ಚರ್ಚ್‌ನಲ್ಲಿ ಅತ್ಯಾಚಾರಕ್ಕೆ ‌ಯತ್ನ; ಕಾಮುಕನಿಂದ ತಪ್ಪಿಸಿಕೊಂಡ ಮಹಿಳೆ, ಪೊಲೀಸರಿಂದ ಆರೋಪಿ ಬಂಧನ!

ಚರ್ಚ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕನನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 
ಅತ್ಯಾಚಾರ (ಸಂಗ್ರಹ ಚಿತ್ರ)
ಅತ್ಯಾಚಾರ (ಸಂಗ್ರಹ ಚಿತ್ರ)
Updated on

ಬೆಂಗಳೂರು: ಚರ್ಚ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕನನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ವಿಲಿಯಮ್ ಪ್ರಕಾಶ್ ಬಂಧಿತ ಆರೋಪಿಯಾಗಿದ್ದು, ಈತ ಕಳೆದ ಸೆಪ್ಟೆಂಬರ್ 10 ರಂದು ಶನಿವಾರ ಶಾಂತಲಾನಗರದಲ್ಲಿ ಬಳಿ ಇರುವ ಸೆಂಟ್ ಚಾಪೆಲ್ ಚರ್ಚ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಲೈಟ್​ ಆಫ್​ ಮಾಡಲು ಹೋಗಿದ್ದರು. ಈ ವೇಳೆ ಹಿಂಬದಿಯಿಂದ ಬಂದ ಕಾಮುಕ  ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ವಿರೋಧ ವ್ಯಕ್ತಪಡಿಸಿದಾಗ ಹಲ್ಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದ. ಆರೋಪಿ ಬೆದರಿಸಿದ್ದ ಕಾರಣಕ್ಕೆ ಮಹಿಳೆ ಹಾಗೂ ಕುಟುಂಬಸ್ಥರು ದೂರು ನೀಡಲು ಹಿಂದೇಟು ಹಾಕಿದ್ದರು. ಕೊನೆಗೆ ವಿಚಾರ ಆಪ್‌ ಪಕ್ಷದ ಮುಖಂಡರಿಗೆ ಗೊತ್ತಾಗಿ ಅವರ ಸಹಾಯದಿಂದ ಮಹಿಳೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು. 

ಚರ್ಚ್‌ನಲ್ಲಿ ಸಂತ್ರಸ್ತ ಮಹಿಳೆ ಪತಿ ಕೆಲಸ ಮಾಡುತ್ತಿದ್ದು, ಅಂದು ಪತಿಯ ಸೂಚನೆ ಮೇರೆಗೆ ಚರ್ಚ್​ನಲ್ಲಿ ಲೈಟ್​ ಆಫ್​ ಮಾಡಲು ಮಹಿಳೆ ಒಬ್ಬರೇ ಅಲ್ಲಿಗೆ ಹೋಗಿದ್ದರಂತೆ. ಈ ವೇಳೆ ವಿಲಿಯಂ ಮಹಿಳೆಯ ಮೇಲೆ ಮೃಗದಂತೆ ಎರಗಿದ್ದ. ಮಹಿಳೆ ಸಹಾಯಕ್ಕಾಗಿ ಕೂಗಾಡಿದಾಗ ಜನ ಬರ್ತಾರೆಂದು ಹೆದರಿದ ವಿಲಿಯಂ ಪ್ರಕಾಶ್, ಗಣೇಶ ಮೆರವಣಿಗೆ ಬರುವಾಗ ಮೆರವಣಿಗೆಯಲ್ಲಿ ಸೇರಿಕೊಂಡು ತಲೆಮರೆಸಿಕೊಂಡಿದ್ದ.‌ ಮಹಿಳೆ ಕೂಗುವುದನ್ನು ಕೇಳಿದ ಆಕೆಯ ಪತಿ ಚರ್ಚ್‌ನತ್ತ ಧಾವಿಸಿ ನೋಡಿದಾಗ ಆರೋಪಿ ಹೊರಗೆ ಓಡಿ ಬರುವುದನ್ನು ಕಂಡರು. ಪತಿ ಅವರನ್ನು ಹಿಡಿಯಲು ಯತ್ನಿಸಿದಾಗ ಆರೋಪಿ ಗಣೇಶ ಮೂರ್ತಿ ಮೆರವಣಿಗೆಗೆ ಓಡಿ ಪರಾರಿಯಾಗಿದ್ದ. ಆರೋಪಿ ಆಗಾಗ ಚರ್ಚೆಗೆ ಬರುತ್ತಿದ್ದುದು ಪತಿಗೆ ಗೊತ್ತಿತ್ತು. ಆರೋಪಿಯನ್ನು ವಿಲಿಯಂ ಪ್ರಕಾಶ್ ಎಂದು ಗುರುತಿಸಲಾಗಿದೆ. 

