾರಾಟ ಮಾಡುತ್ತಿದ್ದ.
ನಿನ್ನೆ ಬೆಳಿಗ್ಗೆ 9.30ರ ಸುಮಾರಿಗೆ ಪಾಪ್ ಕಾರ್ನ್ ಹುರಿಯುವಾಗ ಅಡುಗೆ ಎಣ್ಣೆಯಲ್ಲಿ ಆತ ಉಗುಳುತ್ತಿದ್ದುದ್ದನ್ನು ಸ್ಥಳದಲ್ಲಿ ವಾಕಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬ ನೋಡಿದ್ದಾನೆ. ಪ್ರಶ್ನೆ ಮಾಡಿದಾಗ ಕ್ಷಮೆಯಾಚಿಸಿದ್ದಾನೆ. ಇದರಿಂದ ಕೋಪಗೊಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಅಂಗಡಿಯನ್ನು ಬಂದ್ ಮಾಡಿಸಿ, ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯರು ಲಿಖಿತ ದೂರು ನೀಡದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ. ಇದೀಗ ವ್ಯಕ್ತಿ ವಿರುದ್ಧ ಐಪಿಸಿ ಸೆಕ್ಷನ್ 269ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