ಸಾರ್ವಜನಿಕ ಆಡಳಿತ ಸೂಚ್ಯಂಕ: ರಾಜ್ಯಕ್ಕೆ 6ನೇ ಸ್ಥಾನ, ಮೊದಲ ಸ್ಥಾನ ಗಳಿಸಿದ ಹರಿಯಾಣ

ಶುಕ್ರವಾರ ಬಿಡುಗಡೆಯಾದ ಸಾರ್ವಜನಿಕ ಆಡಳಿತ ಸೂಚ್ಯಂಕದಲ್ಲಿ (ಪಿಎಐ) ಈ ವರ್ಷ ರಾಜ್ಯವು ಆರನೇ ಸ್ಥಾನ ಗಳಿಸಿದೆ. ಈ ಪೈಕಿ ಹರಿಯಾಣ ರಾಜ್ಯ ಮೊದಲ ಸ್ಥಾನ ಗಳಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)

ಬೆಂಗಳೂರು: ಶುಕ್ರವಾರ ಬಿಡುಗಡೆಯಾದ ಸಾರ್ವಜನಿಕ ಆಡಳಿತ ಸೂಚ್ಯಂಕದಲ್ಲಿ (ಪಿಎಐ) ಈ ವರ್ಷ ರಾಜ್ಯವು ಆರನೇ ಸ್ಥಾನ ಗಳಿಸಿದೆ. ಈ ಪೈಕಿ ಹರಿಯಾಣ ರಾಜ್ಯ ಮೊದಲ ಸ್ಥಾನ ಗಳಿಸಿದೆ. ಇದು ರಾಜ್ಯದಲ್ಲಿನ ಆಡಳಿತದ ಬಗ್ಗೆ ಪುರಾವೆಗಳ ಆಧಾರದ ಮೇಲೆ ಒಳನೋಟಗಳನ್ನು ಒದಗಿಸುತ್ತದೆ. ಕೇಂದ್ರ ಸರ್ಕಾರದ ಮಾಹಿತಿಯನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಲಾಗುತ್ತದೆ.

ತಮಿಳುನಾಡು ದ್ವಿತೀಯ, ಕೇರಳ 3ನೇ ಸ್ಥಾನ ಗಳಿಸಿದೆ. ಕರ್ನಾಟಕವು ಒಟ್ಟಾರೆ ಸಾಧನೆಯಲ್ಲಿ 6ನೇ ಸ್ಥಾನ ಗಳಿಸಿದೆ. 2021ನೇ ಸಾಲಿನಲ್ಲಿ ರಾಜ್ಯವು 7ನೇ ಸ್ಥಾನದಲ್ಲಿತ್ತು. ಸಣ್ಣ ರಾಜ್ಯಗಳಲ್ಲಿ ಸಿಕ್ಕಿಂ ಮೊದಲ ಸ್ಥಾನದಲ್ಲಿದೆ.

ರಾಜ್ಯಗಳ ವಿಸ್ತೀರ್ಣ, ಜನಸಂಖ್ಯೆ ಆಧರಿಸಿ ದೊಡ್ಡ ಮತ್ತು ಸಣ್ಣ ರಾಜ್ಯಗಳಾಗಿ ವರ್ಗ ಮಾಡಲಾಗುತ್ತದೆ. ಇವುಗಳನ್ನು ಕೇಂದ್ರ ಸರ್ಕಾರದ ಅಂಕಿಅಂಶಗಳ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. 18 ದೊಡ್ಡ ರಾಜ್ಯಗಳ ಪೈಕಿ ಹರಿಯಾಣ ಅತ್ಯುತ್ತಮ ಆಡಳಿತದ ರಾಜ್ಯವಾಗಿ ಹೊರಹೊಮ್ಮಿದ್ದರೆ, 10 ಸಣ್ಣ ರಾಜ್ಯಗಳಲ್ಲಿ ಸಿಕ್ಕಿಂ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.

ಸಾರ್ವಜನಿಕ ವ್ಯವಹಾರಗಳ ಕೇಂದ್ರ (ಪಿಎಸಿ)ನಿಂದ ನಗರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಸೂಚ್ಯಂಕದ ವರದಿಯನ್ನು ತಜ್ಞರು ಬಿಡುಗಡೆ ಮಾಡಿದರು.

