ಆಮೆಗಳು, ಸರೀಸೃಪಗಳ ರಕ್ಷಣೆಗೆ ಶೀಘ್ರದಲ್ಲೇ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳ ನಿರ್ಮಾಣ

ಆಮೆಗಳು, ಸರೀಸೃಪಗಳು ಮತ್ತು ಇತರ ಪ್ರಾಣಿಗಳನ್ನು ಉಳಿಸುವ ಸಲುವಾಗಿ ಪಶ್ಚಿಮ ಘಟ್ಟಗಳ ವನ್ಯಜೀವಿ ಕಾರಿಡಾರ್‌ಗಳ ಮೂಲಕ ಹಾದುಹೋಗುವ ಸದ್ಯ ಅಸ್ತಿತ್ವದಲ್ಲಿರುವ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳನ್ನು ಸ್ಥಾಪಿಸುವ ಪ್ರಸ್ತಾವನೆ ಬಗ್ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಕೆಲಸ ಮಾಡುತ್ತಿದೆ.
ಜಪಾನ್‌ನಲ್ಲಿ ರೈಲ್ವೆ ಹಳಿ ಅಡಿಯಲ್ಲಿ ನಿರ್ಮಿಸಲಾದ ಯು-ಆಕಾರದ ಕಂದಕದ ಮೂಲಕ ತೆರಳುತ್ತಿರುವ ಆಮೆಗಳು.
ಜಪಾನ್‌ನಲ್ಲಿ ರೈಲ್ವೆ ಹಳಿ ಅಡಿಯಲ್ಲಿ ನಿರ್ಮಿಸಲಾದ ಯು-ಆಕಾರದ ಕಂದಕದ ಮೂಲಕ ತೆರಳುತ್ತಿರುವ ಆಮೆಗಳು.

ಮಂಗಳೂರು: ಆಮೆಗಳು, ಸರೀಸೃಪಗಳು ಮತ್ತು ಇತರ ಪ್ರಾಣಿಗಳನ್ನು ಉಳಿಸುವ ಸಲುವಾಗಿ ಪಶ್ಚಿಮ ಘಟ್ಟಗಳ ವನ್ಯಜೀವಿ ಕಾರಿಡಾರ್‌ಗಳ ಮೂಲಕ ಹಾದುಹೋಗುವ ಸದ್ಯ ಅಸ್ತಿತ್ವದಲ್ಲಿರುವ ರೈಲು ಹಳಿಗಳ ಅಡಿಯಲ್ಲಿ 'ಯು-ಆಕಾರದ ಕಂದಕ'ಗಳನ್ನು ಸ್ಥಾಪಿಸುವ ಪ್ರಸ್ತಾವನೆ ಬಗ್ಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಕೆಲಸ ಮಾಡುತ್ತಿದೆ.

ಮಂಗಳೂರಿನ ವನ್ಯಜೀವಿ ಕಾರ್ಯಕರ್ತ ನಾಗರಾಜ್ ದೇವಾಡಿಗ ಎಂಬುವವರು ಎಂಒಎಫ್‌ಎಫ್‌ಸಿಸಿ ಸಚಿವ ಭೂಪೇಂದ್ರ ಯಾದವ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು, ಪಶ್ಚಿಮ ಘಟ್ಟದಲ್ಲಿ ರೈಲು ಹಳಿ ದಾಟುವಾಗ ಅನೇಕ ಜೀವಿಗಳು ಗಾಯಗೊಂಡು ಅಥವಾ ಸಾಯುತ್ತಿರುವ ಬಗ್ಗೆ ಗಮನ ಸೆಳೆದಿದ್ದಾರೆ. ಅವುಗಳ ರಕ್ಷಣೆಗೆ ನೈಋತ್ಯ ರೈಲ್ವೆಯ ಅಡಿಯಲ್ಲಿ ಬರುವ ಪುತ್ತೂರಿನ ಸಮೀಪದ ಕಬಕ ಮತ್ತು ಹಾಸನ (139 ಕಿಮೀ) ನಡುವಿನಲ್ಲಿ ಯು ಆಕಾರದ ಕಾಂಕ್ರೀಟ್ ಕಂದಕವನ್ನು ನಿರ್ಮಿಸಲು ಒತ್ತಾಯಿಸಿದ್ದಾರೆ.

