ಖಾಲಿ ನಿವೇಶನದಲ್ಲಿ ಭಾರೀ ಪ್ರಮಾಣದ ಕಸ: ತೆರವುಗೊಳಿಸಲು ಮುಂದಾದ ಮಹಿಳೆಯರಿಗೆ ಬೆದರಿಕೆ!

ಬಸವನಗುಡಿಯ ಓಮರ್ ಷರೀಫ್ ರಸ್ತೆಯ ಮೂಲೆಯೊಂದರಲ್ಲಿ ವರ್ಷಗಟ್ಟಲೆ ಸಂಗ್ರಹವಾಗಿದ್ದ ಬೃಹತ್ ಕಸದ ರಾಶಿಯನ್ನು ತೆರವುಗೊಳಿಸಿ ಸ್ವಚ್ಛವಾಗಿಡಬೇಕೆಂದು ಉದ್ದೇಶಿಸಿದ  ಮಹಿಳೆಯರಿಗೆ ಬೆದರಿಕೆ ಹಾಕಲಾಗಿದೆ. 
ನಾಗರೀಕರು
ನಾಗರೀಕರು

ಬೆಂಗಳೂರು: ಬಸವನಗುಡಿಯ ಓಮರ್ ಷರೀಫ್ ರಸ್ತೆಯ ಮೂಲೆಯೊಂದರಲ್ಲಿ ವರ್ಷಗಟ್ಟಲೆ ಸಂಗ್ರಹವಾಗಿದ್ದ ಬೃಹತ್ ಕಸದ ರಾಶಿಯನ್ನು ತೆರವುಗೊಳಿಸಿ ಸ್ವಚ್ಛವಾಗಿಡಬೇಕೆಂದು ಉದ್ದೇಶಿಸಿದ  ಮಹಿಳೆಯರಿಗೆ ಬೆದರಿಕೆ ಹಾಕಲಾಗಿದೆ. 

ಖಾಲಿ ನಿವೇಶನವನ್ನು ಉತ್ತಮ ಸ್ಥಳವನ್ನಾಗಿ ಮಾಡಲು ನಿರ್ಧರಿಸಲಾಗಿತ್ತು. ಅದಕ್ಕಾಗಿ ಪುರುಷರು ಮತ್ತು ಯಂತ್ರಗಳನ್ನು ಬಾಡಿಗೆಗೆ ಪಡೆದುಕೊಳ್ಳಲಾಗಿತ್ತು. ಇನ್ನು ಅಂತಿಮವಾಗಿ ಸೈಟ್‌ಗೆ ಹಕ್ಕು ಸಾಧಿಸುವ 15 ವ್ಯಕ್ತಿಗಳಲ್ಲಿ ಒಬ್ಬರು ತಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 

ವಿಷನ್ 20 ಎಂಬ ಸಮಾಜ ಸೇವಾ ಸಂಸ್ಥೆಯೊಂದರ ಶಾನ್ ಅಹದ್ ಮತ್ತು ಇತರ ಮಹಿಳೆಯರು 25,000 ರೂ.ಗಳನ್ನು ಸಂಗ್ರಹಿಸಿದ್ದರು. ಅಲ್ಲದೆ ಸುಮಾರು ಎರಡು ತಿಂಗಳ ಕಾಲ ಸೈಟ್ ನಲ್ಲಿದ್ದ ಕಸವನ್ನು ತೆರವುಗೊಳಿಸುವುದನ್ನು ಮೇಲ್ವಿಚಾರಣೆ ಮಾಡಿದ್ದರು.

'ಕಸವನ್ನು ಸಂಪೂರ್ಣವಾಗಿ ತೆಗೆದಿದ್ದು, ಜಾಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಮತ್ತೆ ಹಾಳಾಗದಂತೆ ಬೇಲಿ ಹಾಕಲು ಯೋಜನೆ ರೂಪಿಸಿದ್ದೇವೆ. ಈ ವರ್ಷ ಜುಲೈನಲ್ಲಿ ಕಸಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಬಿಬಿಎಂಪಿಗೆ ಲಿಖಿತ ದೂರು ಸಲ್ಲಿಸಿದ್ದೇವು. ಸೈಟ್ ಹಕ್ಕುದಾರರಿಂದ ಇತರರ ಮೂಲಕ ನಮಗೆ ಬೆದರಿಕೆಗಳು ಬರುತ್ತಿವೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ನಿವೇಶನದ ಪಕ್ಕದಲ್ಲೇ ಇರುವ ಜಾಕೀರ್‌ ಅಹಮದ್‌ ಮಾತನಾಡಿ, 'ಒಳಗೆ ಪಾಳು ಬಿದ್ದಿರುವ ಮನೆ ಇದೆ. ಮಾದಕ ದ್ರವ್ಯ ಸೇವನೆ, ಧೂಮಪಾನ, ಮದ್ಯಪಾನ ಸೇರಿದಂತೆ ಎಲ್ಲ ಅನೈತಿಕ ಚಟುವಟಿಕೆಗಳು ಇಲ್ಲಿ ನಡೆಯುತ್ತಿದ್ದು, ಬೇಲಿ ಹಾಕುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಮೂರು ಚಿಕ್ಕ ಮಕ್ಕಳ ತಾಯಿ ತಮ್ಕಿನ್ ಕೌಸರ್ ಅವರು, ಕಸದ ಸ್ಥಳದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಿದೆ. 'ನಾನು ಕೋಲು ಇಲ್ಲದೆ ಮನೆಯಿಂದ ಹೊರಬರುವುದಿಲ್ಲ. ಒಂದು ದಿನ ನಾಯಿಗಳು ಒಂದು ಹುಡುಗಿಯನ್ನು ಅಟ್ಟಿಸಿಕೊಂಡು ಹೋಗಿತ್ತು. ನಾನು ನಾಯಿಯನ್ನು ಓಡಿಸಬೇಕಾಯಿತು. ನನ್ನ ಮಕ್ಕಳು ಹೊರಗೆ ಹೋಗುವಾಗ ನಾನು ನಿರಂತರ ಭಯದಲ್ಲಿರುತ್ತೇನೆ ಎಂದರು. 

ಪರಿಹಾರದ ಭರವಸೆ ನೀಡಿದ ಬಿಬಿಎಂಪಿ:
ನಗರಾಭಿವೃದ್ಧಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಈ ಸಮಸ್ಯೆಯನ್ನು ವಿವರವಾಗಿ ಅಧ್ಯಯನ ಮಾಡಿ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

'ಸೈಟ್ ನಿರ್ವಹಣೆ ಮಾಡದಿರುವುದು ಸ್ವಯಂಕೃತ ಅಪರಾಧವಾಗಿದೆ. ಸಮಸ್ಯೆಯನ್ನು ನಾವು ಶೀಘ್ರದಲ್ಲಿಯೇ ಬಗೆಹರಿಸುತ್ತೇವೆ. ಇನ್ನು ತಮ್ಮ ಮಾನವೀಯ ವರ್ತನೆ ಹಾಗೂ ಮೆಚ್ಚುಗೆಗೆ ಅರ್ಹರಾದ ಮಹಿಳೆಯರು ಯಾವುದೇ ರೀತಿಯಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂಬ ಅಭಯ ನೀಡಿದರು. 

ಆರೋಗ್ಯಕ್ಕೆ ಹಾನಿ ಉಂಟು ಮಾಡುವ ನಿವೇಶನದ ಹಕ್ಕುದಾರರಿಗೆ ದಂಡ ವಿಧಿಸಲು ಕ್ರಮಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com