ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 20 ಮೀಟರ್ ಶಿಲ್ಪ ನಿರ್ಮಾಣಕ್ಕಾಗಿ ಪ್ರಸ್ತಾವನೆ ಆಹ್ವಾನಿಸಿದ BIAL

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20-ಮೀಟರ್ ಶಿಲ್ಪ ನಿರ್ಮಾಣಕ್ಕಾಗಿ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಪ್ರಸ್ತಾವನೆ ಆಹ್ವಾನಿಸಿದೆ.

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20-ಮೀಟರ್ ಶಿಲ್ಪ ನಿರ್ಮಾಣಕ್ಕಾಗಿ ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಪ್ರಸ್ತಾವನೆ ಆಹ್ವಾನಿಸಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಬರುವ ಟರ್ಮಿನಲ್ 2 (ಟಿ 2) ನಲ್ಲಿರುವ ಅರಣ್ಯ ವಲಯದಲ್ಲಿ 20 ಮೀಟರ್ ಎತ್ತರದ ಸ್ಮಾರಕ ಶಿಲ್ಪಕ್ಕಾಗಿ ಪ್ರಸ್ತಾವನೆಗಳನ್ನು ಸಲ್ಲಿಸಲು ವಿಮಾನ ನಿಲ್ದಾಣ ನಿರ್ವಾಹಕರಾದ, ಬೆಂಗಳೂರು ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಕಲಾವಿದರು ಮತ್ತು ಕಲಾ ತಂಡಗಳನ್ನು ಆಹ್ವಾನಿಸಿದೆ.

“BLR ವಿಮಾನ ನಿಲ್ದಾಣದಲ್ಲಿ T2 ಕಲಾ ಕಾರ್ಯಕ್ರಮವು ಎರಡು ವಿಷಯಗಳನ್ನು ಪ್ರತಿಬಿಂಬಿಸಲಿದ್ದು, ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿ ಮತ್ತು ನವರಸ - ಭರತನ ನಾಟ್ಯಶಾಸ್ತ್ರದಲ್ಲಿ ಹೈಲೈಟ್ ಮಾಡಲಾದ ಒಂಬತ್ತು ಭಾವನೆಗಳನ್ನು ತೋರಿಸುವ ಬೃಹತ್ ಕಲಾಕೃತಿ ನಿರ್ಮಾಣಕ್ಕೆ BIAL ಮುಂದಾಗಿದೆ. ಮುಖ್ಯ ಟರ್ಮಿನಲ್ ಕಟ್ಟಡ ಮತ್ತು ಬೋರ್ಡಿಂಗ್ ಗೇಟ್‌ಗಳ ನಡುವೆ ಇರುವ ಫಾರೆಸ್ಟ್ ಬೆಲ್ಟ್ ಅಥವಾ ಅರಣ್ಯ ಪ್ರದೇಶದಲ್ಲಿ ಆಯ್ಕೆ ಮಾಡಲಾದ ಕಲಾಕೃತಿಯನ್ನು ನಿಯೋಜಿಸಲಾಗುವುದು ಮತ್ತು ಪ್ರದರ್ಶಿಸಲಾಗುತ್ತದೆ ಎಂದು ಬಿಐಎಎಲ್ ಹೇಳಿದೆ.

ಈ ಕಲಾಕೃತಿಯನ್ನು ನಿರ್ಮಾಣ ಮಾಡುವ ಕಲಾವಿದರಿಗೆ BIAL ಕೆಲ ಷರತ್ತುಗಳನ್ನು ವಿಧಿಸಿದ್ದು, ಕಲಾಕೃತಿ ಮೂಲವಾಗಿರಬೇಕು ಮತ್ತು ಹಿಂದಿನ ಕೃತಿಗಳ ಪ್ರತಿರೂಪವಾಗಿರಬಾರದು. ಇದು ಕರ್ನಾಟಕ ಅಥವಾ ದಕ್ಷಿಣ ಭಾರತದ ಶ್ರೀಮಂತ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯಿಂದ ಪ್ರೇರಿತವಾಗಿರಬೇಕು. ನಿರ್ಮಾಣವಾಗುವ ಕಲಾಕೃತಿಯನ್ನು ಸ್ವತಂತ್ರ ಸಲಹಾ ಸಮಿತಿ ಮತ್ತು BIAL ಪಾಲುದಾರರು ಪರಿಶೀಲಿಸುತ್ತಾರೆ. ಆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.

ಇನ್ನು ಆಸಕ್ತರು ಎಲ್ಲಾ ಸಲ್ಲಿಕೆಗಳನ್ನು ಸೆಪ್ಟೆಂಬರ್ 15 ರೊಳಗೆ artprogramme@bialairport.com ಗೆ ಇಮೇಲ್ ಮಾಡಬೇಕು. ವಿಜೇತರನ್ನು ಅಕ್ಟೋಬರ್ 10 ರೊಳಗೆ ಘೋಷಿಸಲಾಗುತ್ತದೆ. 2020 ರಲ್ಲಿ ಕಲಾ ಕಾರ್ಯಕ್ರಮಕ್ಕಾಗಿ BIAL ನ ಮೊದಲ ಮುಕ್ತ ಕರೆ ಭಾರಿ ಯಶಸ್ವಿಯಾಗಿದೆ ಮತ್ತು 300 ಅರ್ಜಿಗಳನ್ನು ಸ್ವೀಕರಿಸಿದೆ. ಸ್ಮಾರಕ ಶಿಲ್ಪಕ್ಕಾಗಿ ಈ ಎರಡನೇ ಆಹ್ವಾನ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶವನ್ನು ನೀಡುತ್ತದೆ ಎನ್ನಲಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com