ಪಿಎಸಿ ನಿರ್ದೇಶಕ ಜಿ ಗುರುಚರಣ್ ಮಾತನಾಡಿ, ಆಡಳಿತದ ಗುಣಮಟ್ಟವನ್ನು ಪ್ರದರ್ಶಿಸಲು ಮೌಲ್ಯಗಳು ಮತ್ತು ಶ್ರೇಣಿಗಳನ್ನು ಬಳಸಿಕೊಂಡು ವಸ್ತುನಿಷ್ಠತೆಯನ್ನು ಹೊರಹಾಕುವುದು ವರದಿಯ ಉದ್ದೇಶವಾಗಿದೆ.

ಸೂಚ್ಯಂಕದ ಏಳನೇ ಆವೃತ್ತಿಯಲ್ಲಿ, 2021-22ರ ಅವಧಿಯಲ್ಲಿ ಆಡಳಿತದ ಗುಣಮಟ್ಟವನ್ನು ನಿರ್ಣಯಿಸಲು ಪರಿಕಲ್ಪನಾ ಬದಲಾವಣೆಯನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯಗಳ ಕಾರ್ಯಕ್ಷಮತೆಯನ್ನು ಅಳೆಯಲು ಬಳಸುವ ಸೂಚಕಗಳನ್ನು ಪ್ರಾಥಮಿಕವಾಗಿ ಸಂವಿಧಾನದಿಂದ ಪಡೆಯಲಾಗಿದೆ. ಇದು ನಿಷ್ಪಕ್ಷಪಾತ ಹಾಗೂ ಸ್ವತಂತ್ರ ಪ್ರಯತ್ನ. ವೈಜ್ಞಾನಿಕವಾಗಿ ವರದಿ ತಯಾರಿಸಲಾಗಿದೆ. ರಾಜ್ಯಗಳು ಆಡಳಿತಕ್ಕೆ ಬಳಸುವ ವಿಷಯ ಆಧರಿಸಿ ಮೌಲ್ಯಮಾಪನ ಮಾಡಲಾಗಿದೆ ಎಂದರು.

ಪಿಎಸಿಯ ಮಾಜಿ ಅಧ್ಯಕ್ಷ ಡಾ.ಎ. ರವೀಂದ್ರ ಮಾತನಾಡಿ, ದೇಶದಲ್ಲಿ ರಾಜಕೀಯ ಚರ್ಚೆಯು ಮುಖಾಮುಖಿಯ ತಿರುವು ಪಡೆದುಕೊಂಡಿದೆ. ವಿಶೇಷವಾಗಿ ಹಿಜಾಬ್‌ನ ವಿಚಾರಗಳಿಗೆ ಸಂಬಂಧಿಸಿದಂತೆ, ಯಾವ ದೃಷ್ಟಿಕೋನಗಳು ವಿಭಜಿಸಲ್ಪಟ್ಟಿವೆ ಎಂದು ತೋರುತ್ತದೆ. ಮುಂದಿನ ವರ್ಷ ಸೂಚ್ಯಂಕವು, ಕೇಂದ್ರ-ರಾಜ್ಯ ಸರ್ಕಾರಗಳ ನಡುವಿನ ಸಂಬಂಧ ಮತ್ತು ದೇಶದಲ್ಲಿ ಫೆಡರಲಿಸಂ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪ್ರತಿಬಿಂಬಿಸಬೇಕು ಎಂದು ಅವರು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಹಿರಿಯ ನ್ಯಾಯವಾದಿ ವಿ.ಸುಧೀಶ ಪೈ ಮಾತನಾಡಿ, ಸಂವಿಧಾನವು ರಾಷ್ಟ್ರದ ಜೀವನ ಮತ್ತು ಪ್ರಗತಿಯ ವಾಹಕವಾಗಿದೆ. ನೆರೆಯ ದೇಶಗಳಿಗೆ ಹೋಲಿಸಿ, ಭಾರತವನ್ನು ಮರುಭೂಮಿಯಲ್ಲಿ 'ಓಯಸಿಸ್' ಎಂದು ಕರೆದರು. ಸಾಮಾಜಿಕ-ರಾಜಕೀಯ ಹಕ್ಕುಗಳ ವಿಷಯದಲ್ಲಿ ಭಾರತದ ಪರಿಸ್ಥಿತಿ ಹೆಚ್ಚು ಉತ್ತಮವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com