ಎಸಿ ಕಾರು ಬಿಟ್ಟು ರಸ್ತೆಗಿಳಿದು ವಾಸ್ತವ ಸ್ಥಿತಿ ಅರಿಯಿರಿ: ಸಿಎಂಗೆ ನಗರವಾಸಿಗಳ ಆಗ್ರಹ

ಬೆಂಗಳೂರು ಇಷ್ಟು ದಿನ ಟೆಕ್ನಾಲಜಿಗೆ ತುಂಬಾ ಪ್ರಸಿದ್ದಿ ಪಡೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಸ್ತೆಗಳಿಂದ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಈ ರಸ್ತೆ ಗುಂಡಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜೋಕ್ ಹಾಗೂ ಸ್ಟಿಕ್ಕರ್ ಗಳು ಹರಿದಾಡುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬೆಂಗಳೂರು ಇಷ್ಟು ದಿನ ಟೆಕ್ನಾಲಜಿಗೆ ತುಂಬಾ ಪ್ರಸಿದ್ದಿ ಪಡೆದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ರಸ್ತೆಗಳಿಂದ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಈ ರಸ್ತೆ ಗುಂಡಿಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜೋಕ್ ಹಾಗೂ ಸ್ಟಿಕ್ಕರ್ ಗಳು ಹರಿದಾಡುತ್ತಿವೆ. 

ಹದಗೆಟ್ಟ ರಸ್ತೆಗಳಿಂದ ಬೇಸತ್ತು ಹೋಗಿರುವ ನಗರದ ನಿವಾಸಿಗಳು ಬಿಬಿಎಂಪಿ ಆಯುಕ್ತರು ಹಾಗೂ ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಅತ್ಯಾಧುನಿಕ ಎಸಿ ಕಾರುಗಳನ್ನು ಬಿಟ್ಟು ಸ್ವತಃ ರಸ್ತೆಗಳಿದು ವಾಸ್ತವ ಸ್ಥಿತಿ ಅರಿಯುವಂತೆ ಆಗ್ರಹಿಸುತ್ತಿದ್ದಾರೆ. 

“ಮುಖ್ಯಮಂತ್ರಿ, ಪ್ರಧಾನಮಂತ್ರಿಗಳು ನಗರ ರೌಂಡ್ಸ್‌ಗೆ ಹೋದಾಗಲೆಲ್ಲಾ ರಸ್ತೆಗಳಿಗೆ ಡಾಂಬರು ಹಾಕಲಾಗುತ್ತದೆ, ಆದರೆ ಭೇಟಿಯ ನಂತರ ರಸ್ತೆಗಳು ಮತ್ತೆ ಗುಂಡಿಗಳಿಂದ ತುಂಬಿರುತ್ತವೆ. ಬೆಂಗಳೂರು ವಿಶ್ವವಿದ್ಯಾಲಯದ ರಸ್ತೆ ಇದಕ್ಕೊಂದು ಉದಾಹರಣೆಯಾಗಿದೆ. ನಗರದಲ್ಲಿ ಹದಗೆಟ್ಟ ರಸ್ತೆಗಳಿಗೆ ಪರಿಹಾರವೇ ಇಲ್ಲದಂತಾಗಿದೆ, ಪರಿಸ್ಥಿತಿ ಹೀಗಿರುವಾಗ ಬಿಬಿಎಂಪಿ ಅಧಿಕಾರಿಗಳು ಎಂಜಿನಿಯರ್ ಗಳಿಗೆ ರಸ್ತೆಗಳು ಸರಿಪಡಿಸುವ ಕುರಿತು ಬೋಧನೆ ಮಾಡುವಂತೆ ತಜ್ಞರನ್ನು ಆಹ್ವಾನಿಸಿರುವುದು ವಿಪರ್ಯಾಸದ ಸಂಗತಿಯಾಗಿದೆ. 

ರಸ್ತೆಗಳನ್ನು ಗುಂಡಿ ಮುಕ್ತವಾಗಿಸುವುದು ಹೇಗೆ ಎಂಬುದು ಎಂಜಿನಿಯರ್‌ಗಳು ತಿಳಿದಿರಬೇಕು, ಆದರೆ, ಅವರಿಗೇ ತಜ್ಞರಿಂದ ಪಾಠ ಹೇಳಿಸಲು ಬಿಬಿಎಂಪಿ ಮುಂದಾಗಿರುವುದು ನಿಜಕ್ಕೂ ವಿಪರ್ಯಾಸದ ವಿಚಾರ ಎಂದು ನಾಗರೀಕರೊಬ್ಬರು ಹೇಳಿದ್ದಾರೆ. 

ನಗರದ ರಸ್ತೆಗಳ ಸುಧಾರಿಸಲು ಸ್ಪಾಟ್ ಫಿಕ್ಸ್ ನಂತಹ ಕ್ರಮಗಳು ಪರಿಹಾರವನ್ನು ನೀಡುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. 

ಬೆಂಗಳೂರಿನಲ್ಲಿ ಯಾವುದೇ ಕಾರ್ಪೊರೇಶನ್ ಅಥವಾ ಮೇಯರ್ ಇಲ್ಲ, ಚುನಾಯಿತ ಪ್ರತಿನಿಧಿಗಳಿಲ್ಲ ಮತ್ತು ಕಾಮಗಾರಿಗಳು ಮತ್ತು ಸುಧಾರಣೆಗಳಿಗೆ ಜವಾಬ್ದಾರಿಯುತ ಸಚಿವರೂ ಇಲ್ಲ. ಹದಗೆಟ್ಟ ರಸ್ತೆಗಳಿಂದ ಈಗಾಗಲೇ ಹಲವರು ಪ್ರಾಣ ಕಳೆದುಕೊಂಡಿದ್ದರೂ, ಸರ್ಕಾರ ಮಾತ್ರ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳದೆ ಮೌನವಹಿಸಿದೆ. ಹೈಕೋರ್ಟ್ ನಿರ್ದೇಶನಗಳೂ ಕೂಡ ಸರ್ಕಾರದ ಕಿವಿಗೆ ಬೀಳುತ್ತಿಲ್ಲ ಎಂದು ನಗರ ವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಡಲ್ಟ್, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್, ಬಿಬಿಎಂಪಿ, ಟೆಂಡಲ್ ಶ್ಯೂರ್ ರೋಡ್ಸ್ , ವೈಟ್ ಟಾಪಿಂಗ್ ಮತ್ತು ಇತರ ಹಲವು ಯೋಜನೆಗಳು ಹೊರತಾಗಿಯೂ ನಗರವು ಅವ್ಯವಸ್ಥೆಯ ಸ್ಥಿತಿಯಲ್ಲಿದೆ. ಸರ್ಕಾರ ಯಾವುದೇ ಯೋಜನೆ ಕೈಗೆತ್ತಿಕೊಂಡರು ಯಶಸ್ವಿಯಾಗುವ ಕುರಿತು ಜನರು ಪ್ರಾರ್ಥಿಸುತ್ತಿದ್ದಾರೆ. ಇದಕ್ಕೆ ಕಾರಣ ಪ್ರತಿಯೊಂದು ಯೋಜನೆಯನ್ನು ಸ್ವತಂತ್ರವಾಗಿ ಕಾರ್ಯಗತಗೊಳಿಸಲಾಗುತ್ತಿರುವುದು. ಪ್ರತಿ ಏಜೆನ್ಸಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com