ನಗರದ 7 ಮಾಲ್ ಗಳಿಂದ ತೆರಿಗೆ ಪಾವತಿ ಬಾಕಿ: ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೂವರೆಗೆ ರೂ.2,093 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ, ಆದರೆ 44 ಮಾಲ್‌ಗಳ ಪೈಕಿ ಏಳು ಮಾಲ್‌ಗಳು ಇನ್ನೂ 46.70 ಕೋಟಿ ತೆರಿಗೆ ಪಾವತಿಸಬೇಕಾಗಿದೆ ಎಂದು ಬಿಬಿಎಂಪಿ (ಕಂದಾಯ) ವಿಶೇಷ ಆಯುಕ್ತ ಆರ್‌ಎಲ್ ದೀಪಕ್ ಅವರು ಶುಕ್ರವಾರ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೂವರೆಗೆ ರೂ.2,093 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ, ಆದರೆ 44 ಮಾಲ್‌ಗಳ ಪೈಕಿ ಏಳು ಮಾಲ್‌ಗಳು ಇನ್ನೂ 46.70 ಕೋಟಿ ತೆರಿಗೆ ಪಾವತಿಸಬೇಕಾಗಿದೆ ಎಂದು ಬಿಬಿಎಂಪಿ (ಕಂದಾಯ) ವಿಶೇಷ ಆಯುಕ್ತ ಆರ್‌ಎಲ್ ದೀಪಕ್ ಅವರು ಶುಕ್ರವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020-21ರಲ್ಲಿ 1,614 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದ್ದರೆ, 2021-22ರಲ್ಲಿ 1,395 ಕೋಟಿ ರೂಪಾಯಿ ಸಂಗ್ರಹವಾಗಿದೆ. ಜಿಟಿ ವರ್ಲ್ಡ್ ಮಾಲ್, ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್, ರಾಕ್‌ಲೈನ್ ಮಾಲ್, ರಾಯಲ್ ಮೀನಾಕ್ಷಿ ಮಾಲ್, ವರ್ಜೀನಿಯಾ ಮಾಲ್, ಸೋಲ್ ಸ್ಪೇಸ್ ಅರೆನಾ ಮತ್ತು ವಿಆರ್ ಮಾಲ್'ಗಳು ತೆರಿಗೆ ಪಾವತಿ ಮಾಡಬೇಕಿದೆ ಎಂದು ಹೇಳಿದ್ದಾರೆ.

ವಂಚಕರಿಂದ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ತೆರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್'ನ್ನು ಎರಡು ಬಾರಿ ಮುಚ್ಚಿಸಲಾಗಿತ್ತು. ಆದರೆ. ಅವರು ಸಮಯ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಪ್ರಕರಣ ಮುಕ್ತಾಯಗೊಳಿಸಿ ವಸೂಲಿ ಮಾಡುವತ್ತ ಗಮನ ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಂಚಕರ ವಿರುದ್ಧ ಡ್ರೋಣ್ ಸರ್ವೆ
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿಗಳ ತೆರಿಗೆ ವಸೂಲಿ ಪ್ರಕ್ರಿಯೆ ಮತ್ತಷ್ಟು ಚುರುಕುಗೊಳಿಸುವ ಸಲುವಾಗಿ ಹಾಗೂ ತೆರಿಗೆ ವಂಚಕರ ಪತ್ತೆಗಾಗಿ ಡ್ರೋನ್ ಸರ್ವೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಕಂದಾಯ ಅಧಿಕಾರಿಗಳಿಗೆ ಗುರಿ ನೀಡಿ ತೆರಿಗೆ ವಸೂಲಿ ಮಾಡಲಾಗುವುದು. ಸ್ವಯಂಘೋಷಿತ ಆಸ್ತಿ ತೆರಿಗೆಯಲ್ಲಿ ತಪ್ಪು ಮಾಹಿತಿ ನೀಡಿದರೆ ಡ್ರೋನ್​ ಸಮೀಕ್ಷೆಯಲ್ಲಿ ಗೊತ್ತಾಗಲಿದೆ ಎಂದು ದೀಪಕ್ ಅವರು ಹೇಳಿದ್ದಾರೆ.

ಪ್ಲಕ್ಸ್  ಬ್ಯಾನರ್ ಹಾವಳಿ ಕುರಿತು ಪ್ರತಿಕ್ರಿಯಿಸಿದ ಅವರು, ನಿಷೇಧವಿದ್ದರೂ ಅನಕೃತವಾಗಿ ಪ್ಲಕ್ಸ್ ಹಾಕುವ ಕೆಲಸ ಬೆಳಕಿಗೆ ಬರುತ್ತಿದೆ. ಬ್ಯಾನರ್‍ನಲ್ಲಿ ಇನ್ನುಮುಂದೆ ಯಾರು ಶುಭ ಕೋರುತ್ತಾರೋ ಅವರಿಗೆ ದಂಡ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬ್ಯಾನರ್ ತೆಗೆಯುವ ವೆಚ್ಚವನ್ನು ಅವರಿಂದಲೇ ಭರಿಸಲಾಗುವುದು ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬ್ಯಾನರ್ ಹಾಕುವ ವಿಚಾರ ಕೆಲ ಕಡೆಗಳಲ್ಲಿ ಪ್ಲಕ್ಸ್ , ಬ್ಯಾನರ್ ಹಾಕಲು ಮುಖ್ಯ ಆಯುಕ್ತರು ಅನುಮತಿ ನೀಡಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com