ಘಟನೆ ನಡೆದ ಸುಮಾರು ಆರು ದಿನಗಳ ನಂತರ ಆಕೆ ದೂರು ದಾಖಲಿಸಿದ್ದು, ಪರಿಣಾಮಗಳ ಬಗ್ಗೆ ಭಯಗೊಂಡಿರುವುದಾಗಿ ಮಹಿಳೆ ಹೇಳಿದ್ದಾರೆ. ಆರೋಪಿಗೆ ಇರಲು ನಿಗದಿತ ಸ್ಥಳವಿಲ್ಲದೇ ಒಂದೆಡೆಯಿಂದ ಮತ್ತೊಂದೆಡೆ ಅಲೆದಾಡುತ್ತಿದ್ದ ಆರೋಪಿಯನ್ನು ಹಿಡಿಯಲು ಪೊಲೀಸರಿಗೆ ಹರಸಾಹಸ ಪಡಬೇಕಾಯಿತು. ಆರೋಪಿ ಬಲಿಪಶುವನ್ನು ಸುಮಾರು 45 ನಿಮಿಷಗಳ ಕಾಲ ಚಾಕು ತೋರಿಸಿ ಬೆದರಿಸಿ ಹಿಡಿದಿದ್ದ. ಆಕೆ ತಳ್ಳಿ ಓಡಲು ಯತ್ನಿಸಿದಾಗ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಅದೃಷ್ಟವಶಾತ್ ಆಕೆಗೆ ಯಾವುದೇ ಹಾನಿಯಾಗಿಲ್ಲ. ಆರೋಪಿ ಆಕೆಯನ್ನು ಹಿಂಬಾಲಿಸಿದನಾದರೂ ಆಕೆಯ ಪತಿಯನ್ನು ನೋಡಿ ಪರಾರಿಯಾಗಿದ್ದ. 

ಆತ ಚರ್ಚ್ ನಿಂದ ಹೊರ ಬರುವ ಹೊತ್ತಿಗೆ ಗಣೇಶನ ವಿಗ್ರಹ ಮೆರವಣಿಗೆಯು ಚರ್ಚ್‌ನಿಂದ ಹಾದುಹೋಗುತ್ತಿತ್ತು. ಇದೇ ಸಂದರ್ಭದಲ್ಲಿ ಆರೋಪಿ ಮೆರವಣಿಗೆಯ ಜನಸಂದಣಿಯಲ್ಲಿ ಸೇರಿಕೊಂಡು ಓಡಿಹೋದ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ಹೇಳಿದರು.  ಸದ್ಯ ಘಟನೆ ನಡೆದು ಒಂದು ತಿಂಗಳ ಬಳಿಕ  ಕಾಮುಕ ವಿಲಿಯಂ ಪ್ರಕಾಶ್​ನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಇತರ ಸೆಕ್ಷನ್‌ಗಳ ಜೊತೆಗೆ ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com