ಮತ್ತೊಂದು ಗ್ರೇಟ್ ಇಂಡಿಯನ್ ಬಸ್ಟರ್ಡ್ ಸ್ವಾಗತಿಸಲು ರಾಜ್ಯ ಸಿದ್ಧ; ಕರ್ನಾಟಕದಲ್ಲೇ ಆರು ಹಕ್ಕಿಗಳು

ಕರ್ನಾಟಕದಲ್ಲಿ ತುಮಕೂರು, ಚಿತ್ರದುರ್ಗ, ಗದಗ, ಹಾವೇರಿ ಸೇರಿದಂತೆ ಹಲವು ಕಡೆ ಈ ಪಕ್ಷಿಗಳು ಕಂಡುಬಂದಿದ್ದವು. ಆದರೆ ಈಗ ಬಳ್ಳಾರಿಗೆ ಮಾತ್ರ ಸೀಮಿತವಾಗಿವೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪ್ರದೇಶದಲ್ಲಿ ಆರು ಜಿಐಬಿಗಳಿದ್ದು, ರಾಜ್ಯ ಅರಣ್ಯ ಇಲಾಖೆ ಈ ಪಕ್ಷಿಗಳ ರಕ್ಷಣೆ ಹೆಚ್ಚಿಸಿದೆ.
ಗ್ರೇಟ್ ಇಂಡಿಯನ್ ಬಸ್ಟರ್ಡ್ (ಫೋಟೊ-ಇಂದ್ರಜಿತ್ ಘೋರ್ಪಡೆ)
ಗ್ರೇಟ್ ಇಂಡಿಯನ್ ಬಸ್ಟರ್ಡ್ (ಫೋಟೊ-ಇಂದ್ರಜಿತ್ ಘೋರ್ಪಡೆ)
Updated on

ಬೆಳಗಾವಿ: ಅಳಿವಿನಂಚಿನಲ್ಲಿರುವ ದೇಶದ ಪಕ್ಷಿ ಪ್ರಭೇದವಾದ ಗ್ರೇಟ್ ಇಂಡಿಯನ್ ಬಸ್ಟರ್ಡ್ (ಜಿಐಬಿ) ಅನ್ನು ಉಳಿಸಲು ಮಾರ್ಗಸೂಚಿಯನ್ನು ರಚಿಸಲು ನವದೆಹಲಿಯಲ್ಲಿ ಪರಿಸರ ಮತ್ತು ಅರಣ್ಯ ಸಚಿವಾಲಯ ಮಂಗಳವಾರ ಸಭೆ ನಡೆಸಿತು. ಆದಾಗ್ಯೂ, ಕರ್ನಾಟಕ ಸರ್ಕಾರವು ಈ ಕೆಲ ಸಮಯದಿಂದ ಈ ಪಕ್ಷಿಸಂಕುಲದ ಸಂರಕ್ಷಣೆಯಲ್ಲಿ ಕೆಲಸ ಮಾಡುತ್ತಿದೆ.

ದೇಶದಲ್ಲಿ ಕಾಡಿನಲ್ಲಿ ಕೇವಲ 100 ಗ್ರೇಟ್ ಇಂಡಿಯನ್ ಬಸ್ಟರ್ಡ್ ಉಳಿದಿದ್ದು, ಈ ಪೈಕಿ ಆರು ಕರ್ನಾಟಕದಲ್ಲಿವೆ.

ಗ್ರೇಟ್ ಇಂಡಿಯನ್ ಬಸ್ಟರ್ಡ್ ಹುಲ್ಲುಗಾವಲು ಪಕ್ಷಿ ಪ್ರಭೇದಗಳಾಗಿವೆ. ಆದರೆ, ಹುಲ್ಲುಗಾವಲು ಆವಾಸಸ್ಥಾನದ ಅವನತಿ ಮತ್ತು ಬೇಟೆಯ ಕಾರಣದಿಂದಾಗಿ ಈ ಪಕ್ಷಿಗಳ ಸಂಖ್ಯೆಯು ಕಡಿಮೆಯಾಗಲು ಪ್ರಾರಂಭಿಸಿತು. ಈ ಪಕ್ಷಿಗಳು ಈಗ ಅವುಗಳ ಮೂಲ ವಿತರಣಾ ವ್ಯಾಪ್ತಿಯ ಶೇ 90ರಷ್ಟು ನಾಶವಾಗಿವೆ.

ಕರ್ನಾಟಕದಲ್ಲಿ ತುಮಕೂರು, ಚಿತ್ರದುರ್ಗ, ಗದಗ, ಹಾವೇರಿ ಸೇರಿದಂತೆ ಹಲವು ಕಡೆ ಈ ಪಕ್ಷಿಗಳು ಕಂಡುಬಂದಿದ್ದವು. ಆದರೆ ಈಗ ಬಳ್ಳಾರಿಗೆ ಮಾತ್ರ ಸೀಮಿತವಾಗಿವೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪ್ರದೇಶದಲ್ಲಿ ಆರು ಜಿಐಬಿಗಳಿದ್ದು, ರಾಜ್ಯ ಅರಣ್ಯ ಇಲಾಖೆ ಈ ಪಕ್ಷಿಗಳ ರಕ್ಷಣೆ ಹೆಚ್ಚಿಸಿದೆ.

