ಬೆಂಗಳೂರು: ಬೇಗೂರು ಕೆರೆ ಸುತ್ತಮುತ್ತ 33 ಒತ್ತುವರಿಗಳ ತೆರವು

ಬೇಗೂರು ಕೆರೆಯ ಸುತ್ತಮುತ್ತ 81 ಜಾಗಗಳು ಒತ್ತುವರಿಯಾಗಿರುವುದು ಸಮೀಕ್ಷೆಯಲ್ಲಿ  ಬೆಳಕಿಗೆ ಬಂದಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. 
ಬೇಗೂರು ಕೆರೆ
ಬೇಗೂರು ಕೆರೆ

ಬೆಂಗಳೂರು:  ಬೇಗೂರು ಕೆರೆಯ ಸುತ್ತಮುತ್ತ 81 ಜಾಗಗಳು ಒತ್ತುವರಿಯಾಗಿರುವುದು ಸಮೀಕ್ಷೆಯಲ್ಲಿ  ಬೆಳಕಿಗೆ ಬಂದಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. 

ನ್ಯಾಯಾಲಯದ ನಿರ್ದೇಶನದಂತೆ  ಜುಲೈ 26, 2022 ರಂದು ಸರ್ವೆ ನಡೆಸಿ ಅತಿಕ್ರಮಣಗೊಂಡಿರುವ ಕೆರೆಯ ಭಾಗವನ್ನು ಗುರುತಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಬಿಬಿಎಂಪಿ ಕಾರ್ಯಕಾರಿ ಎಂಜಿನಿಯರ್  ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವನಾಥ್ ಶೆಟ್ಟಿ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಅಫಿಡವಿಟ್ ಸಲ್ಲಿಸಿದ್ದಾರೆ. 

ಜುಲೈ 27, 2022 ರಂದು ಎಲ್ಲಾ ಅತಿಕ್ರಮಣದಾರರಿಗೆ/ಅನಧಿಕೃತ ನಿವಾಸಿಗಳಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.  81 ಒತ್ತುವರಿಗಳ ಪೈಕಿ 33 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ,  ಕೆಡವಲಾದ ಅನಧಿಕೃತ ನಿರ್ಮಾಣಗಳ ಛಾಯಾಚಿತ್ರಗಳನ್ನು ಸಹ ಸಲ್ಲಿಸಿದ್ದಾರೆ. 

45 ಅತಿಕ್ರಮಣದಾರರು ತಮ್ಮ ಆಸ್ತಿಗಳಿಗೆ ಸಂಬಂಧಿಸಿದಂತೆ ಯಾವುದೇ  ಕ್ರಮ  ತೆಗೆದುಕೊಳ್ಳದಂತೆ ನಿಯೋಜಿತ ಅಧಿಕಾರಿ (ಕಾರ್ಯನಿರ್ವಾಹಕ ಇಂಜಿನಿಯರ್) ವಿರುದ್ಧ ತಡೆಯಾಜ್ಞೆ ಪಡೆದಿದ್ದಾರೆ ಎಂದು ಕಾರ್ಯಪಾಲಕ ಎಂಜಿನಿಯರ್ ನ್ಯಾಯಾಲಯಕ್ಕೆ ತಿಳಿಸಿದರು. ನಿಷೇಧಾಜ್ಞೆ ಆದೇಶದ ವಿರುದ್ಧವೂ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ.

2014 ರಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಮೂಲಕ ಅತಿಕ್ರಮಣಗಳ ತೆರವು ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ, ಅರ್ಜಿದಾರರು ಅಫಿಡವಿಟ್‌ಗೆ ಯಾವುದೇ ದೂರುಗಳಿದ್ದಲ್ಲಿ ಅವುಗಳನ್ನು ಸಲ್ಲಿಸುವಂತೆ ತಿಳಿಸಿ, ವಿಚಾರಣೆಯನ್ನು ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com