ಮಂಗಳೂರು ಸ್ಫೋಟ ಪ್ರಕರಣ: ಆರೋಪಿ ಶಾರೀಕ್, ಸಂಬಂಧಿಕರ ನಿವಾಸದ ಮೇಲೆ ಪೊಲೀಸರ ದಾಳಿ

ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿದಂತೆ ತೀರ್ಥಹಳ್ಳಿಯಲ್ಲಿ ಆರೋಪಿ ಶಾರೀಖ್ ಹಾಗು ಆತನ ಸಂಬಂಧಿಕರ ನಿವಾಸಗಳ ಮೇಲೆ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿದಂತೆ ತೀರ್ಥಹಳ್ಳಿಯಲ್ಲಿ ಆರೋಪಿ ಶಾರೀಖ್ ಹಾಗು ಆತನ ಸಂಬಂಧಿಕರ ನಿವಾಸಗಳ ಮೇಲೆ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ.

ತೀರ್ಥಹಳ್ಳಿಯಲ್ಲಿ ನಾಲ್ಕು ಮನೆಗಳು ಹಾಗು ಸೊಪ್ಪುಗಡ್ಡೆಯಲ್ಲಿರುವ ಶಾರೀಖ್ ನಿವಾಸದಲ್ಲಿ ಶೋಧಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಮಂಗಳೂರು ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ಈ ದಾಳಿ ನಡೆಸಲಾಗಿದೆ ಎನ್ನಲಾಗಿದೆ.

ಮೋಸ್ಟ್ ವಾಂಟೆಡ್‌ ಮತೀನ್, ಬಂಧಿತ ಮಾಜ್ ಗೆ ಸಂಬಂಧಿಸಿದ ಎರಡು ಮನೆಗಳ ಮೇಲೂ ಪೊಲೀಸರು ದಾಳಿ ನಡೆಸಿ ಶೋಧ ನಡೆಸುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಸಾಜಿದ್ ಮತ್ತು ಶಾರೀಕ್ ಸಂಬಂಧಿಯೊಬ್ಬರ ಮನೆಯಲ್ಲೂ ಪರಿಶೀಲನೆ ನಡೆದಿದ್ದು, ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ.

ಆಸ್ಪತ್ರೆಗೆ ಶಾರಿಕ್‌ ಕುಟುಂಬಸ್ಥರು ಭೇಟಿ
ಈ ನಡುವೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ ಶಾರೀಕ್ ನನ್ನು ಕುಟುಂಬಸ್ಥರು ಭೇಟಿ ಮಾಡಿದ್ದಾರೆಂದು ತಿಳಿದುಬಂದಿದೆ.

ಬಾಂಬ್‌ ಸ್ಫೋಟದ ಆರೋಪಿ ತೀರ್ಥಹಳ್ಳಿಯ ಶಾರಿಕ್‌ ಇರಬಹುದು ಎಂಬ ಶಂಕೆಯ ಮೇರೆಗೆ ಪೊಲೀಸರು, ಅವರ ಕುಟುಂಬವರ್ಗದವರನ್ನು ಆಸ್ಪತ್ರೆಗೆ ಕರೆಸಿದ್ದರು.

ಕುಟುಂಬ ವರ್ಗದವರನ್ನು ಪೊಲೀಸರು ಬಿಗಿ ಬಂದೋಬಸ್ತ್‌ನಲ್ಲಿ ಕರೆದೊಯ್ದರು. ಶಾರೀಕ್ ನನ್ನು ಭೇಟಿ ಮಾಡಿದ ಆತನ ಪೋಷಕರು ತಮ್ಮ ಪುತ್ರ ಎಂದು ಖಚಿತಪಡಿಸಿದ್ದಾರೆಂದು ವರದಿಗಳು ತಿಳಿಸಿವೆ.

ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಮಾತನಾಡಿ, ನಾವು ಅನುಮಾನಿಸುತ್ತಿರುವ ವ್ಯಕ್ತಿ ಈತನೇ ಎಂದು ಕುಟುಂಬಸ್ಥರು ಖಚಿತಪಡಿಸಿದರೆ, ಕುಟುಂಬ ಸದಸ್ಯರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತದೆ. ಒಬ್ಬ ಪುರುಷ ಮತ್ತು ಮೂವರು ಮಹಿಳೆ ಕುಟುಂಬದ ಸದಸ್ಯರು ಶಾರೀಕ್ ನನ್ನು ಭೇಟಿ ಮಾಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗದ ತುಂಗಾ ತೀರದಲ್ಲಿ ರಿಹರ್ಸಲ್ ನಡೆಸಿದ್ದ ಆರೋಪಿ

ಶಿವಮೊಗ್ಗ ಹೊರವಲಯದ ತುಂಗಾ ತೀರದಲ್ಲಿ ಸ್ಫೋಟದ ಶಂಕಿತ ಉಗ್ರರು ರಿಹರ್ಸಲ್ ಮಾಡುತ್ತಿದ್ದರು. ಯಾಸೀನ್ ಮತ್ತು ಶಾರಿಕ್ ಟ್ರಯಲ್ ಬ್ಲಾಸ್ಟ್ ಕೂಡಾ ಮಾಡಿದ್ದರು ಎಂದು ತಿಳಿದುಬಂದಿದೆ.

ಈ ಮೂಲಕ ಮಂಗಳೂರು, ಮಲೆನಾಡು ಮತ್ತು ರಾಜ್ಯದಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬ ಬಗ್ಗೆ ಪೊಲೀಸರಿಗೆ ಉಳಿವು ಸಿಕ್ಕಿದೆ.

ಇನ್ನು ಶಿವಮೊಗ್ಗ ಮಾಜ್ ಮತ್ತು ಯಾಸೀನ್ ಬಂಧನ ಬಳಿಕ ನಾಪತ್ತೆಯಾಗಿದ್ದು, ಈ ಇಬ್ಬರ ಬಂಧನದ ಬಳಿಕವೂ ಶಾರಿಕ್ ಭಯ ಪಟ್ಟಿರಲಿಲ್ಲ. ಜಿಹಾದ್ ಕಾರ್ಯಕ್ಕೆ ಮುಂದಾಗಿದ್ದ ಎನ್ನಲಾಗಿದೆ.

ಶಿವಮೊಗ್ಗದಿಂದ ಎಸ್ಕೇಪ್ ಆಗಿ ಶಾರಿಕ್ ಮತ್ತೆ ಸ್ಫೋಟಕಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದ. ಶಾರಿಕ್​ಗೆ ಉಗ್ರ ಸಂಘಟನೆಯ ಸಂಪರ್ಕ ಇತ್ತು ಎಂಬ ಬಗ್ಗೆ ತಿಳಿದು ಬಂದಿದೆ.

ಇದರ ನಡುವೆ ತುಂಗಾ ತೀರದಲ್ಲಿ ಪತ್ತೆಯಾದ ಸ್ಫೋಟಕ ವಸ್ತುಗಳೇ ಆಟೋ ಬ್ಲಾಸ್ಟ್​ನಲ್ಲೂ ಪತ್ತೆಯಾಗಿದೆ. ಶಂಕಿತ ಉಗ್ರ ಶಾರಿಕ್ ಇನ್ನೇನು ಸಂಚು ರೂಪಿಸಿದ್ದ ಎಂಬ ಬಗ್ಗೆ ಪೊಲೀಸರಿಗೆ ಆತಂಕ ಹೆಚ್ಚಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com