ಕರ್ನಾಟಕದಲ್ಲಿ ಈ ಜಿಐಬಿಗಳ ನಿಗಾ ಮತ್ತು ರಕ್ಷಣೆಯಲ್ಲಿ ತೊಡಗಿರುವ ಅರಣ್ಯ ಇಲಾಖೆಯ ತಂಡವು ಜಿಐಬಿ ಜೋಡಿಯೊಂದು ಮೊಟ್ಟೆ ಇಟ್ಟು ರಕ್ಷಿಸುತ್ತಿರುವುದನ್ನು ಗಮನಿಸಿದೆ. ಪಕ್ಷಿ ಪ್ರಿಯರಿಗೆ ಇದೊಂದು ಸಂತಸದ ಸುದ್ದಿಯಾಗಿದ್ದು, ಹೊಸ ಅತಿಥಿಯ ರಕ್ಷಣೆಗೆ ಅರಣ್ಯ ಇಲಾಖೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ.

ವಿಪರ್ಯಾಸವೆಂದರೆ, ಕರ್ನಾಟಕದಲ್ಲಿ ಉಳಿದಿರುವ ಕೊನೆಯ ಜಿಐಬಿಗಳು ಸಿರಗುಪ್ಪದಲ್ಲಿ ಮೀಸಲಿಟ್ಟ ಸಂರಕ್ಷಿತ ಪ್ರದೇಶಕ್ಕಿಂತ ಹೆಚ್ಚಾಗಿ ಕೃಷಿ ಕ್ಷೇತ್ರಗಳಲ್ಲಿ ಕಂಡುಬರುತ್ತವೆ. ಜಿಐಬಿ ಸಂರಕ್ಷಣಾ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿರುವ ಅರಣ್ಯ ಇಲಾಖೆಯ ಬಳ್ಳಾರಿ ವಿಭಾಗವು ಪಕ್ಷಿಗಳ ಸಂರಕ್ಷಣೆಗೆ ನೆರವಾಗಲು ಅರಣ್ಯ ಪ್ರದೇಶವನ್ನು ಹೆಚ್ಚಿಸುವಂತೆ ಮನವಿ ಮಾಡಿದೆ.

ಸದ್ಯ ಉಳಿದಿರುವ ಜಿಐಬಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಇಲಾಖೆ ಕೈಗೊಂಡಿದೆ. ಪಕ್ಷಿಗಳ ಸಂರಕ್ಷಣೆಯ ಮಹತ್ವದ ಕುರಿತು ಇಲ್ಲಿನ ನಿವಾಸಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ.

ಸಿರಗುಪ್ಪದಲ್ಲಿ ಮೂರು ಕಳ್ಳಬೇಟೆ ತಡೆ ಶಿಬಿರಗಳನ್ನು ಸ್ಥಾಪಿಸಲಾಗಿದೆ. 12 ಮಂದಿ ಅರಣ್ಯ ಸಿಬ್ಬಂದಿಯ ತಂಡ ಪಕ್ಷಿಗಳ ಚಲನವಲನದ ಮೇಲೆ ನಿರಂತರ ನಿಗಾ ಇಡುತ್ತಿದ್ದು, ನಾಯಿ ಹಾಗೂ ಇತರೆ ಪ್ರಾಣಿಗಳಿಂದ ಹಾನಿಯಾಗದಂತೆ ನೋಡಿಕೊಳ್ಳುತ್ತಿದೆ. ಈ ಪಕ್ಷಿಗಳ ರಕ್ಷಣಾ ಪ್ರದೇಶವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇಲ್ಲಿ ಸದ್ಯ ಆರು ಪಕ್ಷಗಳಿಗೆ 200 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ ಎಂದು ಬಳ್ಳಾರಿಯ ಡಿಸಿಎಫ್ ಸಂದೀಪ್ ಸೂರ್ಯವಂಶಿ ವಿವರಿಸಿದರು.

ದೇಶದಲ್ಲಿರುವ 100 ಜಿಐಬಿಗಳಲ್ಲಿ ರಾಜಸ್ಥಾನವು ಅತಿ ಹೆಚ್ಚು GIB ಗಳನ್ನು ಹೊಂದಿದ್ದರೆ, ಗುಜರಾತ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವು ಉಳಿದ ಕೆಲವನ್ನು ಹಂಚಿಕೊಳ್ಳುತ್ತವೆ.

'ಜಿಐಬಿಗಳು ತೆರೆದ ಸ್ಥಳದಲ್ಲಿ ಗೂಡುಕಟ್ಟುತ್ತವೆ. ಆದ್ದರಿಂದ ಅವುಗಳ ಮೊಟ್ಟೆಗಳನ್ನು ರಕ್ಷಿಸಲು ಕಷ್ಟವಾಗುತ್ತದೆ. ಈ ಪಕ್ಷಿಗಳು ಭಾರತದಿಂದ ನಿರ್ನಾಮವಾಗುವ ಮುನ್ನ ಸರ್ಕಾರವು ಕೃತಕ ತಳಿ ಸಂವರ್ಧನೆ ಕೈಗೊಳ್ಳಬೇಕು’ ಎಂದು ವನ್ಯಜೀವಿ ತಜ್ಞರು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com