ಬೆಂಗಳೂರು: ಆರ್'ವಿ ಕಾಲೇಜು ಹಾಸ್ಟೆಲ್ ಹೊಸ ಕೋವಿಡ್ ಕ್ಲಸ್ಟರ್!

ರಾಜರಾಜೇಶ್ವರಿನಗರ, ಶ್ರೀನಿವಾಸನಗರದಲ್ಲಿರುವ ಆರ್‌ವಿ ಕಾಲೇಜ್ ಆಫ್ ಆರ್ಕಿಟೆಕ್ಚರ್ ಮತ್ತು ಎಂಜಿನಿಯರಿಂಗ್‌ನ ಹಾಸ್ಟೆಲ್‌ ನಲ್ಲಿ ಕೋವಿಡ್ ಕ್ಲಸ್ಟರ್ ಪತ್ತೆಯಾದ ಹಿನ್ನೆಲೆಯಲ್ಲಿ ಹಾಸ್ಟೆಲ್ ಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ನಗರದಲ್ಲಿ ಕೋವಿಡ್ ಕ್ಲಸ್ಟರ್ ಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜರಾಜೇಶ್ವರಿನಗರ, ಶ್ರೀನಿವಾಸನಗರದಲ್ಲಿರುವ ಆರ್‌ವಿ ಕಾಲೇಜ್ ಆಫ್ ಆರ್ಕಿಟೆಕ್ಚರ್ ಮತ್ತು ಎಂಜಿನಿಯರಿಂಗ್‌ನ ಹಾಸ್ಟೆಲ್‌ ನಲ್ಲಿ ಕೋವಿಡ್ ಕ್ಲಸ್ಟರ್ ಪತ್ತೆಯಾದ ಹಿನ್ನೆಲೆಯಲ್ಲಿ ಹಾಸ್ಟೆಲ್ ಗಳನ್ನು ಸೀಲ್ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ನಗರದಲ್ಲಿ ಕೋವಿಡ್ ಕ್ಲಸ್ಟರ್ ಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ.
     
ಹಾಸ್ಟೆಲ್ ನಲ್ಲಿ ಒಟ್ಟು 13 ಮಂದಿ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಆರ್‌ವಿ ಕಾಲೇಜ್ ಆಫ್ ಆರ್ಕಿಟೆಕ್ಚರ್'ನ ನಾಲ್ವರು ವಿದ್ಯಾರ್ಥಿಗಳು ಹಾಗೂ 9 ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಎಲ್ಲೂ 18-22 ವರ್ಷದೊಳಗಿನವರೇ ಆಗಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಲಕ್ಷಣರಹಿತರಾಗಿದ್ದು, ಹೋಂ ಐಸೋಲೇಷನ್ ನಲ್ಲಿದ್ದಾರೆಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.

“ಕಳೆದ ವಾರ ಕಾಲೇಜಿನಲ್ಲಿ ವಸ್ತುಪ್ರದರ್ಶನವಿತ್ತು. ಈ ಕಾರ್ಯಕ್ರಮದಲ್ಲಿ ಇತರ ಕಾಲೇಜುಗಳ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು. ವಸ್ತುಪ್ರದರ್ಶನದ ಬಳಿಕ ಕೆಲವು ವಿದ್ಯಾರ್ಥಿಗಳಲ್ಲಿ ಜ್ವರ ಮತ್ತು ಶೀತ ಸೇರಿದಂತೆ ಕೋವಿಡ್ ರೋಗಲಕ್ಷಣಗಳು ಪತ್ತೆಯಾಗಿದೆ.

ರೋಗಲಕ್ಷಣದ ವಿದ್ಯಾರ್ಥಿಗಳು ಮತ್ತು ಅವರ ಪ್ರಾಥಮಿಕ ಸಂಪರ್ಕಗಳನ್ನು ಪರೀಕ್ಷಿಸಿದಾಗ, 13 ಮಂದಿಯಲ್ಲಿ ಸೋಂಕು ಇರುವುದು ಪತ್ತೆಯಾಗಿತ್ತು. ಅವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಲಾಗಿದೆ ಮತ್ತು ವರದಿಗಳಿಗಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ 27 ಕ್ಲಸ್ಟರ್‌ಗಳಲ್ಲಿ 21 ಮಹದೇವಪುರ ವಲಯದ ಅಪಾರ್ಟ್‌ಮೆಂಟ್‌, ಆರ್‌ಆರ್‌ನಗರ ವಲಯದಲ್ಲಿ ಒಂದು ಅಪಾರ್ಟ್‌ಮೆಂಟ್ ಮತ್ತು ಒಂದು ಹಾಸ್ಟೆಲ್, ಯಲಹಂಕ ವಲಯದಲ್ಲಿ ಎರಡು ಅಪಾರ್ಟ್‌ಮೆಂಟ್‌ಗಳು ಮತ್ತು ದಾಸನಪುರದಲ್ಲಿ ಎರಡು ಶಾಲೆಗಳಲ್ಲಿ ಪತ್ತೆಯಾಗಿದೆ.

ಈ ನಡುವೆ ನಗರದಲ್ಲಿ ನಿನ್ನೆ 588 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ದೈನಂದಿನ ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.3.8ಕ್ಕೆ ಹೆಚ್ಚಳವಾಗಿದೆ. ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಬಿಬಿಎಂಪಿ ಹೆಚ್ಚಳ ಮಾಡಿದೆ. ಪ್ರಸ್ತುತ ಬಿಬಿಎಪಿ ಪ್ರತೀನಿತ್ಯ 17,000 ಪರೀಕ್ಷೆಗಳನ್ನು ನಡೆಸುತ್ತಿದೆ.

ಮುಂಬೈ ಮತ್ತು ನವದೆಹಲಿಯ ನಂತರ ಬೆಂಗಳೂರು ಮೂರನೇ ಅತಿ ಹೆಚ್ಚು ಸಕ್ರಿಯಗಳನ್ನು ಪ್ರಕರಣಗಳನ್ನು (4,833) ಹೊಂದಿರುವ ನಗರವಾಗಿದೆ. ಬೆಳ್ಳಂದೂರು, ದೊಡ್ಡಾನೆಕುಂದಿ, ಕಾಡುಗೋಡಿ, ವರ್ತೂರು, ಹಗದೂರು, ಹೂಡಿ, ಹೊರಮಾವು, ಎಚ್‌ಎಸ್‌ಆರ್‌ ಲೇಔಟ್‌, ವಿಜ್ಞಾನ ನಗರ ಮತ್ತು ಗರುಡಾಚಾರ್‌ಪಾಳ್ಯ ಹತ್ತು ವಾರ್ಡ್‌ಗಳಲ್ಲಿ ಹೆಚ್ಚು ಸೋಕು ಪ್ರಕರಣಗಳು ವರದಿಯಾಗುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com