'ಪಶ್ಚಿಮ ಘಟ್ಟಗಳು ಜಾಗತಿಕವಾಗಿ ಅಪಾಯದಂಚಿನಲ್ಲಿರುವ ಕನಿಷ್ಠ 325 ಪ್ರಭೇದಗಳಿಗೆ ನೆಲೆಯಾಗಿದೆ. ಇದರಲ್ಲಿ 51 ತೀವ್ರವಾಗಿ ಅಳಿವಿನಂಚಿನಲ್ಲಿರುವ ಪ್ರಾಣಿಗಳು ಸೇರಿವೆ. ಇವುಗಳಲ್ಲಿ 28 ಜಾತಿಯ ಸಿಹಿನೀರಿನ ಆಮೆಗಳು (ಅವುಗಳಲ್ಲಿ ಎರಡು ಅಳಿವಿನಂಚಿನಲ್ಲಿವೆ), 91 ಜಾತಿಯ ಹಾವುಗಳು, 75 ಜಾತಿಯ ಏಡಿಗಳು ಮತ್ತು ನಾಲ್ಕು ಜಾತಿಯ ಹಲ್ಲಿಗಳು ಸಂತಾನೋತ್ಪತ್ತಿಗಾಗಿ ಪಶ್ಚಿಮ ಘಟ್ಟಗಳ ಇತರ ಭಾಗಗಳಿಗೆ ವಲಸೆ ಹೋಗುತ್ತವೆ. ಈ ಸಮಯದಲ್ಲಿ ಅವು ಹಳಿಗಳನ್ನು ದಾಟುವಾಗ ಗಾಯಗೊಳ್ಳುತ್ತವೆ ಅಥವಾ ಸಾಯುತ್ತವೆ' ಎಂದು ದೇವಾಡಿಗ ಹೇಳಿದರು.

ಯು-ಆಕಾರದ ಕಾಂಕ್ರೀಟ್ ಕಂದಕಗಳು ಜಪಾನ್‌ನಲ್ಲಿ ಯಶಸ್ವಿಯಾಗಿವೆ

ಕ್ಯೋಟೋ ಮತ್ತು ನಾರಾದಲ್ಲಿ ಆಮೆಗಳನ್ನು ಉಳಿಸಲು ಜಪಾನ್‌ನಲ್ಲಿ ಯು ಆಕಾರದ ಕಾಂಕ್ರೀಟ್ ಕಂದಕಗಳನ್ನು ಯಶಸ್ವಿಯಾಗಿ ನಿರ್ಮಿಸಲಾಗಿದೆ ಎಂದು ನಾಗರಾಜ್ ದೇವಾಡಿಗ ಹೇಳಿದರು. '2015ರ ಏಪ್ರಿಲ್‌ನಲ್ಲಿ ಪಶ್ಚಿಮ ಜಪಾನ್ ರೈಲ್ವೆ ಇಲಾಖೆಯು ಸುಮಾ ಅಕ್ವಾಲೈಫ್ ಸಹಯೋಗದೊಂದಿಗೆ, ಆಮೆಗಳು ಮತ್ತು ಇತರ ಜೀವಿಗಳು ಗಾಯಗೊಳ್ಳದೆ ಅಥವಾ ಸಾವಿಗೀಡಾಗದೆ ಟ್ರ್ಯಾಕ್‌ನ ಇನ್ನೊಂದು ಬದಿಯಲ್ಲಿ ತಮ್ಮ ಗಮ್ಯಸ್ಥಾನಕ್ಕೆ ತೆವಳಲು ಅನುವು ಮಾಡಿಕೊಡುವ ರೈಲ್ವೆ ಹಳಿಗಳ ಅಡಿಯಲ್ಲಿ ಯು-ಆಕಾರದ ಕಾಂಕ್ರೀಟ್ ಕಂದಕಗಳನ್ನು ರಚಿಸಿತು' ಈ ಹಿಂದೆ ಆಮೆಗಳು ತೆವಳಿಕೊಂಡು ಹೋಗುವಾಗ ರೈಲಿಗೆ ಸಿಲುಕಿ ನಜ್ಜುಗುಜ್ಜಾಗುತ್ತಿದ್ದವು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕಬಕ ಪುತ್ತೂರು-ಹಾಸನ ನಡುವಿನ 139 ಕಿಮೀ ರೈಲ್ವೆ ಹಳಿಯಲ್ಲಿ ಪ್ರತಿ 500 ಮೀಟರ್‌ಗೆ ಕಂದಕಗಳನ್ನು ನಿರ್ಮಿಸಬೇಕು ಎಂದು ದೇವಾಡಿಗ ತಿಳಿಸಿದ್ದಾರೆ.

ಈ ಪತ್ರವನ್ನು ಗಮನಿಸಿದ MoEFCC, ಅಗತ್ಯ ಪ್ರಸ್ತಾವನೆಯೊಂದಿಗೆ ಬರಲು ಮತ್ತು ಅದರ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡಲು ಸಚಿವಾಲಯದ ವನ್ಯಜೀವಿ ವಿಭಾಗಕ್ಕೆ ಪತ್ರ ಬರೆದಿದೆ.

ಆದಾಗ್ಯೂ, MoEFCC ಯಿಂದ ಇನ್ನೂ ಯಾವುದೇ ಮಾರ್ಗಸೂಚಿಗಳನ್ನು ಸ್ವೀಕರಿಸಿಲ್ಲ ಎಂದು ನೈಋತ್ಯ ರೈಲ್ವೆಯ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com